ಇಂಟರ್ನೆಟ್ ಬಳಸದೆಯೇ ವೀಡಿಯೊ ನೋಡಿ

By Suneel
|

ಮನರಂಜನೆ ಎಂಬುದು ಇಂದು ಕೇವಲ ಟಿವಿ, ಚಿತ್ರಮಂದಿರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇವುಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಕುಂತಲ್ಲಿ, ನಿಂತಲ್ಲಿ, ನಾವು ಹೋದಲೆಲ್ಲಾ ಮನರಂಜನೆ ನೀಡುವ ಮಾಧ್ಯಮ ಸ್ಮಾರ್ಟ್‌ಫೋನ್‌ ಆಗಿದೆ.

ಓದಿರಿ: ನಿಮ್ಮ ಗ್ಯಾಜೆಟ್ ಚಾರ್ಜ್‌ ಮಾಡಲು ವೈಫೈ ಸಾಕು

ಇಂದು ಸ್ಮಾರ್ಟ್‌ಫೋನ್‌ನಲ್ಲಿ ನಾವು ಯಾವ ಮನರಂಜನೆ ಪಡೆಯೋಕಾಗಲ್ಲ ಹೇಳಿ. ಖಂಡಿಲ್ಲ ಎಲ್ಲಾ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಸಹ ಮೊಬೈಲ್‌ನಲ್ಲೇ ಪಡೆಯಬಹುದಾಗಿದೆ. ಆದರೆ ವಿಡಿಯೋ ಸೇವೆಗಳಿಗೆ ಇಷ್ಟುದಿನ ಇಂಟರ್ನೆಟ್‌ಗಾಗಿ ಹಣ ಪಾವತಿ ಮಾಡುತ್ತಿದ್ದ ನಮಗೆ ಇನ್ನುಮುಂದೆ ಇಂಟರ್ನೆಟ್‌ ಸಹಾಯವಿಲ್ಲದೇ ಉಚಿತ ವಿಡಿಯೋಗಳನ್ನು ನೀಡುವ ಅಪ್ಲಿಕೇಶನ್‌ ಒಂದು ರೆಡಿಯಾಗಿದೆ.

ಓದಿರಿ: ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಹೌದು, ಇಂಟರ್ನೆಟ್‌ ಸಹಾಯವಿಲ್ಲದೇ ವಿಡಿಯೋಗಳನ್ನು ನೋಡುವ ಅಪ್ಲಿಕೇಶನ್‌ ಹೆಸರು 'ಶೋ ಇನ್‌ ಮೊಬೈಲ್‌' (SIM). ಬೆಂಗಳೂರಿನಲ್ಲಿ ಅಭಿವೃದ್ದಿಗೊಂಡ ಈ ಅಪ್ಲಿಕೇಶನ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸಲು ಸಿದ್ಧಗೊಂಡಿದ್ದು, ಅಪ್ಲಿಕೇಶನ್‌ ಪಡೆಯುವುದು ಹೇಗೆ, ಬಳಸುವುದು ಹೇಗೆ ಎಂಬ ಉತ್ತರವನ್ನು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ತಿಳಿಯರಿ.

"ಶೋ ಇನ್‌ ಮೊಬೈಲ್‌"

ವಿನೂತನವಾಗಿ ಅಭಿವೃದ್ದಿಗೊಂಡ ಮೊಬೈಲ್‌ ಅಪ್ಲಿಕೇಶನ್‌ ''ಶೋ ಇನ್‌ ಮೊಬೈಲ್‌" ಆಗಿದ್ದು, ಇಂಟರ್ನೆಟ್‌ ಸಹಾಯವಿಲ್ಲದೇ ವಿಡಿಯೋಗಳನ್ನು ಉಚಿತವಾಗಿ ನೋಡಬಹುದಾಗಿದೆ.

ಮೊಬೈಲ್‌ ಆಪ್‌

ಮೊಬೈಲ್‌ ಆಪ್‌

ಶೋ ಇನ್‌ ಮೊಬೈಲ್‌ ಉಚಿತ ಮೊಬೈಲ್‌ ಅಪ್ಲಿಕೇಶನ್‌ ಆಗಿದ್ದು, ಇದರಲ್ಲಿ ಟಿವಿ ಕಾರ್ಯಕ್ರಮಗಳಾದ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾಗಳನ್ನು ನೋಡಬಹುದಾಗಿದೆ.

ಇಂಟರ್ನೆಟ್‌ ಬೇಕಾಗಿಲ್ಲ, ಬಫರಿಂಗ್ ಆಗೋದಿಲ್ಲ.

ಇಂಟರ್ನೆಟ್‌ ಬೇಕಾಗಿಲ್ಲ, ಬಫರಿಂಗ್ ಆಗೋದಿಲ್ಲ.

ನೀವು ಇಂಟರ್ನೆಟ್‌ ಉಪಯೋಗಿಸಿದರು ಸಹ ಮೊಬೈಲ್‌ಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಹಾಗೂ ಬಫರಿಂಗ್ ಸಮಸ್ಯೆಯಿಂದ ವಿಡಿಯೋಗಳನ್ನು ನೋಡಲು ಸಮಸ್ಯೆ ಇದ್ದೇಇರುತ್ತದೆ. ಆದರೆ ಶೋ ಇನ್ ಮೊಬೈಲ್‌ ಆಪ್ಲಿಕೇಶಗೆ ವಿಡಿಯೋ ತೋರಿಸಲು ಇಂಟರ್ನೆಟ್‌ ಸಂಪರ್ಕ ಬೇಕಾಗಿಲ್ಲ, ಮತ್ತು ಬಫರಿಂಗ್ ಆಗದೇ ನಿರಂತರ ವಿಡಿಯೋ ನೋಡಿ.

ಓಟಿಎಂ ಸಂಪರ್ಕ ಜಾಲ ಅಳವಡಿಕೆ.

ಓಟಿಎಂ ಸಂಪರ್ಕ ಜಾಲ ಅಳವಡಿಕೆ.

ಇಂಟರ್ನೆಟ್‌ ಸಹಾಯವಿಲ್ಲದೇ ಅದ್‌ ಹೇಗೆ ವಿಡಿಯೋ ಉಚಿತವಾಗಿ ಸಿಗುತ್ತೇ ಎಂಬ ಪ್ರಶ್ನೆ ನಿಮ್ಮದಾಗಿರುತ್ತದೆ. ಅದಕ್ಕೆ ಉತ್ತರ -ಈ ಅಪ್ಲಿಕೇಶನ್‌ ಓಟಿಎಂ ಎಂಬ ಸಂಪರ್ಕ ಜಾಲವನ್ನು ಆಯ್ದ ಪ್ರದೇಶಗಳಲ್ಲಿ ಹೊಂದಲಿದೆ.

ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಆಪ್ ಲಭ್ಯ.

ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಆಪ್ ಲಭ್ಯ.

ಶೋ ಇನ್‌ ಮೊಬೈಲ್‌ ಅಪ್ಲಿಕೇಶನ್‌, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ವಿಡಿಯೋ ಕಂಟೆಂಟ್‌ ಪಡೆಯುವುದು ಹೇಗೆ ?

ವಿಡಿಯೋ ಕಂಟೆಂಟ್‌ ಪಡೆಯುವುದು ಹೇಗೆ ?

ಆಪ್‌ ಇರುವ ಬಳಕೆದಾರರು ತಮ್ಮ ಹತ್ತಿರದ ಓಟಿಎಂ ಪಾಯಿಂಟ್‌ಗಳಿಗೆ ಹೋಗಿ 4 ಗಂಟೆಗಳ ವಿಡಿಯೋ ಕಂಟೆಂಟ್‌ ಅನ್ನು ಕೆಲವೇ ನಿಮಿಷಗಳಲ್ಲಿ ಸಿಂಕ್‌ ಮಾಡಿಕೊಳ್ಳಬಹುದು.

 ಡಿಸೆಂಬರ್ 31 ರವರೆಗೆ ಉಚಿತ ಸೇವೆ.

ಡಿಸೆಂಬರ್ 31 ರವರೆಗೆ ಉಚಿತ ಸೇವೆ.

ಶೋ ಇನ್ ಮೊಬೈಲ್‌ ಸೇವೆಯು 2015 ರ ಡಿಸೆಂಬರ್ 31 ರವರೆಗೆ ಉಚಿತ ಸೇವೆ ಇದ್ದು, ನಂತರದಲ್ಲಿ ಪ್ರತಿ ತಿಂಗಳಿಗೆ ಕೇವಲ 75 ರೂಪಾಯಿಗಳು ಮಾತ್ರ ವೆಚ್ಚ ತಗಲಲಿದೆ.

ಉದ್ದೇಶ

ಉದ್ದೇಶ

ನಕಲಿ ಸಿಡಿ ಹಾವಳಿ ಮತ್ತು ಪೈರಸಿ ಸಮಸ್ಯೆಗಳಿಗೆ ಕಡಿವಾಣ ಹಾಕಲು ಉದ್ದೇಶಿಸಲಾಗಿದ್ದು, ಇದು ಒರಿಜಿನಲ್‌ ವಿಡಿಯೋಗಳನ್ನು ವೀಕ್ಷಿಸುವ ಸೇವೆ ಒದಗಿಸುತ್ತಿದೆ. ಆದರೆ ಒಮ್ಮೆ ಆಪ್‌ನಲ್ಲಿ ನಿಮಗೆ ಬೇಕಾದ ವಿಡಿಯೋವನ್ನು ಸಿಂಕ್‌ ಮಾಡಿಕೊಳ್ಳಬೇಕಷ್ಟೆ. ನಂತರ ಎಲ್ಲಿದ್ದರೂ ವಿಡಿಯೋ ನೋಡಬಹುದಾಗಿದೆ.

ಅಜೈಲ್‌ ಐಡಿಸಿ ಕಂಪನಿ

ಅಜೈಲ್‌ ಐಡಿಸಿ ಕಂಪನಿ

ಅಜೈಲ್‌ ಐಡಿಸಿ ಕಂಪನಿಯ ಅಧೀನ ಸಂಸ್ಥೆ 'ಅಜೈಲೆಟ್ಸ್ ಇನೋವೇಶನ್ಸ್ ಪ್ರೈವೇಟ್‌ ಲಿಮಿಟೆಡ್‌' ಐಟಿ ಸಂಸ್ಥೆಯಾಗಿದ್ದು, ಇಂತಹ ಉತ್ತಮ ಸೇವೆಯನ್ನು ನೀಡುತ್ತಿದೆ.

 ಡಿಜಿಟಲ್‌ ಇಂಡಿಯಾಗೆ ಬೆಂಬಲ.

ಡಿಜಿಟಲ್‌ ಇಂಡಿಯಾಗೆ ಬೆಂಬಲ.

ಭಾರತದ ಡಿಜಿಟಲ್‌ ವಾಣಿಜ್ಯಕ್ಕೆ ಬೆಂಬಲಿಸುವ ಅಜೆಂಡಾಹೊಂದಿದ್ದು, ಆಪ್‌ ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ತಲುಪಿಸುವಲ್ಲಿ ಉದ್ದೇಶಹೊಂದಿದೆ. ಸುಮಾರು 2 ಶತಕೋಟಿ ಗ್ರಾಹಕರನ್ನು ತಲುಪುವ ಗುರಿಹೊಂದಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
SIM apps will be give you free best videos for ever. It need not any internet connection. This app will available in google play store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X