"ಸೈಬರ್ ಸ್ವಚ್ಚತಾ ಕೇಂದ್ರ" ವೆಬ್‌ಸೈಟ್‌ ತೆರೆದ ಭಾರತ ಸರ್ಕಾರ!! ಏನು ಉಪಯೋಗ ಗೊತ್ತಾ?

ಸೈಬರ್ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲು ಬಹುತೇಕ ಸಾಧ್ಯವೇ ಇಲ್ಲ ಎನ್ನುವವರಿಗೆ ಭಾರತ ಸರ್ಕಾರದ ಆಧುನಿಕ ವೆಬ್‌ಸೈಟ್ ಬ್ರೇಕ್ ಹಾಕಲು ಬಂದಿದೆ.!

Written By:

ಸೈಬರ್ ಕ್ರಿಮಿನಲ್‌ಗಳನ್ನು ಮಟ್ಟ ಹಾಕಲು ಬಹುತೇಕ ಸಾಧ್ಯವೇ ಇಲ್ಲ ಎನ್ನುವವರಿಗೆ ಭಾರತ ಸರ್ಕಾರದ ಆಧುನಿಕ ವೆಬ್‌ಸೈಟ್ ಬ್ರೇಕ್ ಹಾಕಲು ಬಂದಿದೆ.! ಭಾರತ ಸರ್ಕಾರ"ಸೈಬರ್ ಸ್ವಚ್ಚತಾ ಕೇಂದ್ರ" ಎಂಬ ವೆಬ್‌ಸೈಟ್‌ ತೆರೆದಿದ್ದು, ಇದೀಗ ನಿಮ್ಮ ಆನ್‌ಲೈನ್‌ ಸೇವೆಗಳು ಮತ್ತಷ್ಟು ಸುರಕ್ಷಿತವಾಗುತ್ತಿದೆ.!!

"ಸೈಬರ್ ಸ್ವಚ್ಚತಾ ಕೇಂದ್ರ" ವೆಬ್‌ಸೈಟ್‌ ಮೂಲಕ ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಭದ್ರತೆ ಹೆಚ್ಚಿಸಲು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಸರ್ಕಾರದ ಅಡಿಯಲ್ಲಿಯೇ ಆಪ್‌ಗಳು ಸುರಕ್ಷತೆ ಹೊಂದಿವೆ. ಈ ಮೂಲಕ ಡಿಜಿಟಲ್ ಭಾರತದ ನಿರ್ಮಾಣಕ್ಕೆ ಆನ್‌ಲೈನ್ ಭದ್ರತೆಯ ತೊಡಕು ಕಡಿಮೆಯಾಗಲಿದೆ.

ಬಿಡುಗಡೆಯಾಗುತ್ತಿದೆ ನೋಕಿಯಾದ 2ನೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!..ಫೀಚರ್ಸ್ ಕೇಳಿದರೆ ಶಾಕ್!!

ಧೇಶದಾಧ್ಯಂತ ಆನ್‌ಲೈನ್‌ ವ್ಯವಹಾರಗಳು ಹೆಚ್ಚಿದ್ದು, ಜನರಿಗೆ ಸೈಬರ್ ಭದ್ರತೆ ನೀಡಲು ಸರ್ಕಾರ ಈ ಯಜೋಜನೆಯನ್ನು ಜಾರಿಗೆ ತಂದಿದೆ. ಭೀಮ್ ಆಪ್‌ ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಆಪ್‌ಗಳು ಒಂದೇ ವೆಬ್‌ಸೈಟ್‌ನಲ್ಲಿ ದೊರೆಯಲಿದ್ದು, ಎಲ್ಲಾ ಆಪ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿಯೂ ಈ ಎಲ್ಲಾ ಆಪ್‌ಗಳು ಲಭ್ಯವಿದ್ದು, ಒಂದೇ ರೀತಿಯ ಹಲವು ಫೇಕ್ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹುಟ್ಟಿಕೊಂಡಿವೆ. ಹಾಗಾಗಿ, ಸರ್ಕಾರವೇ ರೂಪಿಸಿರುವ "ಸೈಬರ್ ಸ್ವಚ್ಚತಾ ಕೇಂದ್ರ" ವೆಬ್‌ಸೈಟ್‌ ಮೂಲಕ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Now you can download free apps to protect your desktop, laptop and mobile phones. to know more visit to kannada.gizbot.com
Please Wait while comments are loading...
Opinion Poll

Social Counting