ಐಫೋನ್ ಗಾಗಿ ಇರುವ ಇನ್‍ಸ್ಟಾಗ್ರಾಮ್ ಲೈವ್ ಚಿತ್ರ ಮತ್ತು ವಿಶಾಲ ಸರಣಿಯ ಬಣ್ಣಗಳಿಗೆ ಬೆಂಬಲ ಪಡೆದಿದೆ

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಗೆ ಇನ್‍ಸ್ಟಾಗ್ರಾಮ್ ನ 2 ಹೊಸ ಫೀಚರ್‍ಗಳಾದ ಲೈವ್ ಚಿತ್ರ ಮತ್ತು ವಿಶಾಲ ಸರಣಿಯ ಬಣ್ಣಗಳು ಬೆಂಬಲ ಪಡೆದಿದೆ. ಈ ಫೀಚರ್ಸ್ ಗಳು ಸಧ್ಯಕ್ಕೆ ಕೇವಲ ಈ ಎರಡು ಮೊಬೈಲ್ ಗಳಿಗೆ ಮಾತ್ರ ಲಭ್ಯ.

By Prateeksha
|

ಆಪಲ್ ಐಫೋನ್ 7 ಬಿಡುಗಡೆ ಸಮಾರಂಭ ನೆನಪಿದೆಯಾ? ನೆನಪಿದೆ ಎಂದಾದಲ್ಲಿ ಐಯಾನ್ ಸ್ಪಾಲ್ಟರ್, ಇನ್‍ಸ್ಟಾಗ್ರಾಮ್ ಡಿಜೈನ್ ನ ಮುಖ್ಯ ಕೆಲ ತುಣುಕು ತೋರಿಸಿದ್ದರು ಈಗ ಫೋಟೊ ಶೇರಿಂಗ್ ಆಪ್ ನ ಫೀಚರ್ ಬಿಡುಗಡೆಯಾಗಿದೆ. ಡಿಜೈನ್ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆ ಮಾಡುವ ಜೊತೆಗೆ ಕಂಪನಿ ಲೈವ್ ಚಿತ್ರಗಳು ಮತ್ತು ವಿಶಾಲ ಸರಣಿಯ ಬಣ್ಣಗಳನ್ನು ಕೂಡ ನೀಡುವ ಭರವಸೆ ನೀಡಿತು.

ಐಫೋನ್ ಗಾಗಿ ಇರುವ ಇನ್‍ಸ್ಟಾಗ್ರಾಮ್  ಲೈವ್ ಚಿತ್ರ

ಅಂದಹಾಗೆ, ಆ ದಿನ ಇಂದು ಬಂದಿದೆ. ಎರಡೂ ಫೀಚರ್ಸ್ ಗಳು ಐಫೋನ್ 7 ಮತ್ತು ಐಫೋನ್ ಪ್ಲಸ್ ಬಳಕೆದಾರರಿಗೆ ಈಗ ಲಭ್ಯವಿದೆಯೆಂದು ಇನ್‍ಸ್ಟಾಗ್ರಾಮ್ ನ ಸಹ ಸಂಸ್ಥಾಪಕರಾದ ಮೈಕ್ ಕ್ರಿಗೆರ್ ರವರು ಮೌನವಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಇದಕ್ಕಾಗಿ ಫೋನನ್ನು ಅಪ್‍ಡೇಟ್ ಮಾಡುವ ಅವಶ್ಯಕತೆಯಿಲ್ಲವೆಂದು ಹೇಳಿದರು.

ಇದರ ಜೊತೆಗೆ, ಈಗ ಬಂದ ಸುದ್ದಿಯ ಪ್ರಕಾರ ಆಪ್ ಲೈವ್ ಚಿತ್ರಗಳನ್ನು( ಬೂಮರಾಂಗ್ ಆಗಿ ಪರಿವರ್ತನೆಗೊಳ್ಳುವುದು) ಬೆಂಬಲಿಸುತ್ತದೆ. ಇದನ್ನು ಮಾಡಲು, ಇನ್‍ಸ್ಟಾಗ್ರಾಮ್ ನ ಇನ್-ಆಪ್ ಕ್ಯಾಮರಾ ತೆರೆದು , ಮೇಲೆ ತಳ್ಳುತ್ತಾ ಕಳೆದ 24 ಗಂಟೆಗಳಲ್ಲಿ ತೆಗೆದ ಚಿತ್ರಗಳನ್ನು ನೋಡಿ ಲೈವ್ ಚಿತ್ರಗಳನ್ನು ಆಯ್ಕೆ ಮಾಡಿ ಮತ್ತು ಅಪ್ಲೋಡ್ ಮಾಡಲು 3ಡಿ ಟಚ್ ಅನ್ನು ಉಪಯೋಗಿಸಿ.

5 ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಿಮ್ಮನ್ನು ಜೈಲಿಗಟ್ಟುತ್ತವೆ!!

ಲೈವ್ ಚಿತ್ರಗಳು ತನ್ನಷ್ಟಕ್ಕೆ ಬೂಮರಾಂಗ್ ಆಗಿ ಬದಲಾಗುತ್ತದೆ. ಮೊದಲು ತಿಳಿಸಿದಂತೆ, ಮೊದಲಿನ ಅಪ್‍ಡೇಟ್ಸ್ ಮೊಬೈಲ್‍ಗಳಿಗೆ ಬಳಸಲಾಗುತ್ತಿದ್ದು ಹೊಸದಾಗಿ ಅಪ್‍ಡೇಟ್ ಮಾಡುವ ಅವಶ್ಯಕತೆಯಿಲ್ಲಾ, ತಾನಾಗಿ ಅಪ್‍ಡೇಟ್ ಆಗುವುದು.

Best Mobiles in India

English summary
Instagram for iOS gets a couple of new features. Find out more about them here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X