ಭಾರತ ಬಡದೇಶ ಎಂದ ಸ್ನ್ಯಾಪ್‌ಚಾಟ್‌ಗೆ ಭಾರತೀಯರು ನೀಡಿದ ಶಾಕ್ ಏನು ಗೊತ್ತಾ?

ಸ್ನ್ಯಾಪ್‌ಚಾಟ್‌ ಆಪ್‌ಗೆ ಬಹುದೊಡ್ಡ ಹೊಡೆತ ಬಿದ್ದಿದೆ.!!

Written By:

ಭಾರತ ಬಡವರ ದೇಶ. ಹಾಗಾಗಿ, ಅಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಿ ಉದ್ದಿಮೆ ವಿಸ್ತರಿಸಲಾಗದು ಎಂದು ಅವಮಾನಿಸಿದ ಸ್ನ್ಯಾಪ್‌ಚಾಟ್‌ ಸಂಸ್ಥೆಯ ಸಿಇಒ ಎವಾನ್ ಸ್ಪೈಗಲ್ ಭಾರತೀಯರ ಕಂಗಣ್ಣಿಗೆ ಗುರಿಯಾಗಿದ್ದಾರೆ.! ಇನ್ನು ಇದರ ಜೊತೆಯಲ್ಲಿಯೇ ಸ್ನ್ಯಾಪ್‌ಚಾಟ್‌ ಆಪ್‌ಗೂ ಸಹ ಬಹುದೊಡ್ಡ ಹೊಡೆತ ಬಿದ್ದಿದೆ.!!

ಹೌದು, 125 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸ್ನ್ಯಾಪ್‌ಚಾಟ್‌ ಆಪ್ ಇತ್ತೀಚಿಗೆ ಹೆಚ್ಚು ವಿಸ್ತರಣೆಯಾಗುತ್ತಿತ್ತು. ಆದರೆ, ಸಿಇಒ ಎವಾನ್ ಸ್ಪೈಗಲ್ ಹೇಳಿಕೆ ಇದೀಗ ಭಾರತೀಯರ ಕೋಪಕ್ಕೆ ಕಾರಣವಾಗಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸ್ನ್ಯಾಪ್‌ಚಾಟ್‌ ತನ್ನ ರೇಟಿಂಗ್‌ ಕಳೆದುಕೊಳ್ಳುತ್ತಿದೆ.!!

ಭಾರತ ಬಡದೇಶ ಎಂದ ಸ್ನ್ಯಾಪ್‌ಚಾಟ್‌ಗೆ ಭಾರತೀಯರು ನೀಡಿದ ಶಾಕ್ ಏನು ಗೊತ್ತಾ?

ಕೇವಲ ಎರಡು ದಿವಸಗಳ ಕಾಲವದಿಯಲ್ಲಿ ಸ್ನ್ಯಾಪ್‌ಚಾಟ್‌ ಆಪ್ ಒಂದು ರೇಟಿಂಗ್ಸ್ ಕಳೆದುಕೊಂಡಿದ್ದು, ಐದು ರೇಟಿಂಗ್ ಪಡೆದಿದ್ದ ಸ್ನ್ಯಾಪ್‌ಚಾಟ್‌ ಇದೀಗ ನಾಲ್ಕಕ್ಕೆ ಬಂದುನಿಂತಿದೆ.! ಇನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೇಟಿಂಗ್ಸ್ ಕಳೆದುಕೊಳ್ಳುವ ಭಯವು ಸ್ನ್ಯಾಪ್‌ಚಾಟ್‌ ಕಂಪೆನಿಗೆ ಮೂಡಿದೆ. ಸ್ನ್ಯಾಪ್‌ಚಾಟ್‌ ಇದೇ ರೀತಿಯಲ್ಲಿ ಗೂಗಲ್ ಪ್ಲೇ ರೇಟಿಂಗ್ಸ್ ಕಳೆದುಕೊಂಡರೆ ಆಪ್‌ ಪಟ್ಟಿಯಲ್ಲಿ ಮೊದಲ ಸ್ಥಾನದ ಪಟ್ಟಿಯಿಂದ ಹೊರಬೀಳಲಿದೆ.!!

ಭಾರತ ಬಡದೇಶ ಎಂದ ಸ್ನ್ಯಾಪ್‌ಚಾಟ್‌ಗೆ ಭಾರತೀಯರು ನೀಡಿದ ಶಾಕ್ ಏನು ಗೊತ್ತಾ?

2015ರಲ್ಲಿ ನಡೆದಿದ್ದ ಸಭೆಯಲ್ಲಿ ಎವಾನ್‌ ನಮ್ಮ ಆ್ಯಪ್‌ ಇರುವುದು ಕೇವಲ ಶ್ರೀಮಂತರ ಬಳಕೆಗೆ. ಭಾರತ ಮತ್ತು ಸ್ಪೇನ್‌ನಂಥ ರಾಷ್ಟ್ರಗಳಿಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಬಯಸುವುದಿಲ್ಲ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.

ಓದಿರಿ: ಜಿಯೋ ಬ್ಯಾಲೆನ್ಸ್ ಮತ್ತು ನಂಬರ್ ಚೆಕ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
app dropping to a "single star" from an apparent "five star" on the App Store.to know more visit to kannada.gizbot.com
Please Wait while comments are loading...
Opinion Poll

Social Counting