ಪೊಲೀಸ್ ಮೊಬೈಲ್ ಆಪ್ ಲಾಂಚ್ ಮಾಡಿದ ಮೋದಿ, ಕ್ಷಣಾರ್ಧದಲ್ಲಿ ಸೇವೆ ಪಡೆಯಿರಿ!

ಕ್ಯಾಶ್‌ಲೆಸ್ ಆರ್ಥಿಕತೆ, ಸರ್ಕಾರಿ ಸೇವೆಗಳು, ಸರ್ಕಾರಿ ಮಾಹಿತಿಗಳಿಗೂ ಆಪ್ ಬಿಡುಗಡೆ ಮಾಡುತ್ತಿರುವ ಮೋದಿ ಸರ್ಕಾರ ಇದೀಗ ಪೊಲೀಸ್ ಸೇವೆಗಳಿಗೂ ಆಪ್ ಒಂದನ್ನು ಬಿಡುಗಡೆಮಾಡಿದೆ.

|

ಡಿಜಿಟಲ್ ಇಂಡಿಯಾ ಮೂಲಕ ಅಂತರ್ಜಾಲದ ಸೌಲಭ್ಯಗಳನ್ನು ಸಾಮಾನ್ಯ ನಾಗರೀಕನಿಗೂ ತಲುಪಿಸಬೇಕು. ಇದರಿಂದ ಪ್ರತಿಯೊಬ್ಬರ ಜೀವನವನ್ನು ಸರಳೀಕರಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಉದ್ದೇಶ. ಹಾಗಾಗಿ ಸರ್ಕಾರದ ಎಲ್ಲಾ ಆಡಳಿತ ಸೇವೆಗಳು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಾಗಲು ಆಡಳಿತ ಸೇವೆಗಳ ಮೊಬೈಲ್ ಆಪ್‌ಗಳನ್ನು ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಇತ್ತೀಚಿಗಷ್ಟೆ ತಿಳಿಸಿತು.

ಕ್ಯಾಶ್‌ಲೆಸ್ ಆರ್ಥಿಕತೆ, ಸರ್ಕಾರಿ ಸೇವೆಗಳು, ಸರ್ಕಾರಿ ಮಾಹಿತಿಗಳಿಗೂ ಆಪ್ ಬಿಡುಗಡೆ ಮಾಡುತ್ತಿರುವ ಮೋದಿ ಸರ್ಕಾರ ಇದೀಗ ಪೊಲೀಸ್ ಸೇವೆಗಳಿಗೂ ಆಪ್ ಒಂದನ್ನು ಬಿಡುಗಡೆಮಾಡಿದೆ. ಹೌದು "ಇಂಡಿಯನ್ ಪೊಲೀಸ್ ನಿಮ್ಮ ಕರೆಯಲ್ಲಿ" (Indian Police at Your Call)ಎನ್ನುವ ಆಪ್‌ ಒಂದನ್ನು ಮೋದಿಯವರು ಲಾಂಚ್ ಮಾಡಿದ್ದಾರೆ.!!

ಓದಿರಿ:ಗೂಗಲ್‌ನಲ್ಲಿ "Find My Phone" ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಮ್ ಎರಡರಲ್ಲೂ ಕಾರ್ಯನಿರ್ವಹಿಸುವ ಆಪ್ ಇದಾಗಿದ್ದು, ನೀವು ಒಂದೆ ಕ್ಲಿಕ್‌ನಲ್ಲಿ ನಿಮ್ಮ ಹತ್ತಿರದ ಪೋಲೀಸ್ ಠಾಣೆ ಸಂಪರ್ಕ ಪಡೆಯಬಹುದು. ಇಂಡಿಯನ್ ಪೊಲೀಸ್ ಆಪ್ ಅನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ಆಪ್ ಸ್ಟೋರ್ ತೆರೆಯಿರಿ

ಆಪ್ ಸ್ಟೋರ್ ತೆರೆಯಿರಿ

ನೀವು ಇದನ್ನು ಗೂಗಲ್ ಪ್ಲೇಸ್ಟೋರ್‌ ಮತ್ತು ಆಪಲ್‌ ಆಪ್ ಮೂಲಕ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. Indian Police at Your Call ಎಂದು ಟೈಪಿಸಿದರೆ ನಿಮ್ಮ ಈ ಆಪ್ ತೆರೆಯುತ್ತದೆ.

ಆಪ್ ತೆರೆಯಿರಿ ಮತ್ತು ಜಿಪಿಎಸ್ ಆನ್ ಮಾಡಿ

ಆಪ್ ತೆರೆಯಿರಿ ಮತ್ತು ಜಿಪಿಎಸ್ ಆನ್ ಮಾಡಿ

ಆಪ್ ಡೌನ್‌ಲೋಡ್ ಮಾಡಿದ ನಂತರ ನಿ್ಮಮ ಮಾಹಿತಿಯನ್ನು ನಿಡಿ ಸೈನ್ ಇನ್ ಆಗಿರಿ. ನಂತರ ಜಿಪಿಎಸ್ ಆನ್ ಮಾಡಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್‌ನಲ್ಲಿ ಪೊಲೀಸ್‌ ಠಾಣೆ ಬಗ್ಗೆ ಸಂಪೂರ್ಣ ಮಾಹಿತಿ.

ಆಪ್‌ನಲ್ಲಿ ಪೊಲೀಸ್‌ ಠಾಣೆ ಬಗ್ಗೆ ಸಂಪೂರ್ಣ ಮಾಹಿತಿ.

ಇಂಡಿಯನ್ ಪೊಲೀಸ್ ಆಪ್‌ನಲ್ಲಿ ನಿಮ್ಮ ಹತ್ತಿರದ ಠಾಣೆಯನ್ನು ಸಂಪರ್ಕಿಸಿದ ನಂತರ ನಿಮ್ಮ ಹತ್ತಿರದ ಪೊಲೀಸ್‌ಠಾಣೆಯ ಪೂರ್ತಿ ಡೀಟೆಲ್ಸ್ ನಿಮಗೆ ದೊರೆಯುತ್ತದೆ.

ಪೊಲೀಸ್ ಠಾಣೆಗೆ ಕಾಲ್ ಮಾಡಿ.

ಪೊಲೀಸ್ ಠಾಣೆಗೆ ಕಾಲ್ ಮಾಡಿ.

ಇಂಡಿಯನ್ ಪೊಲೀಸ್ ಆಪ್‌ನಲ್ಲಿ ಠಾಣೆಯ ಸಂಪೂರ್ಣ ಡೀಟೆಲ್ಸ್ ಸಿಕ್ಕ ನಂತರ "ಟ್ಯಾಪ್ ಟು ಕಾಲ್" ಎಂದು ಕಾಣಿಸುತ್ತದೆ. ನಂತರ ಕಾಲ್ ಮಾಡಿ.
ಈ ಆಪ್ ಮೂಲಕ ಸಮಾಜದಲ್ಲಿ ನಡೆಯುತ್ತರುವ ಅಪರಾಧಗಳನ್ನು ನಿರ್ನಾಮ ಮಾಡುವ ಅಭಿಲಾಷೆಯನ್ನು ಮೋದಿಯವರು ಹೊಂದಿದ್ದು, ಆಪ್ ನಾಗರೀಕರಿಗೆ ಸಹಾಯವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Narendra Modi government recently launched the new Indian Police at Your Call app that helps citizens to locate the nearest police station along with the details when in an emergency. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X