ಫೇಸ್ ಬುಕ್ ಪರಿಚಯಿಸಲು ಉದ್ದೇಶಿಸಿರುವ ಐದು ಆಸಕ್ತಿಕರ ವಿಶೇಷತೆಗಳು.

Written By:

ಫೇಸ್ ಬುಕ್ ಇತ್ತೀಚೆಗೆ ಹಲವಾರು ಆಸಕ್ತಿಕರ ವಿಶೇಷತೆಗಳನ್ನು ಪರಿಚಯಿಸಿದೆ ಮತ್ತು ಇನ್ನೂ ಅನೇಕ ವಿಶೇಷತೆಗಳನ್ನು ಸದ್ಯದಲ್ಲೇ ಪರಿಚಯಿಸಲಿದೆ.

ಫೇಸ್ ಬುಕ್ ಪರಿಚಯಿಸಲು ಉದ್ದೇಶಿಸಿರುವ ಐದು ಆಸಕ್ತಿಕರ ವಿಶೇಷತೆಗಳು.

ಅಂತರ್ಜಾಲಕ್ಕೆ ಸಂಪರ್ಕ ಸಿಗುವಂತೆ ಮಾಡಿ ಪ್ರಪಂಚವನ್ನು ಸಂಪರ್ಕಿಸುವ ಯೋಜನೆ ಹಾಕಿಕೊಂಡಿರುವ ಫೇಸ್ ಬುಕ್, ಕಡಿಮೆ ವೇಗದ ಅಂತರ್ಜಾಲವಿರುವ ಕಡೆ ಸರಾಗವಾಗಿ ಫೇಸ್ ಬುಕ್ ಉಪಯೋಗಿಸಲು ಅನುವಾಗುವಂತೆ ಅನೇಕ ವಿಶೇಷತೆಗಳನ್ನು ಹೊರ ತರುತ್ತಿದೆ.

ಓದಿರಿ: ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಅನ್‌ಲಿಮಿಟೆಡ್ ರಿಲಾಯನ್ಸ್ ಜಿಯೋ ಬಾರ್‌ಕೋಡ್‌ ಜೆನೆರೇಟ್ ಹೇಗೆ?

ಫೇಸ್ ಬುಕ್ ಪರೀಕ್ಷಿಸುತ್ತಿರುವ ಹೊಸ ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ತನ್ನ ಬಳಕೆದಾರರಿಗೆ ಸದ್ಯದಲ್ಲೆ ಇದನ್ನು ಬಿಡುಗಡೆಗೊಳಿಸಲಿದೆ ಫೇಸ್ ಬುಕ್.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನಿಧಾನಗತಿಯ ಫೋನುಗಳಿಗೆ ಮೆಸೆಂಜರ್ ಲೈಟ್.

ನಿಧಾನಗತಿಯ ಅಂತರ್ಜಾಲ ಸಂಪರ್ಕ ಹೊಂದಿರುವವರಿಗಾಗಿ ಫೇಸ್ ಬುಕ್ ತನ್ನ ಮೆಸೆಂಜರ್ರಿನ ಲೈಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ತಂತ್ರಾಂಶವು ಹಳೆಯ ಫೋನುಗಳನ್ನು ಉಪಯೋಗಿಸುತ್ತಿರುವವರು ಆ್ಯಂಡ್ರಾಯ್ಡ್ ಅಪ್ ಡೇಟ್ ಮಾಡದೆ ಮೆಸೆಂಜರ್ ಉಪಯೋಗಿಸಲು ನೆರವಾಗಲಿದೆ.

ಫೇಸ್ ಬುಕ್ ಮೆಸೆಂಜರ್ ಲೈಟ್ ಮೆಸೆಂಜರ್ ಆ್ಯಪ್ ನಂತೆಯೇ ಕಾರ್ಯನಿರ್ವಹಿಸಲಿದೆ, ಚಿತ್ರ, ಸಂದೇಶ ಮತ್ತು ಸ್ಟಿಕರ್ ಗಳನ್ನು ಕಡಿಮೆ ಡಾಟಾ ಉಪಯೋಗಿಸಿಕೊಂಡು ಕಳುಹಿಸಬಹುದು.

ಸ್ನಾಪ್ ಚಾಟಿನ ಸ್ಟೋರೀಸ್ ಫೀಚರಿನಂತಿರುವ ಮೆಸೆಂಜರ್ ಡೇ.

ಫೇಸ್ ಬುಕ್ ಸ್ನಾಪ್ ಚಾಟನ್ನು ಅನುಕರಿಸುವುದು ಹೊಸತೇನಲ್ಲ. ಫೇಸ್ ಬುಕ್, ಸ್ನಾಪ್ ಚಾಟಿನ ಸ್ಟೋರೀಸ್ ಫೀಚರಿನಂತಿರುವ ಮೆಸೆಂಜರ್ ಡೇ ಅನ್ನು ಬಿಡುಗಡೆಗೊಳಿಸಲಿದೆ.

ಈ ಆ್ಯಪ್ ಅನ್ನು ಬಳಸಿಕೊಂಡು, ಬಳಕೆದಾರರು ತಮ್ಮ ಫೋಟೋ ಮತ್ತು ವೀಡಿಯೋಗಳನ್ನು ಸ್ನೇಹಿತರು ಹಾಗೂ ಕುಟುಂಬದವರೊಡನೆ ಹಂಚಿಕೊಳ್ಳಬಹುದು, ಅದಕ್ಕೆ ಆಸಕ್ತಿಕರ ಸ್ಟಿಕರ್ ಮತ್ತು ಫಿಲ್ಟರ್ ಗಳನ್ನು ಹಾಕಬಹುದು. ಇದರ ಪ್ರಮುಖ ಲಕ್ಷಣವೆಂದರೆ ಸ್ನಾಪ್ ಚಾಟ್ ನಲ್ಲಿರುವಂತೆ 24 ಘಂಟೆಗಳ ನಂತರ ಪೋಸ್ಟ್ ಅನ್ನು ತೆಗೆದುಬಿಡಲಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್ ಬುಕ್ ಮೆಸೆಂಜರ್ ನಲ್ಲಿ ಪೋಲ್ ಫೀಚರ್ಸ್.

ಫೇಸ್ ಬುಕ್ ತನ್ನ ಮೆಸೆಂಜರ್ ಆ್ಯಪ್ ನಲ್ಲಿ ಇನ್ - ಚಾಟ್ ಪೋಲ್ ಫೀಚರ್ರನ್ನು ಆ್ಯಂಡ್ರಾಯ್ಡ್ ಮತ್ತು ಐ.ಒ.ಎಸ್ ಬಳಕೆದಾರರಿಬ್ಬರಿಗೂ ಸಿಗುವಂತೆ ಮಾಡಲಿದೆ.

ಇದು ಗುಂಪು ಹರಟೆಯಲ್ಲಷ್ಟೇ ಲಭ್ಯ, ಸಿನಿಮಾಗೆ ಹೋಗಲು, ಊಟಕ್ಕೆ ಹೊರಗೋಗಲು ಒಂದು ನಿರ್ಧಾರಕ್ಕೆ ಬರಲು ಇದರಿಂದ ಸುಲಭ.

ಕಂಪೋಸರ್ ನಲ್ಲಿರುವ ಪೋಲ್ ಐಕಾನನ್ನು ಕ್ಲಿಕ್ಕಿಸಿ ಗುಂಪಿನಲ್ಲಿರುವ ಯಾರು ಬೇಕಾದರೂ ಪ್ರಶ್ನೆ ಮತ್ತು ಉತ್ತರಗಳನ್ನು ಟೈಪಿಸಿ ಪೋಲ್ ಸೃಷ್ಟಿಸಬಹುದು.

ಸಂವಹನವನ್ನು ಹೆಚ್ಚಿಸಲು ಟ್ವಿಟರಿನಲ್ಲಿರುವ ವಿಶೇಷತೆಗಳನ್ನು ಪರಿಚಯಿಸಲು ಫೇಸ್ ಬುಕ್ ಉದ್ದೇಶಿಸಿದೆ.

ಪೇಸ್ ಬುಕ್ ಸ್ನಾಪ್ ಚಾಟ್ ಅನ್ನಷ್ಟೇ ಅಲ್ಲ, ಟ್ವಿಟರ್ ಅನ್ನೂ ಕಾಪಿ ಮಾಡುತ್ತಿದೆ! ಸಾಮಾಜಿಕ ಜಾಲತಾಣವು ಸದ್ಯಕ್ಕೆ 'ಗೆಳೆಯರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ' ಎನ್ನುವ ಆಯ್ಕೆಯನ್ನು ಪರೀಕ್ಷಿಸುತ್ತಿದೆ. ಇದು ಟ್ವಿಟರ್ ನ ಟೈಮ್ ಲೈನ್ ಮಾದರಿಯಲ್ಲೇ ಇದೆ.

ಈ ಹೊಸ ವಿಶೇಷತೆಯಿಂದ ಫೇಸ್ ಬುಕ್ ತನ್ನ ಬಳಕೆದಾರರು ಸ್ನೇಹಿತರ ಜೊತೆಗೆ ಹೆಚ್ಚು ಸಂವಹಿಸುವಂತೆ ಮಾಡುತ್ತದೆ ಮತ್ತು ಸ್ನೇಹಿತರ ಪೋಸ್ಟುಗಳು ನ್ಯೂಸ್ ಫೀಡಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೆಸೆಂಜರ್ರಿನ ಚಾಟ್ ಅಸಿಸ್ಟ್ ಫಂಕ್ಷನ್.

ಫೇಸ್ ಬುಕ್ಕಿನ ಹೊಸ "ಚಾಟ್ ಅಸಿಸ್ಟ್ ಫಂಕ್ಷನ್" ಮೂಲಕ ಬಳಕೆದಾರರು ಮೆಸೆಂಜರ್ ಬಳಸಿಕೊಂಡು ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್ ಅಥವಾ ಇತರೆ ಪೇಮೆಂಟ್ ಆಯ್ಜೆಗಳನ್ನು ಬಳಸಿಕೊಳ್ಳಬಹುದು.

ಈ ಹೊಸ ವಿಶೇಷತೆ ಬಂದ ಮೇಲೆ ಬಳಕೆದಾರರು ಥರ್ಡ್ ಪಾರ್ಟಿ ಆ್ಯಪ್ ಗಳಾದ ಪೇಪಾಲ್, ಸ್ಕ್ವೇರ್ ಕ್ಯಾಷ್ ಮತ್ತು ವೆನ್ ಮೋ ಅನ್ನು ಬಳಸುವ ಅವಶ್ಯಕತೆಯಿಲ್ಲ. ಚಾಟ್ ನಲ್ಲೇ ಈ ಸೌಲಭ್ಯ ನೀಡಿರುವುದು ಫೇಸ್ ಬುಕ್ ಬಳಕೆದಾರರ ಸಂಖ್ಯೆಯನ್ನು ಖಂಡಿತವಾಗಿಯೂ ಹೆಚ್ಚಿಸಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Here are 5 features that Facebook is currently testing, and has plans to launch very soon.
Please Wait while comments are loading...
Opinion Poll

Social Counting