ನಿಮಗಿದು ಗೊತ್ತಾ?..ಬೆಂಗಳೂರಿನಲ್ಲಿ ಗುಜರಿ ಸಾಮಾನು ಖರೀದಿಸುವ ಆಪ್ ಇದೆ!!

ಗುಜರಿ ಅಂಗಡಿಗೂ ಆಪ್‌ಗೂ ಎಲ್ಲಿಂದ ಎಲ್ಲಿಯ ಸಂಭಂದ?

|

ಗುಜರಿ ಅಂಗಡಿಗೂ ಆಪ್‌ಗೂ ಎಲ್ಲಿಂದ ಎಲ್ಲಿಯ ಸಂಭಂದ? ಆದರೆ, ನೀವು ಈಗ ಕೇಳುವ ಸುದ್ದಿ ನಿಮಗೆ ಆಶ್ಚರ್ಯ ಮೂಡಿಸುವುದರಲ್ಲಿ ಸಂಶಯವಿಲ್ಲ.!! ಹೌದು, ಹಳೆಯ ತಗಡು, ಪ್ಲಾಸ್ಟಿಕ್ ಪೇಪರ್, ಕಬ್ಬಿಣ ಸೇರಿದಂತೆ ಗುಜರಿ ವಸ್ತುಗಳನ್ನೆಲ್ಲವನ್ನು ಖರೀದಿಸುವ ಹೊಸ ಆಪ್ ಕಂಪೆನಿ ಹುಟ್ಟಿಕೊಂಡಿದೆ.!!

ರಿಕವರ್ ಹ್ಯಾಬಿಟೆಟ್ ಪ್ರೈ.ಲಿ. ಹೆಸರಿನ ಸಂಸ್ಥೆ ಈ ಇಂತಹ ಒಂದು ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಕಾರ್ಯವನ್ನು ಆರಂಭಿಸಿದ್ದು, 'ಒಆರ್ಎಸ್' (ಓಲ್ಡ್ ರದ್ದಿ ಸೋಲ್ಡ್) ಹೆಸರಿನ ಆಪ್ ಅನ್ನು ಗುಜರಿ ಕೆಲಸ ಆರಂಭಿಸುವುದಕ್ಕೆ ತಯಾರಿಸಿದೆ ಎಂದರೆ ನೀವು ನಂಬಲೇ ಬೇಕು.!!

ಏನಿದು 'ಒಆರ್ಎಸ್' (ಓಲ್ಡ್ ರದ್ದಿ ಸೋಲ್ಡ್) ಆಪ್?

ಏನಿದು 'ಒಆರ್ಎಸ್' (ಓಲ್ಡ್ ರದ್ದಿ ಸೋಲ್ಡ್) ಆಪ್?

ಗುಜರಿ ರೀತಿ ಮನೆಯಲ್ಲಿನ ಹಳೆಯ ತಗಡು, ಪ್ಲಾಸ್ಟಿಕ್ ಪೇಪರ್, ಕಬ್ಬಿಣ ಸೇರಿದಂತೆ ಎಲ್ಲಾ ವಸ್ತುಗಳನ್ನೆಲ್ಲವನ್ನು ಖರೀದಿಸುವ ಹೊಸ ಸಂಸ್ಥೆ ಈ ಆಪ್ ಹೊಂದಿದೆ. ಹಾಗಾಗಿ, ಈ ಆಪ್ ಮೂಲಕ ಎಲ್ಲ ಹಳೆಯ ವಸ್ತುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.!!

ಆಪ್ ಕಾರ್ಯನಿರ್ವಹಣೆ ಹೇಗೆ?

ಆಪ್ ಕಾರ್ಯನಿರ್ವಹಣೆ ಹೇಗೆ?

'ಒಆರ್ಎಸ್' ಆಪ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಗುಜರಿ ವಸ್ತುಗಳಿದ್ದರೆ ವಸ್ತುವನ್ನು ತೆಗೆದುಕೊಂಡು ಹೋಗುವ ಸಮಯ ಹಾಗೂ ದಿನಾಂಕವನ್ನೂ ನಿಗದಿಮಾಡಬಹುದು. ನಂತರ ಅವರು ಬಂದು ಖರೀದಿಸುತ್ತಾರೆ.!!

ಕಂಪೆನಿಯ ಮುಖ್ಯಸ್ಥರು ಹೇಳುವುದೇನು?

ಕಂಪೆನಿಯ ಮುಖ್ಯಸ್ಥರು ಹೇಳುವುದೇನು?

ಹಳೆ ಪೇಪರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಮನೆಯಾಚೆ, ಕಸದ ರೂಪದಲ್ಲಿ ಎಸೆಯುವ ಬದಲು ಈ ಮಾರಾಟ ಮಾಡಿ ಹಣವನ್ನು ಸಹ ಗಳಿಸಬಹುದು . ಇದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ ಮತ್ತು ಗ್ರಾಹಕರು ಲಾಭ ಎಂದು ರಿಕವರ್ ಹ್ಯಾಬಿಟೆಟ್ ಪ್ರೈ.ಲಿ. ಕಂಪೆನಿಯ ಮುಖ್ಯಸ್ಥರು ಹೇಳಿದ್ದಾರೆ.!!

ಆಂಡ್ರಾಯ್ಡ್ ಹಾಗೂ ಐಒಎಸ್

ಆಂಡ್ರಾಯ್ಡ್ ಹಾಗೂ ಐಒಎಸ್

ಈಗಾಗಲೇ ಸಾವಿರಕ್ಕೂ ಹೆಚ್ಚು ನಾಗರಿಕರು ಗೂಗಲ್ ಪ್ಲೇಸ್ಟೋರ್ನಿಂದ ಆಪ್‌ ಅನ್ನು ಡೌನ್‌ಲೋಡ್ ಮಾಡಿದ್ದು, ಗೂಗಲ್ ಪ್ಲೇಸ್ಟೋರ್‌ನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಯಲ್ಲಿ ಲಭ್ಯವಿದೆ. ಹಾಗಾಗಿ, ಡೌನ್‌ಲೋಡ್ ಮಾಡಿ ಮಾರಾಟಮಾಡಿ.!!

<strong>ಮೆಮೊರಿ ಕಾರ್ಡ್ ಮೇಲೆ 2,4,6,10 ಎಂಬ ಸಂಖ್ಯೆಗಳು ಏಕಿರುತ್ತವೆ ಗೊತ್ತಾ?</strong>ಮೆಮೊರಿ ಕಾರ್ಡ್ ಮೇಲೆ 2,4,6,10 ಎಂಬ ಸಂಖ್ಯೆಗಳು ಏಕಿರುತ್ತವೆ ಗೊತ್ತಾ?

Best Mobiles in India

Read more about:
English summary
Looking to get rid of some old junk? Your unused stuff could be someone else's treasure.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X