ಪೇಟಿಎಮ್ ಆಂಡ್ರಾಯ್ಡ್ ಆಪ್ ಅಪ್‌ಡೇಟ್ ಆಗಿದೆ: ಹೊಸದೇನಿದೆ..?

ಕೇಂದ್ರ ಸರಕಾರವು ಭೀಮ್ ಆಪ್ ಲಾಂಚ್ ಮಾಡಿದ ನಂತರದಲ್ಲಿ ಪೇಟಿಎಮ್ ಕಡೆಗಿನ ಒಲವು ಸ್ಪಲ್ಪಮಟ್ಟದಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದಾಗಿದ್ದು, ಅಲ್ಲದೇ ಪೇಟಿಮ್ ಆಪ್ ನಲ್ಲಿದ್ದ ಕೆಲವು ಕೊರತೆಗಳು ಕಂಡು ಬಂದಿದ್ದ ಹಿನ್ನಲೆಯಲ್ಲಿ ಹೊಸ ಆಪ್‌ಡೇಟ್.

Written By:

ದೇಶದಲ್ಲಿ ನೋಟು ರದ್ದತಿ ನಂತರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಚೀನಾ ಮೂಲದ ಮೊಬೈಲ್ ವಾಲೆಟ್ ಪೇಟಿಎಮ್ ತನ್ನ ಜಾಹಿರಾತಿನಲ್ಲಿ ಪ್ರಧಾನಿ ಮೋದಿ ಪೋಟೋ ಹಾಕಿಕೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಕೇಂದ್ರ ಸರಕಾರ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ನಿಟ್ಟಿನಲ್ಲಿ ಪೇಟಿಎಮ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗಿತು. ಈ ಹಿನ್ನಲೆಯಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ತನ್ನ ಆಪ್ ಅನ್ನು ಆಪ್‌ಡೇಟ್ ಮಾಡಿದೆ.

ಪೇಟಿಎಮ್ ಆಂಡ್ರಾಯ್ಡ್ ಆಪ್ ಅಪ್‌ಡೇಟ್ ಆಗಿದೆ: ಹೊಸದೇನಿದೆ..?

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಕೇಂದ್ರ ಸರಕಾರವು ಭೀಮ್ ಆಪ್ ಲಾಂಚ್ ಮಾಡಿದ ನಂತರದಲ್ಲಿ ಪೇಟಿಎಮ್ ಕಡೆಗಿನ ಒಲವು ಸ್ಪಲ್ಪಮಟ್ಟದಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದಾಗಿದ್ದು, ಅಲ್ಲದೇ ಪೇಟಿಮ್ ಆಪ್ ನಲ್ಲಿದ್ದ ಕೆಲವು ಕೊರತೆಗಳು ಕಂಡು ಬಂದಿದ್ದ ಹಿನ್ನಲೆಯಲ್ಲಿ ಹೊಸ ಆಪ್‌ಡೇಟ್ ಬಿಡುಗಡೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕಡಿಮೆ ವೇಗದ ನೆಟ್‌ವರ್ಕ್‌ನಲ್ಲೂ ಕಾರ್ಯಚರಣೆ:

ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಪೇಟಿಎಮ್ ಆಪ್ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳಲ್ಲೂ ವೇಗವಾಗಿ ಕಾರ್ಯನಿರ್ವಹಿಸುವಂತೆ ಡಿಸೈನ್ ಮಾಡಲಾಗಿದೆ. ಅಲ್ಲದೇ ಕಡಿಮೆ ವೇಗದ ನೆಟ್‌ವರ್ಕ್ ಇದ್ದರೂ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆಯಂತೆ.

ವಾಲೆಟ್‌ಗೆ ಹಣ ತುಂಬಿಸಲು ಸರಳ ವಿಧಾನ:

ನಿಮ್ಮ ಬ್ಯಾಂಕ್ ಆಕೌಂಟಿನಲ್ಲಿರುವ ಹಣವನ್ನು ಪೇಟಿಎಮ್ ಗೆ ತುಂಬಿಸಲು ಸರಳ ವಿಧಾನವನ್ನು ಈ ಆಪ್ ನಲ್ಲಿ ಅಳವಡಿಸಲಾಗಿದೆ. ಕೇವಲ ಒಂದೇ ಸ್ಕ್ರಿನ್ ನಲ್ಲಿ ಹಣವನ್ನು ತುಂಬಿಸುವಂತೆ ಮಾಡಲಾಗಿದ್ದು, ಈ ಹಿಂದೆ ಇದ್ದ ಎರಡು ಹಂತದ ಪ್ರಕ್ರಿಯೆಯನ್ನು ಸರಳಿಕೃತಗೊಳಿಸಲಾಗಿದೆ.

ಹಣ ಪಾವತಿಯೂ ಸುಲಭ:

ಹಣ ಪಾವತಿ ಮಾಡುವ ವಿಧಾನ ಈ ಹೊಸ ಆಪ್ ನಲ್ಲಿ ಮತ್ತಷ್ಟು ಸರಳಿಕೃತವಾಗಿದೆ. ಸದ್ಯ ಎಲ್ಲ ಕಡೆಯಲ್ಲೂ ಕಾಣಸಿಗುವ ಪೇಟಿಎಮ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇಲ್ಲವೇ ಮೊಬೈಲ್ ನಂಬರ್ ನಲ್ಲಿಯೂ ಹಣ ಪಾವತಿ ಮಾಡಬಹುದಾಗಿದೆ. ಇವೇರಡು ಒಂದೇ ಸ್ಕ್ರಿನ್ ನಲ್ಲಿ ಲಭ್ಯವಿದೆ. ಅಲ್ಲದೇ ಸ್ಕ್ಯಾನ್ ಮಾಡಿದ್ದ ಕ್ಯೂಆರ್ ಕೋಡ್ ಅನ್ನು ಸೇವ್ ಸಹ ಮಾಡಿಕೊಳ್ಳಬಹುದಾಗಿದೆ. ಗ್ಯಾಲರಿಯಿಂದಲೇ ಕೋಡ್ ಸ್ಕಾನ್ ಮಾಡಿಕೊಳ್ಳಬಹುದಾಗಿದೆ.

ರೂ.50,000 ವರೆಗೂ ವರ್ಗಾವಣೆ ಮಾಡಬಹುದು:

ಯಾವುದೇ ಚಾರ್ಜ್ ಇಲ್ಲದೇ ಈ ಹೊಸ ಆಪ್ ಮೂಲಕ ರೂ.50,000 ವರೆಗೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೇ ಬ್ಯಾಂಕ್ ಆಕೌಂಟಿನಿಂದ ನೇರವಾಗಿ ರೂ.50,000ವನ್ನು ಆಪ್‌ಗೆ ತುಂಬಹುದಾಗಿದೆ. ಇದರಿಂದ ಖರೀದಿ ಮತ್ತು ಪಾವತಿ ಎರಡು ಸುಲಭವಾಗಿದೆ.

ಬಾಂಕಿಗೆ ಹಣ ಹಾಕುವ ವಿಧಾನವು ಸರಳಿಕೃತ:

ವ್ಯಾಪಾರಿಗಳು 20,000ಕ್ಕಿಂತ ಹೆಚ್ಚಿನ ಹಣವನ್ನು ಪಡೆದರೆ ಅದನ್ನು ನೇರವಾಗಿ ಬ್ಯಾಂಕ್ ಆಕೌಂಟಿಗೆ ಹಾಕುವ ಸೌಲಭ್ಯವನ್ನು ನೀಡಲಾಗಿದ್ದು, ಇಲ್ಲದೇ ಭದ್ರತೆಗೂ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಪಾಸ್‌ಕೋಡ್, ಪ್ಯಾಟರ್ನ್ ಇಲ್ಲವೇ ಪಿಂಗರ್‌ಪ್ರಿಂಟ್ ಮೂಲಕವೂ ಆಪ್ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Paytm has rolled out a bunch of improvements and new features to that app. It claims that the updated app is three times faster. to konw more visit kannada.gizbot.com.
Please Wait while comments are loading...
Opinion Poll

Social Counting