ನಿಮ್ಮ ಹಣವನ್ನು ಉಳಿಸಲೆಂದೇ ಇರುವ ಆಪ್ ಗಳ ವಿವರ...!!!

ಇವುಗಳು ನಿಮ್ಮ ಖರ್ಚು ವೆಚ್ಚವನ್ನು ಟ್ರಾಕ್ ಮಾಡಿ ಎಲ್ಲಿ ವ್ಯರ್ಥವಾಗಿ ಖರ್ಚು ಮಾಡುತ್ತೀದಿರಾ ಎಂಬುದನ್ನು ತಿಳಿಸಿಕೊಡಲಿವೆ. ಅಲ್ಲದೇ ಕಡಿಮೆ ಮಾಡಲು ಸಲಹೆಗಳನ್ನು ನೀಡಲಿದೆ.

By Precilla Dias
|

ಇಂದಿನ ದಿನದಲ್ಲಿ ಉತ್ತಮ ಸ್ಮಾರ್ಟ್ ಫೋನ್ ಹೊಂದಿದರೆ ಕೇವಲ ಅದರಲ್ಲಿ ಕರೆ ಮಾಡುವುದು, ಮೇಸೆಜ್ ಮಾಡುವುದು ಮಾತ್ರವಲ್ಲ ಇನ್ನು ಅನೇಕ ಕೆಲಸಗಳನ್ನು ಮಾಡಬಹುದಾಗಿದೆ. ಅಲ್ಲದೇ ನೀವು ಇದರ ಮೂಲಕ ಹಣವನ್ನು ಸಹ ಗಳಿಸಬಹುದು. ಇದಲ್ಲದೇ ನೀವು ಖರ್ಚು ಮಾಡುವ ಹಣವನ್ನು ಹೇಗೆ ಉಳಿಸಬೇಕು ಎಂಬುದನ್ನು ಈ ಸ್ಮಾರ್ಟ್ ಫೋನ್ ಗಳು ಹೇಳಿಕೊಡಲಿದೆ.

ನಿಮ್ಮ ಹಣವನ್ನು ಉಳಿಸಲೆಂದೇ ಇರುವ ಆಪ್ ಗಳ ವಿವರ...!!!

ನೀವು ಖರ್ಚು ಮಾಡುವ ಹಣವನ್ನು ಹೇಗೆ ಉಳಿಸಬೇಕು ಎಂಬುದನ್ನು ತಿಳಿಸಿಕೊಡುವ ಸಲುವಾಗಿ ಹಲವು ಆಪ್ ಗಳು ಲಭ್ಯವಿದೆ. ಇವುಗಳು ನಿಮ್ಮ ಖರ್ಚು ವೆಚ್ಚವನ್ನು ಟ್ರಾಕ್ ಮಾಡಿ ಎಲ್ಲಿ ವ್ಯರ್ಥವಾಗಿ ಖರ್ಚು ಮಾಡುತ್ತೀದಿರಾ ಎಂಬುದನ್ನು ತಿಳಿಸಿಕೊಡಲಿವೆ. ಅಲ್ಲದೇ ಅದನ್ನು ಕಡಿಮೆ ಮಾಡಲು ಸಲಹೆಗಳನ್ನು ನೀಡಲಿದೆ.

ವಾಲ್ ನಟ್:

ವಾಲ್ ನಟ್:

ನಿಮಗೆ ತಿಳಿಯದ ರೀತಿಯಲ್ಲಿ ಈ ಆಪ್ ನೀವು ತಿಂಗಳಿಗೆ ಖರ್ಚು ಮಾಡುವ ಹಣ ಮತ್ತು ಬಿಲ್ ಪೇ ಮಾಡಿದನ್ನು ಆನ್ ಟೈಮ್ ತೋರಿಸಲಿದೆ. ಅಲ್ಲದೇ ನಿಮ್ಮ ಖರ್ಚಿನ ವಿವರವನ್ನು ನೀಡಲಿದೆ. ಇದು ನಿಮ್ಮ ಇನ್ ಬಾಕ್ಸ್ ನಲ್ಲಿ ಬರುವ ಬಿಲ್, ಟೀಕೆಟ್, ಮುಂತಾದವುಗಳನ್ನು ತಾನೇ ಟ್ರಾಕ್ ಮಾಡಲಿದೆ. ಅಲ್ಲದೇ ನೀವು ಭೇಟಿ ನೀಡಿದ ಸ್ಥಳಗಳ ಕುರಿತ ಮಾಹಿತಿಯನ್ನು ಪಟ್ಟಿ ಮಾಡಲಿದೆ.

ಮನಿಫೈ:

ಮನಿಫೈ:

ಈ ಆಪ್ ನಿಮ್ಮ ಖರ್ಚುಗಳ ಮಾಹಿತಿಯನ್ನು ಕಲೆ ಹಾಕಲಿದೆ. ಅಲ್ಲದೇ ನಿಮ್ಮ ಖರ್ಚುಗಳ ಮಾಹಿತಿಯನ್ನು ರೇಕಾರ್ಡ್ ಮಾಡಿಟ್ಟುಕೊಳ್ಳಿದೆ. ಅಲ್ಲದೇ ಹೊಸ ಖರ್ಚುಗಳನ್ನು ಆಡ್ ಮಾಡಿ ಹಳೇ ಖರ್ಚುಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ಈ ಆಪ್ ಮಾಡಿಕೊಡಲಿದೆ.

ಮನಿ ವಿವ್:

ಮನಿ ವಿವ್:

ನಿಮ್ಮ ತಿಂಗಳ ಬಜೆಟ್ ನಿರ್ವಹಣೆ ಮಾಡಲು ಈ ಆಪ್ ನೆರವಾಗಲಿದೆ. ನಿಮ್ಮ ಖರ್ಚುಅನ್ನು ಬುದ್ದಿವಂತಿಕೆಯಿಂದ ಮಾಡಲು ಸಹಾಯ ಮಾಡಲಿದೆ. ನಿಮ್ಮ ಬ್ಯಾಂಕ್ ಗೈಡ್ ಆಗಿ ಸೆಕ್ಯೂರಿಟಿಯಾಗಿ ಇದು ಕಾರ್ಯನಿರ್ವಹಿಸಲಿದೆ. ಇದು ನಿಮ್ಮ ಟ್ಯಾಕ್ಸ್ ಸೇವಿಂಗ್ ಗೈಡ್ ಆಗಲಿದೆ.

ಮೊಬಿಲ್ಸ್:

ಮೊಬಿಲ್ಸ್:

ಈ ಆಪ್ ನಿಮ್ಮ ತಿಂಗಳ ಬಜೆಟ್ ರೂಪಿಸಲು ಮತ್ತು ಖರ್ಚುಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಲಿದೆ. ಡೇಟಾಗಳನ್ನು ತಾನೇ ಸಂಗ್ರಹಿಸಲಿದೆ. ಅಲ್ಲದೇ ಮಾಹಿತಿಯನ್ನು ಕೌಡ್ ನಲ್ಲಿ ಸೇವ್ ಮಾಡಲಿದೆ. ಅಲ್ಲದೇ ಇಲ್ಲಿ ನಿಮ್ಮ ಆದಾಯವನ್ನು ಆಡ್ ಮಾಡಬಹುದಾಗಿದೆ.

ಮನಿ ಲವರ್:

ಮನಿ ಲವರ್:

ಇದು ಸಹ ನಿಮ್ಮ ಖರ್ಚು ವೆಚ್ಚವನ್ನು ಟ್ರಾಕ್ ಮಾಡಲು ಇರುವಂತಹ ಆಪ್ ಆಗಿದೆ. ಇದು ನಿಮ್ಮ ಖರ್ಚಿನ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಲಿದೆ. ಇದನ್ನು ನಿಮ್ಮ ಬಜೆಟ್ ರೂಪಿಸಿ ಅದರಲ್ಲೇ ಖರ್ಚು ಮಾಡುವಂತೆ ಪ್ರೇರೆಪಿಸುತ್ತದೆ. ಅಲ್ಲದೇ ಬೇರೆ ಬೇರೆ ಡಿವೈಸ್ ಗಳನ್ನು ನಿಮ್ಮ ಖರ್ಚುಗಳನ್ನು ಲೆಕ್ಕ ಇಡಲಿದೆ.

Best Mobiles in India

Read more about:
English summary
Owning a good smartphone will help you in managing things apart from making calls and messages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X