ಅರಿಯಲೇಬೇಕಾಗಿರುವ 'ಮೈ ಏರ್‌ಟೆಲ್ ಅಪ್ಲಿಕೇಶನ್‌'ನ ಐದು ಮಹತ್ವಗಳು

Written By:

ನೀವು ಫೋನ್ ಆಪರೇಟರ್‌ನ ಕಚೇರಿಗೆ ಹೋಗಿ ಅಲ್ಲಿ ಬಿಲ್ ಪಾವತಿ ಮಾಡುವ ಕಾಲ ಮರೆಯಾಗಿದೆ ಗೆಳೆಯರೇ, ಏಕೆಂದರೆ ಇದು ಸ್ಮಾರ್ಟ್‌ಫೋನ್ ಯುಗವಾಗಿದ್ದು ನಿಮ್ಮ ಬೆರಳಿನ ಸ್ಪರ್ಶದಲ್ಲೇ ನಿಮ್ಮೆಲ್ಲಾ ಕೆಲಸಗಳನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ಇಂದಿನ ದಿನಗಳಲ್ಲಿ ಟೆಲಿಕಾಂಗಳು ಮೊಬೈಲ್ ಪ್ಲಾಟ್‌ಫಾರ್ಮ್‌ಗೆ ವರ್ಗಾವಣೆಗೊಂಡಿದ್ದು ಅವರುಗಳು ಅಪ್ಲಿಕೇಶನ್‌ಗಳೇ ನಿಮ್ಮೆಲ್ಲಾ ಬಿಲ್ ಪಾವತಿ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಡಲಿದೆ.

ಓದಿರಿ: ಜಿಯೋ ವರ್ಸಸ್ ಏರ್‌ಟೆಲ್ 4ಜಿ, ನಿಮ್ಮ ಮತ ಯಾರಿಗೆ?

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾದ ಏರ್‌ಟೆಲ್ ಅಪ್ಲಿಕೇಶನ್‌ನ ಐದು ಮಹತ್ವ ಅಂಶಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಏರ್‌ಟೆಲ್ ಗ್ರಾಹಕರಾಗಿದ್ದಲ್ಲಿ ನಿಮಗೆ ಈ ಅಪ್ಲಿಕೇಶನ್ ಹೇಗೆ ಉಪಕಾರಿಯಾಗಲಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ಓದಿರಿ: ಆಪಲ್ ಐಫೋನ್ ಖರೀದಿಸುವವರಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅಪ್ಲಿಕೇಶನ್ ಮೂಲಕವೇ ಎಲ್ಲಾ ಸೌಲಭ್ಯಗಳನ್ನು ಕಂಡುಕೊಳ್ಳಿ

ಮೈ ಏರ್‌ಟೆಲ್ ಅಪ್ಲಿಕೇಶನ್‌ನೊಂದಿಗೆ, ನಿಮ್ಮ ಮಾಸಿಕ ಬಿಲ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ನಿಮ್ಮ ಡೇಟಾ ವ್ಯಯಿಸುವಿಕೆ ಮತ್ತು ಬಿಲ್ ಪಾವತಿಯನ್ನು ಅಪ್ಲಿಕೇಶನ್ ಮುಖಾಂತರವೇ ನಿರ್ವಹಿಸಬಹುದಾಗಿದೆ. ಪ್ರಿಪೈಡ್ ರಿಚಾರ್ಜ್ ಮತ್ತು ಡಿಟಿಎಚ್ ರಿಚಾರ್ಜ್ ಮಾಡಲು ಈ ಅಪ್ಲಿಕೇಶನ್‌ನ ನೆರವನ್ನು ನಿಮಗೆ ಬಳಸಬಹುದಾಗಿದೆ. ಆನ್‌ಲೈನ್ ರಿಚಾರ್ಜ್ ಮತ್ತು ಬಿಲ್ ಪಾವತಿಗಳ ಟ್ರಾನ್ಸೇಕ್ಶನ್ ಹಿಸ್ಟ್ರಿಯನ್ನು ನಿಮಗೆ ವೀಕ್ಷಿಸಬಹುದಾಗಿದೆ

ಹೊಸ ಪೋಸ್ಟ್‌ಪೇಡ್, ಡಿಟಿಎಚ್, ಪ್ರಿಪೈಡ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆದುಕೊಳ್ಳಿ

ನೀವು ಹೊಸ ಪ್ರಿಪೈಡ್, ಡಿಟಿಎಚ್ ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕಾಗಿ ಮೈ ಏರ್‌ಟೆಲ್ ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡಿಕೊಂಡರೆ ಆಯಿತು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅಪ್ಲಿಕೇಶನ್‌ನಲ್ಲಿರುವ ವಿವರಗಳನ್ನು ದಾಖಲಿಸಿ ನಿಮಗೆ 24 ಗಂಟೆಯೊಳಗೆ ಏರ್‌ಟೆಲ್ ಸಿಮ್ ಅನ್ನು ವಿತರಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೆಟ್‌ವರ್ಕ್ ಕವರೇಜ್ ಪರಿಶೀಲಿಸಿ

ಮೈ ಏರ್‌ಟೆಲ್ ಅಪ್ಲಿಕೇಶನ್ ಬಳಸಿಕೊಂಡು ನಿಮಗೆ ನೆಟ್‌ವರ್ಕ್ ಕವರೇಜ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಅಂತೆಯೇ ಏರ್‌ಟೆಲ್‌ನ ಪ್ರಸ್ತುತ ಮೊಬೈಲ್ ಟವರ್‌ಗಳು ಮತ್ತು ನಿಮ್ಮ ಸ್ಥಳದಲ್ಲಿರುವ ಭವಿಷ್ಯ ಯೋಜನೆಗಳನ್ನು ಅರಿತುಕೊಳ್ಳಬಹುದಾಗಿದೆ. ಕಂಪೆನಿಯ ನೆಟ್‌ವರ್ಕ್ ಕವರೇಜ್ ಬಗ್ಗೆ ಪ್ರತಿಕ್ರಿಯೆಯನ್ನು ನಿಮಗೆ ಹಂಚಿಕೊಳ್ಳಬಹುದಾಗಿದೆ.

ಲೇಟೆಸ್ಟ್ ಆಫರ್‌ಗಳ ಬಗ್ಗೆ ಮಾಹಿತಿ ಅರಿತುಕೊಳ್ಳಿ

ಮೈ ಏರ್‌ಟೆಲ್ ಅಪ್ಲಿಕೇಶನ್‌ನೊಂದಿಗೆ ಏರ್‌ಟೆಲ್ ನೆಟ್‌ವರ್ಕ್‌ನ ಲೇಟೆಸ್ಟ್ ಆಫರ್‌ಗಳ ಬಗ್ಗೆ ನಿಮಗೆ ಅರಿತುಕೊಳ್ಳಬಹುದಾಗಿದೆ. 50 ನಿಮಿಷಗಳ ಉಚಿತ ಕರೆಯನ್ನು ಏರ್‌ಟೆಲ್ ನೆಟ್‌ವರ್ಕ್‌ನೊಳಗೆಯೇ ಮಾಡಬಹುದಾಗಿದ್ದು ಮೈ ಏರ್‌ಟೆಲ್ ಮೊಬೈಲ್ ಅಪ್ಲಿಕೇಶನ್‌ನ ಹೊಸ ಆವೃತ್ತಿಯೊಂದಿಗೆ ಈ ಘೋಷಣೆಯನ್ನು ಮಾಡಿದೆ. ಬಳಕೆದಾರರಿಗೆ ಉಚಿತವಾಗಿ ಕಂಪೆನಿಯು 2ಜಿಬಿ ಕ್ಲೌಡ್ ಸ್ಟೋರೇಜ್ ಸ್ಪೇಸ್ ಅನ್ನು ಒದಗಿಸುತ್ತಿದೆ. ನೀವು ಗೂಗಲ್ ಪ್ಲೇನಿಂದ ಮೈ ಏರ್‌ಟೆಲ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸೇವೆಗಳನ್ನು ನಿರ್ವಹಿಸಿ ಮತ್ತು ಕಸ್ಟಮರ್ ಕೇರ್ ಸಂಪರ್ಕಿಸಿ

ನಿಮ್ಮೆಲ್ಲಾ ಸೇವೆಗಳನ್ನು ನೆರವೇರಿಸಿಕೊಳ್ಳಲು ಮೈ ಏರ್‌ಟೆಲ್ ಅಪ್ಲಿಕೇಶನ್ ನಿಮಗೆ ಸಹಾಯಕವಾಗಲಿದೆ. ಕಾಲರ್ ಟ್ಯೂನ್ ಆಕ್ಟಿವೇಟ್, ಡಿಆಕ್ಟಿವೇಟ್ ಮಾಡುವುದು, ಟಾರಿಫ್ ಯೋಜನೆಗಳನ್ನು ಕಸ್ಟಮೈಸ್ ಮಾಡುವುದು, ಕ್ರೆಡಿಟ್ ಲಿಮಿಟ್ ಓವರ್ ವ್ಯೂ, ಡೇಟಾ ಬ್ಯಾಲೆನ್ಸ್, ಅಕೌಂಟ್ ಬ್ಯಾಲೆನ್ಸ್, ಬಿಲ್ಸ್ ಮತ್ತು ಅನ್‌ಬಿಲ್ಡ್ ಅಮೌಂಟ್ ಅನ್ನು ನಿರ್ವಹಿಸಲು ನಿಮಗೆ ನೆರವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
here are 5 reasons why you should install My Airtel app if you are an Airtel customer.
Please Wait while comments are loading...
Opinion Poll

Social Counting