ಗೂಗಲ್ ನಲ್ಲಿರುವ ಬೆಸ್ಟ್ ಸೆಲ್ಫಿ ತೋರಿಸಿದರೆ ಸಾಕು, ನಿಮ್ಮ ಸೆಲ್ಫಿ ಸಹ ಹಾಗೆಯೇ ಇರಲಿದೆ..!

ಎಡಿಟಿಂಗ್ ತಂತ್ರಜ್ಞರ ನೆಚ್ಚಿನ ಆಡೋಬ್ ಹೊಸದೊಂದು ಆಪ್ ಬಿಡುಗಡೆ ಮಾಡುವ ಸನಿಹದಲ್ಲಿದ್ದು, ನೀವು ಸ್ಮಾರ್ಟ್‌ಫೋನಿನಲ್ಲಿ ಕ್ಲಿಕಿಸುವ ಸೆಲ್ಫಿಯನ್ನು ಮತ್ತಷ್ಟು ಸುಂದರಗೊಳಿಸಿಸಲಿದೆ.

Written By:

ನೀವು ಸೆಲ್ಫಿ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗೆ ಖಂಡಿತ ಖುಷಿಯನ್ನು ನೀಡಲಿದೆ. ಇತ್ತಿಚೀನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿ ತೆಗೆಯುವುದಕ್ಕಾಗಿಯೇ ಡ್ಯುಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಫೋಟೋ ಎಡಿಟಿಂಗ್ ತಂತ್ರಜ್ಞರ ನೆಚ್ಚಿನ ಆಡೋಬ್ ಹೊಸದೊಂದು ಆಪ್ ಬಿಡುಗಡೆ ಮಾಡುವ ಸನಿಹದಲ್ಲಿದ್ದು, ನೀವು ಸ್ಮಾರ್ಟ್‌ಫೋನಿನಲ್ಲಿ ಕ್ಲಿಕಿಸುವ ಸೆಲ್ಫಿಯನ್ನು ಮತ್ತಷ್ಟು ಸುಂದರಗೊಳಿಸಿಸಲಿದೆ.

ಗೂಗಲ್ ನಲ್ಲಿರುವ ಬೆಸ್ಟ್ ಸೆಲ್ಫಿ ತೋರಿಸಿದರೆ ಸಾಕು, ಸೆಲ್ಫಿ ಸಹ ಹಾಗೆಯೇ

ಈ ಕುರಿತು ಮಾಹಿತಿಯನ್ನು ನೀಡಿರುವ ಆಡೋಬ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯನ್ನು ಬಳಸಿಕೊಂಡು ಸೆಲ್ಪೀಗಳನ್ನು ಸುಂದರಗೊಳಿಸುತ್ತಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿರುವುದಾಗಿ ತಿಳಿಸಿದೆ. ಅಲ್ಲದೇ ಈ ಬಗ್ಗೆ ವಿಡಿಯೋವೊಂದನ್ನು ಯೂಟುಬ್ ನಲ್ಲಿ ಆಪ್‌ಲೋಡ್ ಮಾಡಿದೆ.

ಸದ್ಯ ಬಳಕೆಗೆ ಸಿದ್ಧಗೊಂಡಿರುವ ಆಪ್‌ ಆಪಲ್ ಐಫೋನಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ ಆವೃತ್ತಿಯು ಅಭಿವೃದ್ಧಿ ಹಂತದಲ್ಲಿದೆ. ಈ ಆಪ್ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಡೆಪ್ತ ಆಫ್ ಫೀಲ್ಡ್ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆಯಂತೆ.

ಗೂಗಲ್ ನಲ್ಲಿರುವ ಬೆಸ್ಟ್ ಸೆಲ್ಫಿ ತೋರಿಸಿದರೆ ಸಾಕು, ಸೆಲ್ಫಿ ಸಹ ಹಾಗೆಯೇ

ಓದಿರಿ: ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಂಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಈ ಆಪ್ ನೀವು ತೆಗೆದ ಚಿತ್ರವನ್ನು ತಾನಾಗಿಯೇ ಸುಂದರಗೊಳಿಸಲಿದ್ದು, ಇದಲ್ಲದೇ ಗೂಗಲ್ ನಲ್ಲಿ ನಿಮಗೆ ಮೆಚ್ಚುಗೆಯಾದ ಚಿತ್ರವೊಂದನ್ನು ಆಯ್ಕೆ ಮಾಡಿ ಅದಂತೆ ನಿಮ್ಮ ಫೋಟೋವನ್ನು ಎಡಿಟ್ ಮಾಡುವಂತೆ ಸೂಚನೆ ನೀಡಿದರೆ ಸಾಕು ಅಲ್ಲಿ ಇರುವ ಫ್ರೋಪೆಷನಲ್ ಚಿತ್ರದಂತೆ ನಿಮ್ಮ ಸೆಲ್ಪಿಯನ್ನು ಎಡಿಟ್ ಮಾಡಿಕೊಡಲಿದೆ.

ಅಲ್ಲದೇ ಫೋಟೋಶಾಪ್‌ನಲ್ಲಿ ಫೋಟೋವನ್ನು ಎಡಿಟ್ ಮಾಡಿದಕ್ಕಿಂತಲೂ ಉತ್ತಮವಾಗಿ ನಿಮ್ಮ ಚಿತ್ರವನ್ನು ಎಡಿಟ್ ಮಾಡಿಕೊಡಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬಳಸುತ್ತಿರುವ ಎಡಿಟಿಂಗ್ ಆಪ್‌ ಗಳಿಗೆ ಆಡೋಬ್ ನಿರ್ಮಾಣದ ಈ ಆಪ್ ಸ್ಪರ್ಧೆಯೊಡಲಿದೆ ಎನ್ನುವ ಮಾತು ಸತ್ಯ.

ಓದಿರಿ: ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..! ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
It appears that Adobe is working hard on making selfies taken by smartphones better. to know more visit kannada.gizbot.com
Please Wait while comments are loading...
Opinion Poll

Social Counting