2016 ರ ಡಿಸೆಂಬರ್‌ಗಾಗಿ ಟಾಪ್‌ 5 ಆಂಡ್ರಾಯ್ಡ್ ಆಪ್‌ಗಳು

ಪ್ರಸ್ತುತ ಇರುವ ಆಂಡ್ರಾಯ್ಡ್ ಆಪ್‌ಗಳು ನಿಮಗೆ ಬೇಸರವಾಗಿದ್ದಲ್ಲಿ, ಈ 5 ಆಪ್‌ಗಳನ್ನು ಒಮ್ಮೆ ಡಿಸೆಂಬರ್‌ನಲ್ಲಿ ಟ್ರೈ ಮಾಡಿ.

Written By:

ಅಪ್ಲಿಕೇಶನ್‌ ಡೆವಲಪರ್‌ಗಳು ದಿನನಿತ್ಯ ಯಾವುದಾದರೊಂದು ಆಪ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಆದ್ರೆ ಹಲವು ಆಂಡ್ರಾಯ್ಡ್ ಆಪ್‌ಗಳು ದಿನನಿತ್ಯ ಲಾಂಚ್‌ ಆಗುತ್ತಿದ್ದು, ಎಲ್ಲಾ ಆಪ್‌ಗಳ ಮೇಲೆ ಗಮನಹರಿಸುವುದು ಕಷ್ಟಸಾಧ್ಯ.

2016 ರ ಡಿಸೆಂಬರ್‌ಗಾಗಿ ಟಾಪ್‌ 5 ಆಂಡ್ರಾಯ್ಡ್ ಆಪ್‌ಗಳು

ಅಪ್ಲಿಕೇಶನ್‌ ಅಭಿವೃದ್ದಿಗಾರರು ಆಪ್‌ ರಿಲೀಸ್ ಮಾಡುವುದರ ಮೂಲಕ, ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್ ಬಳಕೆದಾರರ ಅನುಭವ ಹೆಚ್ಚಿಸಲು ಪ್ರಯತ್ನಿಸುತ್ತಿರುತ್ತಾರೆ. ಗೂಗಲ್‌ ಪ್ಲೇ ಸ್ಟೋರ್‌ಗೆ ಭೇಟಿ ನೀಡಿದರೆ ಅಸಂಖ್ಯಾತ ಆಪ್‌ಗಳ ಸಂಗ್ರಹವನ್ನು ನೋಡಬಹುದು. ಅದ್‌ ಸರಿ. ಆದ್ರೆ ನಮಗೆ ಉಪಯೋಗವಾಗುವ ಬೆಸ್ಟ್ ಆಪ್‌ ಯಾವುದು ಎಂದು ಪತ್ತೆ ಹಚ್ಚುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸ. ಆದ್ದರಿಂದ ಇಂದಿನ ಲೇಖನದಲ್ಲಿ 2016 ಡಿಸೆಂಬರ್‌ಗೆ ಉತ್ತಮ ಆಂಡ್ರಾಯ್ಡ್ ಆಪ್‌ಗಳು ಯಾವುದು ಎಂದು ತಿಳಿಸುತ್ತಿದ್ದೇವೆ. ಯಾವುವು ಎಂದು ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫ್ರಿಂಗರ್ ಪ್ರಿಂಟ್ ಗೆಸ್ಚರ್ :Fingerprint Gestures)

ಆಪ್‌ ಫನ್‌ಗಾಗಿಯೇ ಇರುವ ಕಸ್ಟಮೈಜೇಶನ್‌ ಆಪ್‌. ಈ ಆಪ್‌ ಬಳಕೆದಾರರಿಗೆ ತಮ್ಮ ಫ್ರಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಬಳಸಲು ಅವಕಾಶ ನೀಡುತ್ತಿದೆ. ಬಳಕೆದಾರರು ಗೆಸ್ಚರ್‌ಗಳನ್ನು ಹಲವು ಪ್ಯಾಟರ್ನ್‌ಗಳ ಮೂಲಕ, ಹಲವು ಉದ್ದೇಶಗಳಿಗಾಗಿ ನಿಯೋಜಿಸಬಹುದು.

ಬಳಕೆದಾರರು ತಮ್ಮ ನೋಟಿಫಿಕೇಶನ್‌ಗಳನ್ನು ಫ್ರಿಂಗರ್‌ಪ್ರಿಂಟ್ ಸೆನ್ಸಾರ್ ಮೂಲಕ ಸ್ವೈಪ್ ಮಾಡಿ ಚೆಕ್ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕೋಸಾಫ್ಟ್ ಸೆಲ್ಫಿ (Microsoft Selfie)

ಮೈಕ್ರೋಸಾಫ್ಟ್ ಸೆಲ್ಫಿ ಆಪ್ ಸೆಲ್ಫಿ ಪ್ರೇಮಿಗಳಿಗಾಗಿಯೇ ಇರುವ ಕ್ಯಾಮೆರಾ ಆಪ್‌. ಆಪ್‌ ಉತ್ತಮ, ವರ್ಧಿತ, ನೈಸರ್ಗಿಕವಾಗಿ ಕಾಣುವ ಫೋಟೋಗಳನ್ನು ಸೆಕೆಂಡ್‌ನಲ್ಲಿ ಕ್ಯಾಪ್ಚರ್ ಮಾಡಲು ಸಹಾಯವಾಗಿದೆ.

ಗೂಗಲ್ ಫೋಟೋಸ್ಕ್ಯಾನ್

ಗೂಗಲ್‌ನ ಫೋಟೋಸ್ಕ್ಯಾನ್ ಇನ್ನೊಂದು ಕ್ಯಾಮೆರಾ ಆಪ್. ಈ ಆಪ್‌ ನಿಮ್ಮ ನೆಚ್ಚಿನ ಫೋಟೋಗಳನ್ನು ಸ್ಕ್ಯಾನ್‌ ಮಾಡಿ ಸೇವ್‌ ಮಾಡಲು ಸಹಾಯವಾಗಿದೆ. ಆಪ್‌ ಫೋಟೋ ಸ್ಕ್ಯಾನ್ ಮಾಡುವಾಗ ಔಟ್‌ಲೈನ್‌ ನೀಡಿ ಡಿವೈಸ್‌ನಲ್ಲೇ ಸೇವ್‌ ಮಾಡಲು ಸಹಾಯಕಾರಿಯಾಗಿದೆ. ಆಪ್‌ ಫೋಟೋಗಳಲ್ಲಿ ಫ್ರೇಮ್‌ ವ್ಯವಸ್ಥೆ ಮತ್ತು ಬ್ಯಾಗ್ರೌಂಡ್ ವ್ಯವಸ್ಥೆ ಎಡಿಟ್ ಮಾಡಲು ಸಹಾಯಕವಾಗಿದೆ.

ಜೀಸ್ (Zeus)

ಜೀಸ್ ಮ್ಯೂಸಿಕ್ ಸ್ಟ್ರೋಬ್ ಲೈಟ್ ಕುತೂಹಲಕಾರಿ ಆಪ್‌ ಆಗಿದ್ದು, ನಿಮ್ಮ ಫೋನ್ ಅನ್ನು ಸ್ಟ್ರೋಬ್ (ಭ್ರಮಣ ದರ್ಶಕ) ಮತ್ತು ಫ್ಲ್ಯಾಶ್ ಲೈಟ್ ಆಗಿ ಪರಿವರ್ತಿಸುತ್ತದೆ. ನಿಮ್ಮ ಸುತ್ತಮುತ್ತಲಿನ ಮ್ಯೂಸಿಕ್‌ಗೆ ಅನುಗುಣವಾಗಿ ಬೆಳಕು ನೀಡಲು ಸಹಾಯಕಾರಿಯಾಗಿದೆ. ಸಂಪೂರ್ಣ ನಿಯಂತ್ರಣದೊಂದಿಗೆ ಆಪ್‌ ಅನ್ನು ಬೆಳಕು ನೀಡಲು ಬಳಸಬಹುದು.

ಕ್ರಿಸ್‌ಮಸ್ ಉಚಿತ ಲೈವ್ ವಾಲ್‌ಪೇಪರ್

ಕ್ರಿಸ್‌ಮಸ್‌ ಸೀಸನ್ ಬಂದಾಯಿತು. ಪ್ಲೇ ಸ್ಟೋರ್‌ನಲ್ಲಿ ಹಲವು ಕ್ರಿಸ್‌ಮಸ್ ಆಪ್‌ಗಳು ಲಭ್ಯ. ಎಲ್ಲಾ ಬ್ಯೂಟಿಪುಲ್ ಆಪ್‌ಗಳು ಉಚಿತ ಕ್ರಿಸ್‌ಮಸ್ ವಾಲ್‌ಪೇಪರ್‌ಗಳನ್ನು ನೀಡಲಿದ್ದು, ಕ್ರಿಸ್‌ಮಸ್ ಆಚರಣೆಗೆ ಸ್ಪೂರ್ತಿ ನೀಡಬಲ್ಲವು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Top 5 Android Apps for December 2016. To know more visit kannada.gizbot.com
Please Wait while comments are loading...
Opinion Poll

Social Counting