ವಾಟ್ಸಾಪ್‌ನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ, ಪರಿಹಾರ ಇಲ್ಲಿದೆ!

By Suneel
|

ವಾಟ್ಸಾಪ್ ಇಂದು ಜಗತ್ತಿನಾದ್ಯಂತ ದಿನನಿತ್ಯ ದಶಲಕ್ಷಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇಂದು ವಾಟ್ಸಾಪ್ ಸಾಮಾಜಿಕ ತಾಣ ಆಪ್‌ ಬೆಳವಣಿಗೆಯಿಂದ ಬಹುಸಂಖ್ಯಾತ ಜನರು ಆಪ್‌ ಬಳಸುತ್ತಿದ್ದಾರೆ. ಹೆಚ್ಚು ಹೆಚ್ಚು ಜನರು ಬಳಸಿದಂತೆಲ್ಲಾ ಇಂದು ಹಲವರು ವಾಟ್ಸಾಪ್‌ನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಾಟ್ಸಾಪ್‌ನಲ್ಲಿ ಹಲವು ಹೊಸ ಫೀಚರ್‌ಗಳು ಅಭಿವೃದ್ದಿಹೊಂದಿದ್ದು, ಹೊಸ ಫೀಚರ್‌ಗಳಿಂದ ಹಲವರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರು ನೀಡಿದ್ದಾರೆ. ವಾಯ್ಸ್ ಕರೆ ಸಮಸ್ಯೆ, ಗೆಳೆಯರ ಲಾಸ್ಟ್ ಸೀನ್ ಟೈಮ್‌ಸ್ಟ್ಯಾಂಪ್ ನೋಡಲು ಸಾಧ್ಯವಾಗದಂತ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಇಂದಿನ ಲೇಖನದಲ್ಲಿ ವಾಟ್ಸಾಪ್‌ ಬಳಕೆದಾರರ 5 ಸಾಮಾನ್ಯ ಸಮಸ್ಯೆಗಳು ಮತ್ತು ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ವಾಟ್ಸಾಪ್‌ನಲ್ಲಿ 'ಟೈಪಿಂಗ್‌ ಸ್ಟೇಟಸ್‌' ಅನ್ನು ಈ 2 ವಿಧಾನಗಳಿಂದ ಹೈಡ್ ಮಾಡಿ

 ಕಾಂಟ್ಯಾಕ್ಟ್‌ಗಳನ್ನು ಪುನಃ ತೋರಿಸದಿರುವುದು.

ಕಾಂಟ್ಯಾಕ್ಟ್‌ಗಳನ್ನು ಪುನಃ ತೋರಿಸದಿರುವುದು.

ವಾಟ್ಸಾಪ್‌ ಖಾತೆಯು ಕೇವಲ ಮೊಬೈಲ್‌ ಫೋನ್‌ಬುಕ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು ಮಾತ್ರ ವಾಟ್ಸಾಪ್ ಕಾಂಟ್ಯಾಕ್ಟ್‌ನಲ್ಲಿ ಪ್ರದರ್ಶನ ಮಾಡುತ್ತಿದೆ. ಇತರೆ ಕಾಂಟ್ಯಾಕ್ಟ್‌ಗಳನ್ನು ಪುನಃ ಪ್ರದರ್ಶಿಸುವಲ್ಲಿ ಸಮಸ್ಯೆಯಾಗುತ್ತಿದೆ. ಇದು ಸಾಮಾನ್ಯ ಸಮಸ್ಯೆ ಆಗಿದೆ.

ವಾಟ್ಸಾಪ್‌ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಲ್ಲಿ, ವಾಟ್ಸಾಪ್‌ನಲ್ಲಿ ಕಾಂಟ್ಯಾಕ್ಟ್ ಸೆಟ್ಟಿಂಗ್‌ಗೆ ಹೋಗಿ 'Visible ಅಥವಾ 'Viewable' ಎಂದು ಬದಲಿಸಿ.

ವಾಯ್ಸ್ ಕರೆ ಸಮಸ್ಯೆಗಳು

ವಾಯ್ಸ್ ಕರೆ ಸಮಸ್ಯೆಗಳು

ಹಲವರು ವಾಟ್ಸಾಪ್ ವಾಯ್ಸ್ ಕರೆ ಗುಣಮಟ್ಟ ಕಡಿಮೆ, ಕರೆ ಡ್ರಾಪ್‌ಔಟ್‌, ಕರೆ ಮಾಡಲು ಸಾಧ್ಯವಾಗದಿರುವುದು, ಕರೆ ಸ್ವೀಕರಿಸಲು ಸಾಧ್ಯವಾಗದಿರುವ ಬಗ್ಗೆ ದೂರು ಕೇಳಿಬರುತ್ತಿದೆ.

ಈ ಸಮಸ್ಯೆ ಬಗೆಹರಿಸಲು ವಾಟ್ಸಾಪ್‌ ಬಳಕೆದಾರರು ಉತ್ತಮ ಡಾಟಾ ಕನೆಕ್ಷನ್‌ ಅನ್ನು ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ.

ಆಡಿಯೋ ಮೆಸೇಜ್‌ ಕೇಳಲು ಆಗದಿರುವುದು.

ಆಡಿಯೋ ಮೆಸೇಜ್‌ ಕೇಳಲು ಆಗದಿರುವುದು.

ಈ ಸಮಸ್ಯೆಯು ವಾಟ್ಸಾಪ್‌ ಆಧಾರಿತವಾಗಿರುವ ಸಾಮಿಪ್ಯ ಸಂವೇದಕದಿಂದ ಉಂಟಾಗುತ್ತದೆ. ಈ ಸೆನ್ಸಾರ್‌ ಆಕ್ಟಿವೇಟ್‌ ಆದಲ್ಲಿ ಆಡಿಯೋ ಜೋರಾಗಿ ಕೇಳುವುದಿಲ್ಲ.

ಈ ಸಮಸ್ಯೆಗೆ ಪರಿಹಾರವಾಗಿ, ಆಡಿಯೋ ಪ್ಲೇ ಜೋರಾಗಿ ಕೇಳಿಸಲು ಬಳಕೆದಾರರು ಫೋನ್ ಅನ್ನು ಮುಖದಿಂದ ಸ್ವಲ್ಪ ದೂರ ಹಿಡಿದು ಸಾಮಾನ್ಯ ಸ್ಪೀಕರ್‌ನಲ್ಲಿ ಜೋರಾಗಿ ಕೇಳಿಸಿಕೊಳ್ಳಬಹುದು.

ವೀಡಿಯೊ ಮತ್ತು ಫೋಟೋ ಡೌನ್‌ಲೋಡ್‌ ಆಗದಿರುವುದು

ವೀಡಿಯೊ ಮತ್ತು ಫೋಟೋ ಡೌನ್‌ಲೋಡ್‌ ಆಗದಿರುವುದು

ಈ ಸಮಸ್ಯೆ ಬಗೆಹರಿಸಲು ವಾಟ್ಸಾಪ್‌ ಬಳಕೆದಾರರು Settings>>Data Usage ಗೆ ಹೋಗಿ ಮೀಡಿಯ ಆಟೋ ಡೌನ್‌ಲೋಡ್‌ ಆಪ್ಶನ್‌ ಎನೇಬಲ್‌ ಆಗಿದೆಯೇ ಎಂದು ಚೆಕ್ ಮಾಡಿ. ಎನೇಬಲ್‌ ಮಾಡಿ. ಇಂಟರ್ನೆಟ್ ಕನೆಕ್ಷನ್‌ ವರ್ಕ್‌ ಆಗುತ್ತಿದೆಯೇ ಎಂಬುದನ್ನು ಗಮನಿಸಿ.

ಲಾಸ್ಟ್‌ ಸೀನ್‌ ನೋಡಲು ಸಾಧ್ಯವಾಗದಿರುವುದು

ಲಾಸ್ಟ್‌ ಸೀನ್‌ ನೋಡಲು ಸಾಧ್ಯವಾಗದಿರುವುದು

ಹಲವರ ದೂರು ಎಂದರೆ ತಮ್ಮ ಸ್ನೇಹಿತರ ಲಾಸ್ಟ್ ಸೀನ್ ಟೈಮ್‌ಸ್ಟ್ಯಾಂಪ್‌ನಲ್ಲಿ ಕಾಣದಿರುವುದು.

ಕೇವಲ ಒಬ್ಬ ಸ್ನೇಹಿತರ ಲಾಸ್ಟ್‌ ಸೀನ್‌ ಪ್ರದರ್ಶನವಾಗದಿದ್ದಲ್ಲಿ, ಅವರು ಲಾಸ್ಟ್ ಸೀನ್‌ ಅನ್ನು ಡಿಸೇಬಲ್‌ ಮಾಡಿದ್ದಾರೆ ಎಂದರ್ಥ. ಅವರು ತಮ್ಮ ಲಾಸ್ಟ್‌ ಸೀನ್‌ ಅನ್ನು ಇತರರಿಗೆ ಪ್ರದರ್ಶಿಸಲು ಇಷ್ಟವಿಲ್ಲ ಎಂದರ್ಥ.

Best Mobiles in India

English summary
Have a problem with WhatsApp? Here are the solutions. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X