ಟ್ರೂಕಾಲರ್ ಆಪ್‌ನಲ್ಲಿ ನಂಬರ್ ರಿಮೂವ್‌ ಮಾಡಲು ಈ ಹಂತಗಳನ್ನು ಪಾಲಿಸಿ

By Suneel
|

ಸ್ಮಾರ್ಟ್‌ಫೋನ್‌ನಲ್ಲಿನ ಟ್ರೂಕಾಲರ್‌ ಆಪ್‌ ಅನ್ನು ಬಹುಸಂಖ್ಯಾತರು ಅಪರಿಚಿತ ಮೊಬೈಲ್‌ ನಂಬರ್‌ ಯಾರದ್ದು ತಿಳಿಯಲು, ಸ್ಪ್ಯಾಮ್ ಮತ್ತು ಇತರೆ ಚಟುವಟಿಕೆಗಳಿಗಾಗಿ ಬಳಸುತ್ತಾರೆ. ಅಂದಹಾಗೆ ಪ್ರಾರಂಭಿಕವಾಗಿ ಟ್ರೂಕಾಲರ್ ಆಪ್ ಎಲ್ಲಾ ಮೊಬೈಲ್ ವೇದಿಕೆಗಳಲ್ಲಿ ಮತ್ತು ಡೆಸ್ಕ್‌ಟಾಪ್‌ಗಳಲ್ಲೂ ಲಭ್ಯವಿದ್ದು, ಕರೆ ಮಾಡಿದ ಅಪರಿಚಿತರ ಸಂಪರ್ಕ ವಿವರಗಳನ್ನು ನೀಡುತ್ತದೆ.

ಟ್ರೂಕಾಲರ್ ಆಪ್‌ನಲ್ಲಿ ನಂಬರ್ ರಿಮೂವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ಟ್ರೂಕಾಲರ್ ಆಪ್‌ ಪ್ರಪಂಚದಾದ್ಯಂತದ ಎಲ್ಲರ ಮೊಬೈಲ್‌ ನಂಬರ್‌ಗಳ ಬೃಹತ್‌ ಡಾಟಾಬೇಸ್ ಅನ್ನು, ದಶಲಕ್ಷಗಟ್ಟಲೇ ಸ್ಮಾರ್ಟ್‌ಫೋನ್‌ಗಳಿಂದ ಸಂಗ್ರಹ ಮಾಡಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಟ್ರೂಕಾಲರ್‌ ಆಪ್‌ ಹೊಂದಿಲ್ಲದಿದ್ದರೂ ಪರವಾಗಿಲ್ಲ, ಆದರೆ ಅವರ ನಂಬರ್‌ ವಿವರಗಳು ಮಾತ್ರ ಟ್ರೂಕಾಲರ್‌ ಆಪ್‌ನಲ್ಲಿ ಸಂಗ್ರಹವಾಗಿರುತ್ತದೆ. ನಿಮ್ಮ ಸುತ್ತಮುತ್ತಲ ವೃತ್ತದ ಯಾರಾದರೂ ನಿಮ್ಮ ನಂಬರ್‌ ಅನ್ನು ಟ್ರೂಕಾಲರ್‌ ಆಪ್‌ನಲ್ಲಿ ಸ್ಟೋರ್‌ ಮಾಡಿರುತ್ತಾರೆ. ಈ ಕಾರಣದಿಂದ ಆಪ್‌ ನಿಮ್ಮ ನಂಬರ್ ಅನ್ನು ಆಕ್ಸೆಸ್‌ ಮಾಡಲು ಸಹಾಯಕವಾಗಿದೆ.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

ಟ್ರೂಕಾಲರ್‌ ಆಪ್‌ನಿಂದ ಕೆಲವರಿಗೆ ಗೊಂದಲಮಯ ಸಮಸ್ಯೆಗಳು ಉಂಟಾಗುವಲ್ಲಿ ಸಂದೇಹವಿಲ್ಲ. ಈ ಆಪ್‌ ನಿಮ್ಮ ನಂಬರ್‌ ವಿವರ ನೀಡುವುದರಿಂದ ನಿಮ್ಮ ವಿಳಾಸ ಸಾರ್ವಜನಿಕವಾಗಬಹುದು. ಆದ್ದರಿಂದ ಟ್ರೂಕಾಲರ್‌ ಆಪ್‌ನಿಂದ ನಿಮ್ಮ ನಂಬರ್‌ ಅನ್ನು ಖಚಿತವಾಗಿ ತೆಗೆಯಬೇಕಿರುತ್ತದೆ. ನೀವು ಬಳಸುತ್ತಿರುವ ಟ್ರೂಕಾಲರ್‌ ಆಪ್‌ನಲ್ಲಿ ನಿಮ್ಮ ನಂಬರ್ ಅನ್ನು ವೈಯಕ್ತಿಕ ಹಿತದೃಷ್ಟಿಯಿಂದ ತೆಗೆಯುವ ಫೀಚರ್ ಇದೆ.

ಟ್ರೂಕಾಲರ್ ಆಪ್‌ನಲ್ಲಿ ನಂಬರ್ ರಿಮೂವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ನಿಮ್ಮ ನಂಬರ್‌ ಅನ್ನು ಡಿಲೀಟ್ ಮಾಡಲು, ಟ್ರೂಕಾಲರ್‌ನಲ್ಲಿನ ನಿಮ್ಮ ಖಾತೆಯನ್ನು ಡಿಆಕ್ಟಿವೇಟ್‌ ಮಾಡಿ ನಂಬರ್‌ ರಿಮೂವ್ ಮಾಡಬೇಕಿರುತ್ತದೆ. ಟ್ರೂಕಾಲರ್ ಆಪ್‌ನಿಂದ ನಿಮ್ಮ ನಂಬರ್‌ ಮತ್ತು ವಿವರಗಳನ್ನು ರಿಮೂವ್‌ ಮಾಡುವ ಹಂತಗಳನ್ನು ಕೆಳಗಿನ ಹಂತಗಳನ್ನು ಓದಿ ತಿಳಿಯಿರಿ.

ಟ್ರೂಕಾಲರ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿ
ಹಂತ 1: ಆಪ್‌ ಓಪನ್‌ ಮಾಡಿ
ಹಂತ 2: ಓಪನ್‌ ಆದ ಆಪ್‌ ಡಿಸ್‌ಪ್ಲೇಯಲ್ಲಿ 3 ಹಾರಿಜಂಟಲ್ ಲೈನ್‌ ಮೇಲೆ ಟ್ಯಾಪ್‌ ಮಾಡಿ
ಹಂತ 3: Settings>>About ಗೆ ಹೋಗಿ
ಹಂತ 4: Deacitvate' ಆಪ್ಶನ್‌ ಮೇಲೆ ಟ್ಯಾಪ್ ಮಾಡಿ 'Yes' ಕ್ಲಿಕ್ ಮಾಡಿ

ನಿಮ್ಮ ನಂಬರ್‌ ಅನ್ನು ಟ್ರೂಕಾಲರ್ ಆಪ್‌ನಿಂದ ತೆಗೆಯಿರಿ
ಹಂತ 1: ಟ್ರೂಕಾಲರ್‌ನಲ್ಲಿ 'Unlist page' ಗೆ ಹೋಗಿ
ಹಂತ 2: ದೇಶದ ಕೋಡ್‌ನೊಂದಿಗೆ ನಿಮ್ಮ ಮೊಬೈಲ್ ನಂಬರ್‌ ಅನ್ನು ಎಂಟರ್‌ ಮಾಡಿ. ಉದಾಹರಣೆಗೆ-91 1234567890
ಹಂತ 3: ಅನ್‌ಲೀಸ್ಟ್‌ ಮಾಡಲು ಯಾವುದಾದರೂ ಆಪ್ಶನ್‌ ಆಯ್ಕೆ ಮಾಡಿ
ಹಂತ 4: ಪರಿಶೀಲನೆ ಬಾಕ್ಸ್‌ನಲ್ಲಿ ನಂಬರ್‌ಗಳನ್ನು ಅಕ್ಷರಗಳಲ್ಲಿ ಟೈಪಿಸಿ
ಹಂತ 5: 'Unlist' ಕ್ಲಿಕ್ ಮಾಡಿ

ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ

Best Mobiles in India

Read more about:
English summary
How to Remove Your Number From Truecaller App. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X