ಆತ್ಮ ಸಂಗಾತಿ ಹುಡುಕಲು ವ್ಯಾಲೆಂಟೈನ್ಸ್ ಡೇ ಆಪ್‌ಗಳು

By Suneel
|

ಯೂತ್ಸ್‌ಗಳಿಗೆ ಯಾವ ದಿನಾಂಕ ನೆನಪಿರುತ್ತೋ, ನೆನಪಿರಲ್ವೊ ಗೊತ್ತಿಲ್ಲಾ ಆದರೆ 'ವ್ಯಾಲೆಂಟೈನ್ಸ್ ಡೇ' ಆಚರಣೆ ದಿನ ಮಾತ್ರ ಗೊತ್ತಿರುತ್ತದೆ. ಬಹುಶಃ ಈಗಾಗಲೇ ಹಲವು ಪ್ರೇಮಿಗಳು ತಮ್ಮ ವ್ಯಾಲೆಂಟೈನ್ಸ್ ಡೇ ಹೇಗೆ ಅಚರಿಸೋಣ ಎಂದು ಯೋಚನೆ ಮಾಡ್ತಿದ್ದಾರೆ. ಹಾಗೆ ಸಿಂಗಲ್‌ ಆಗಿರೋರು ತಮ್ಮ ಪ್ರೇಮಿಯನ್ನು ಆಯ್ಕೆ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಇನ್ನು ಕೆಲವರು ಪ್ರೇಮಿಗಳನ್ನು ಹೇಗೆ ಆಯ್ಕೆ ಮಾಡೋದು ಎಂದು ತಿಳಿಯದೇ ಏಕಾಂಗಿತದ ನೋವನ್ನು ಅನುಭವಿಸುತ್ತಿರುವವರು ಇದ್ದಾರೆ. ಇದನ್ನೆಲ್ಲಾ ತಿಳಿದ ಟೆಕ್‌ ತಜ್ಞರು ಹಲವರಿಗೆ ತಮ್ಮ ಪ್ರೇಮಿಗಳನ್ನು (soul met) ಹುಡುಕಲು ಸಹಾಯವಾಗುವಂತೆ ಕೆಲವು ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಓದಿರಿ : ವ್ಯಾಲೆಂಟೈನ್ ಡೇ ದಿನ ಹುಷಾರಾಗಿರಿ

ಬಹುಶಃ ವ್ಯಾಲೆಂಟೈನ್‌ ಆಪ್‌ಗಳನ್ನು ಬಳಸಿದಾಗಲಾದರೂ ಕೆಲವರಿಗೆ ಉತ್ತಮ ಆತ್ಮ ಸಂಗಾತಿ ಸಿಗಬಹುದು. ಅಂತಹ ಆಪ್‌ಗಳು ಯಾವುವು ಎಂದು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ. ವ್ಯಾಲೆಂಟೈನ್‌ ಡೇ ದಿನ ನಿಮ್ಮ ದಿನ ವಿಶೇಷವಾಗಿರುವುದರಲ್ಲಿ ಸಂಶಯವಿಲ್ಲ.

ಟಿಂಡರ್‌ (Tinder)

ಟಿಂಡರ್‌ (Tinder)

ಈ ಆಪ್‌ ಈಗಾಗಲೇ ಪ್ರಪಂಚದಾದ್ಯಂತ ಹೆಚ್ಚು ಪ್ರಖ್ಯಾತವಾದ ಆಪ್‌. ಇದರಲ್ಲಿ ಹಲವು ಪ್ರೊಫೈಲ್‌ಗಳನ್ನು ಬ್ರೌಸ್‌ ಮಾಡಿ ನಿಮ್ಮ ಆಸಕ್ತಿಗರಲ್ಲಿ ಸಂವಹನ ಸಂಪರ್ಕ ಹೊಂದಬಹುದಾಗಿದೆ. ಅಲ್ಲದೇ ಫೇಸ್‌ಬುಕ್‌ನಲ್ಲಿ ಅವರ ಸ್ಥಿರತೆಯನ್ನು ಪರೀಕ್ಷಿಸಬಹುದಾಗಿದೆ. ಅಲ್ಲದೇ ಯಾರು ನಿಮ್ಮನ್ನು ಲೈಕ್‌ ಮಾಡುತ್ತಾರೋ ಅವರೊಂದಿಗೆ ಚಾಟಿಂಗ್‌ ಮಾಡಬಹುದು. ಮತ್ತು ಡೇಟಿಂಗ್‌ ಹೋಗಬಹುದಾಗಿದೆ.

ಓಕೆಕುಪಿಡ್‌ (OKcupid)

ಓಕೆಕುಪಿಡ್‌ (OKcupid)

ಈ ಆಪ್‌ ತುಂಬ ಗಭೀರವಾಗಿ ತಮ್ಮ ಆತ್ಮ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಸಹಾಯವಾಗುತ್ತದೆ. ಈ ಆಪ್‌ ನಿಮಗೆ ಸರಿಹೊಂದುವವರನ್ನು ಸಂಪರ್ಕಿಸಿ ಅವರ ಬಗ್ಗೆ ವಿವರವನ್ನು ನೀಡುತ್ತದೆ. ನಿಮ್ಮ ಪ್ರೋಫೈಲ್‌ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತದೆ. ನೀವು ಉತ್ತರಿಸಬೇಕಾಗುತ್ತದೆ.

 ವೂ  (Woo)

ವೂ (Woo)

ಈ ಅಪ್ಲಿಕೇಶನ್‌ ಆತ್ಮ ಸಂಗಾತಿ ಹಾಗೂ ಆತ್ಮ ಸಂಗಾತರನ್ನು ಮ್ಯಾಚ್‌ ಮಾಡುವ ಆಪ್‌. ಅಲ್ಲದೇ ಯಾರು ನಿಮ್ಮಂತೆಯೇ ಹಲವು ವಿಷಯಗಳಲ್ಲಿ ಆಸಕ್ತಿಹೊಂದಿರುತ್ತಾರೋ ಅಂತಹವರನ್ನು ಭೇಟಿ ಮಾಡಿಸಲು ಸಹ ಸಹಾಯವಾಗುತ್ತದೆ.

 ಟ್ರೂಲಿಮ್ಯಾಡ್ಲಿ (TrulyMadly)

ಟ್ರೂಲಿಮ್ಯಾಡ್ಲಿ (TrulyMadly)

ಟ್ರೂಲಿಮ್ಯಾಡ್ಲಿ ಆಪ್‌ ಹೆಚ್ಚು ಪ್ರಚಾರದಲ್ಲಿರುವ ಆಪ್‌. ಇದು ಅತ್ಯುತ್ತಮ ಸಂಗಾತಿ ಅಥವಾ ಸಂಗಾತನನ್ನು ಫಿಲ್ಟರ್‌ ಮಾಡಿ ಹುಡುಕಿಕೊಡುವ ಆಪ್‌ ಎನ್ನಲಾಗಿದೆ. ಅಲ್ಲದೇ ಬಳಕೆದಾರರು ಆಸಕ್ತಿ ವಿಷಯಗಳನ್ನು ಅಧಿಕವಾಗಿ ಪರೀಕ್ಷಿಸಬಹುದಾಗಿದೆ. ಫೇಸ್‌ಬುಕ್‌ ಮತ್ತು ಲಿಂಕ್ಡಿನ್‌ ತಾಣಗಳಲ್ಲಿ ಆಸಕ್ತಿ ವಿಷಯಗಳನ್ನು ನೋಡಬಹುದಾಗಿದೆ.

 ಬಂಬಲ್‌ (Bumble)

ಬಂಬಲ್‌ (Bumble)

ಈ ಆಪ್‌ ಮಹಿಳೆಯರಿಗಾಗಿ. ಈ ಆಪ್‌ ಮೊದಲು ನಿಮ್ಮ ಡ್ರೀಮ್‌ ಮ್ಯಾನ್‌ ಹುಡುಕುವ ಬಗ್ಗೆ ಕೇಳುತ್ತದೆ. ಈ ಆಪ್‌ ಮಹಿಳೆಯರಿಗೆ ಹುಡುಗನಲ್ಲಿ ಅಪ್ರೋಚ್‌ ಮಾಡಲು ಸಹಾಯವಾಗುತ್ತದೆ. ವಿಶೇಷ ಏನಪ್ಪಾ ಅಂದ್ರೆ 24 ಗಂಟೆಯೊಳಗೆ ಮಸೇಜ್‌ ಮಾಡಿಮುಗಿಸಬೇಕು. ಇಲ್ಲವಾದಲ್ಲಿ ನೀವೂ ಪುನಃ ಹೊಸ ಸಂಪರ್ಕ ತೆಗೆದುಕೊಳ್ಳಬೇಕಾಗುತ್ತದೆ.

ಹಾಟ್‌ ಅಥವಾ ನಾಟ್‌ ( Hot or not)

ಹಾಟ್‌ ಅಥವಾ ನಾಟ್‌ ( Hot or not)

ಹಾಟ್‌ ಅಥವಾ ನಾಟ್‌ ನಿಮ್ಮ ಸುತ್ತಲಿನ ಹಾಟೆಸ್ಟ್‌ ಜನರು ಯಾರು ಎಂದು ತಿಳಿಸುವ ಮತ್ತು ಅವರೊಂದಿಗೆ ಚಾಟ್‌ ಮಾಡಲು ಅನುವಾಗುವ ಆಪ್‌. ಈ ಆಪ್‌ಗೆ ನೀವು ಫೇಸ್‌ಬುಕ್‌ ಮೂಲಕ ಲಾಗಿನ್‌ ಆಗಬೇಕು.

ಹಿಚ್‌ (Hitch)

ಹಿಚ್‌ (Hitch)

ಹಿಚ್‌ ಆಪ್‌ ನಿಮ್ಮ ಸಾಮಾಜಿಕ ಸಂಪರ್ಕದ ಹತ್ತಿರದಲ್ಲಿ ಯಾರು ಇದ್ದಾರೆ ಎಂಬುದನ್ನು ತಿಳಿಸಲು ಸಹಾಯವಾಗುತ್ತದೆ. ಅಲ್ಲದೇ ಆಪ್‌ ಬಳಸಿ ನೀವು ಹೊಸಬರನ್ನು ಹುಡುಕಿ ಅವರನ್ನು ಭೇಟಿ ಮಾಡಲು ಸಹಾಯಕವಾಗುತ್ತದೆ. ಆದರೆ ನಿಮ್ಮ ಆಸಕ್ತಿಗೆ ಹೊಂದುವವರನ್ನು ಮಾತ್ರ ಇದು ಸಲಹೆ ನೀಡುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್ ಮೂಡಿಸಿದ ವ್ಯಾಲೆಂಟೈನ್ ಡೇ ಗಿಫ್ಟ್

ವ್ಯಾಲೆಂಟೈನ್ ಡೇ ದಿನ ಹುಷಾರಾಗಿರಿ

17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
7 Valentine’s Day Apps: Find your special someone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X