ಫೇಸ್ ಬುಕ್ ಲೈವ್ ಬಳಕೆ ಮತ್ತಷ್ಟು ಸುಲಭ ಮತ್ತು ಸರಳವಾಗಲಿದೆ..!!!!!

ಫೇಸ್ ಬುಕ್ ಲೈವ್ ಗೆ ಸಿಕ್ಕ ಪ್ರತಿಕ್ರಿಯೆಯನ್ನು ಗಮನಿಸಿದ ಫೇಸ್ ಬುಕ್ ಹೊಸ ಹೊಸ ಆಯ್ಕೆಯನ್ನು ಲೈವ್ ನಲ್ಲಿ ಅಳವಡಿಸಲು ಮುಂದಾಗಿದೆ.

By Precilla Dias
|

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಹೊಸದಾಗಿ ಪರಿಚಯಿಸಿದಂತಹ ಫೇಸ್ ಬುಕ್ ಲೈವ್ ಬಳಕೆದಾರರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜನ ಸಾಮಾನ್ಯರು ಆರಾಮವಾಗಿ ಇದನ್ನು ಬಳಸಬಹುದಾಗಿದೆ. ಫೇಸ್ ಬುಕ್ ಲೈವ್ ಗೆ ಸಿಕ್ಕ ಪ್ರತಿಕ್ರಿಯೆಯನ್ನು ಗಮನಿಸಿದ ಫೇಸ್ ಬುಕ್ ಹೊಸ ಹೊಸ ಆಯ್ಕೆಯನ್ನು ಲೈವ್ ನಲ್ಲಿ ಅಳವಡಿಸಲು ಮುಂದಾಗಿದೆ.

ಫೇಸ್ ಬುಕ್ ಲೈವ್ ಬಳಕೆ ಮತ್ತಷ್ಟು ಸುಲಭ ಮತ್ತು ಸರಳವಾಗಲಿದೆ..!!!!!

ಲೈವ್ ವಿಡಿಯೋ ನಡುವೆಯೇ ಸ್ನೇಹಿತರೊಂದಿಗೆ ಲೈವ್ ಚಾಟ್ ಮಾಡಬಹುದಾಗಿದೆ. ಅಲ್ಲದೇ ಇನ್ನೊಬ್ಬರೊಂದಿಗೆ ಲೈವ್ ನಡೆಸುವ ಅವಕಾಶವನ್ನು ಲೈವ್ ವಿಥ್ ಎಂಬ ಆಯ್ಕೆಯೊಂದಿಗೆ ನೀಡಲು ಮುಂದಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೆ ಮುಕ್ತವಾಗಿದೆ.

ಲೈವ್ ಚಾಟ್ ವಿಥ್ ಫ್ರೆಂಡ್ಸ್ ಎಂಬ ಆಯ್ಕೆಯಲ್ಲಿ ಪಬ್ಲಿಕ್ ಬ್ರಾಡ್ ಕಾಸ್ಟ್ ಲೈವ್ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಫ್ರೆಂಡ್ಸ್ ಗಳನ್ನು ಚಾಟ್ ಮಾಡಲು ಇನ್ ವೈಟ್ ಮಾಡಬಹುದಾಗಿದೆ. ಅಲ್ಲದೇ ನೀವು ನೋಡುತ್ತಿರುವ ಲೈವ್ ವಿಡಿಯೋವನ್ನು ಅವರು ನೋಡುತ್ತಿದ್ದರೇ ಅವರು ಸಹ ನಿಮ್ಮೊಂದಿಗೆ ಪ್ರೈವೆಟ್ ಚಾಟ್ ನಲ್ಲಿ ಸೇರಿಸಿಕೊಳ್ಳಬಹುದು.

'AI' ಚಿಪ್ ಅಭಿವೃದ್ದಿ!!..ಹೊಸ ಅವಿಷ್ಕಾರಕ್ಕೆ ಮತ್ತೆ ನಾಂದಿ ಹಾಡಿದ ಆಪಲ್!?

ಸದ್ಯ ಈ ಆಯ್ಕೆಯನ್ನು ಕೆಲವು ದೇಶಗಳ ಬಳಕೆದಾರರಿಗೆ ಈಗಾಗಲೇ ಮುಕ್ತಗೊಳಿಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಇದು ಈಗಾಗಲೇ ಯಶಸ್ವಿಯಾಗಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೂ ಈ ಆಯ್ಕೆಯನ್ನು ನೀಡಲಿದೆ ಎಂಬ ಸುದ್ದಿ ಲಭ್ಯವಾಗಿದೆ.

ಇದರೊಂದಿಗೆ ಲೈವ್ ವಿಥ್ ಎನ್ನು ಹೊಸದೊಂದು ಆಯ್ಕೆಯನ್ನು ನೀಡಲು ಫೇಸ್ ಬುಕ್ ನೀಡಲು ಮುಂದಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರನ್ನು ಫೇಸ್ ಬುಕ್ ಲೈವ್ ಗೆ ಇನ್ ವೈಟ್ ಮಾಡಬಹುದಾಗಿದೆ. ಈಗಾಗಲೇ ಈ ಆಯ್ಕೆಯೂ ಐಎಸ್ಓ ಬಳಕೆದಾರರಿಗೆ ಮುಕ್ತವಾಗಿದೆ.

ಈ ಆಯ್ಕೆಯಲ್ಲಿ ದೂರದಲ್ಲಿರುವ ನಿಮ್ಮ ಸ್ನೇಹಿತರನ್ನು ಲೈವ್ ನಲ್ಲಿ ಇನ್ ವೈಟ್ ಮಾಡಿರಿ. ಅವರು ಸಹ ನಿಮ್ಮ ವಿಡಿಯೋದಲ್ಲಿ ಅವರನ್ನು ಸೇರಿಸಿಕೊಳ್ಳಬಹುದಾಗಿದ್ದು, ನಿಮ್ಮ ವಿಡಿಯೋ ಜೊತೆಗೆ ಅವರ ವಿಡಿಯೋವನ್ನು ಪ್ಲೇ ಮಾಡಬಹುದಾಗಿದೆ. ಶೀಘ್ರವೇ ಈ ಆಯ್ಕೆಗಳು ಫೇಸ್ ಬುಕ್ ಬಳಕೆದಾರರಿಗೆ ದೊರೆಯಲಿದೆ.

Best Mobiles in India

English summary
Facebook has come up with two new features - 'Live Chat With Friends' and 'Live With'.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X