10 ದಿವಸಗಳಲ್ಲಿಯೇ 1 ಕೋಟಿ ಡೌನ್‌ಲೋಡ್!.. ಭೀಮ್ ದಾಖಲೆ! ಮೋದಿ ಹೇಳಿದ್ದೇನು?

ಇಂಟರ್‌ನೆಟ್‌ ಇಲ್ಲದೇ ಉಪಯೋಗಿಸಬಹುದಾದ ಆಪ್‌ಗೆ ಮೊದಲಿನಿಂದಲೂ ಒಳ್ಳೆಯ ರೆಸ್ಪಾನ್ಸ್ ಸಹ ದೊರೆತು ಇದೀಗ ಒಂದು ಕೋಟಿ ಸಂಖ್ಯೆಯಲ್ಲಿ ಡೌನ್‌ಲೋಡ್ ಆಗಿದೆ.

|

ಸರ್ಕಾರದಿಂದ ಬಿಡುಗಡೆ ಮಾಡಿರುವ ಪೇಮೆಂಟ್ ಆಪ್ "ಭೀಮ್" ಕೇವಲ ಹತ್ತು ದಿವಸಗಳಲ್ಲಿಯೇ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಆಗಿ ದಾಖಲೆ ಸೃಷ್ಟಿಸಿದೆ. ನೋಟು ನಿಷೇಧದ ನಂತರ ಡಿಜಿಟಲ್ ವ್ಯವಹಾರಕ್ಕಾಗಿ ಸರ್ಕಾರವೇ ಬಿಡುಗಡೆ ಮಾಡಿದ್ದ ಭೀಮ್ ಆಪ್‌ ಅನ್ನು ಇದೇ ಡಿಸೆಂಬರ್ 30 ರಂದು ಬಿಡುಗಡೆ ಮಾಡಲಾಗಿತ್ತು.

ಪ್ರಧಾನಿಯವರೇ ಬಿಡುಗಡೆಮಾಡಿದ ಭೀಮ್ ಆಪ್ ಕೇವಲ ಮೂರು ದಿವಸಗಳಲ್ಲಿಯೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮೊದಲ ಸ್ಥಾನಕ್ಕೇರಿ ಅಚ್ಚರಿಯನ್ನುಂಟು ಮಾಡಿತ್ತು. ಇಂಟರ್‌ನೆಟ್‌ ಇಲ್ಲದೇ ಉಪಯೋಗಿಸಬಹುದಾದ ಆಪ್‌ಗೆ ಮೊದಲಿನಿಂದಲೂ ಒಳ್ಳೆಯ ರೆಸ್ಪಾನ್ಸ್ ಸಹ ದೊರೆತು ಇದೀಗ ಒಂದು ಕೋಟಿ ಸಂಖ್ಯೆಯಲ್ಲಿ ಡೌನ್‌ಲೋಡ್ ಆಗಿದೆ.

10 ದಿವಸಗಳಲ್ಲಿಯೇ 1 ಕೋಟಿ ಡೌನ್‌ಲೋಡ್!.. ಭೀಮ್ ದಾಖಲೆ! ಮೋದಿ ಹೇಳಿದ್ದೇನು?

ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

ಇನ್ನು ಈ ಬಗ್ಗೆ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು "ಭೀಮ್" ಆಪ್‌ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಆಗಿದ್ದು, ಮೇಕ್ ಇನ್‌ ಇಂಡಿಯಾ ಮತ್ತು ತಂತ್ರಜ್ಞಾನದ ಅತ್ಯುತ್ತಮ ಉಪಯೋಗಕ್ಕೆ ಒಂದು ಉದಾಹರಣೆಯಾಗಿದೆ. ಈ ಮೂಲಕ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ತೊಲಗಿಸಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

10 ದಿವಸಗಳಲ್ಲಿಯೇ 1 ಕೋಟಿ ಡೌನ್‌ಲೋಡ್!.. ಭೀಮ್ ದಾಖಲೆ! ಮೋದಿ ಹೇಳಿದ್ದೇನು?

ಭೀಮ್ ಆಪ್‌ ಬಡವರ ಅಧಿಕಾರ, ಸಣ್ಣ ವ್ಯಾಪಾರಿಗಳು, ರೈತರು, ಆದಿವಾಸಿಗಳು ಮತ್ತು ಕಾರ್ಮಿಕರಂತಹ ಸಹಯಕ್ಕಾಗಿ ಇದೆ. ಅದಕ್ಕಾಗಿಯೇ ಶೋಷಣೆಗೊಳಗಾದವರನ್ನು ಬದುಕಿಸಲು ಜೀವನವನ್ನೆ ಸಮರ್ಪಸಿಕೊಂಡ ಮಹಾನ್‌ಭಾವನ ಹೆಸರನ್ನು ಇಡಲಾಗಿದೆ ಎಂದು ಹೇಳಿದರು. ಇನ್ನು ಆಪ್‌ನಲ್ಲಿ ಫಿಂಗರ್‌ ಪ್ರಿಂಟ್‌ ಮೂಲಕ ವ್ಯವಹರಿಸಬಹುದಾದ ವ್ಯವಸ್ಥೆಯನ್ನು ಮುಂದಿನ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Best Mobiles in India

English summary
most popular Android application BHIM topped the charts on Google's Play Store in the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X