ಅಪ್‌ಡೇಟ್ ಆಗಿದೆ "ಟ್ರೂ ಕಾಲರ್ ಆಪ್"!!..ಹಣವರ್ಗಾವಣೆ ಸೌಲಭ್ಯದ ಜೊತೆಗೆ ಇನ್ನೇನು?

ಭೀಮ್ ಆಪ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಮಾಡಬಹುದು ಎಂದು ಟ್ರೂ ಕಾಲರ್ ತಿಳಿಸಿದೆ.

Written By:

ಅಪರಿಚಿತ ಕರೆ ವಿವರಗಳನ್ನು ತಿಳಿದುಕೊಳ್ಳಲು ಮತ್ತು ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಲು ಉಪಯೋಗಿಸುವ ಟ್ರೂ ಕಾಲರ್ ಆಪರ್ ಇದೀಗ ಅಪ್‌ಡೇಟ್ ಆಗಿದೆ. ಬ್ಯಾಂಕಿಂಗ್, ರೀಚಾರ್ಜ್ ಮತ್ತು ವಿಡಿಯೊ ಕರೆಗಳಂತಹ ಹೊಸ ಹೊಸ ಸೌಲಭ್ಯಗಳೊಂದಿಗೆ ಟ್ರೂ ಕಾಲರ್ ಆಪ್ ಅಭಿವೃದ್ಧಿಪಡಿಸಲಾಗಿದೆ.!!

ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಟ್ರೂ ಕಾಲರ್ ಪೇ ಹೆಸರಿನ ಹೊಸ ಸೌಲಭ್ಯವನ್ನು ಟ್ರೂ ಕಾಲರ್ ಆಪ್ ಹೊಂದಿದ್ದು, ಈ ಆಯ್ಕೆಯ ಮೂಲಕ ಐಡಿ ಕ್ರಿಯೇಟ್ ಮಾಡಿ, ಭೀಮ್ ಆಪ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಮಾಡಬಹುದು ಎಂದು ಟ್ರೂ ಕಾಲರ್ ತಿಳಿಸಿದೆ.

ನೂತನ "ಜಿಯೋ ಫ್ಲೈಟ್" ಆಫರ್ ನೀಡಿದ ಅಂಬಾನಿ!! ಏನಿದು?

ಇನ್ನು ಇದರ ಜೊತೆಗೆ ಹಣ ವರ್ಗಾವಣೆ, ರೀಚಾರ್ಜ್‌ನಂತಹ ಹಲವು ಅತ್ಯುತ್ತಮ ಸೌಲಭ್ಯಗಳನ್ನು ಟ್ರೂ ಕಾಲರ್ ಆಪ್ ಹೊಂದಿದ್ದು, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗನಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಟ್ರೂ ಕಾಲರ್ ಹಣವರ್ಗಾವಣೆ

ಮೊದಲೇ ಹೇಳಿದಂತೆ ಟ್ರೂ ಕಾಲರ್ ಆಪ್ ಮೂಲಕ ಇದೀಗ ಹಣವರ್ಗಾವಣೆ ಮಾಡುವ ಸೌಲಭ್ಯವಿದ್ದು, ಇದಕ್ಕೆ "ಟ್ರೂ ಕಾಲರ್ ಪೇ" ಎಂದು ಹೆಚರಿಡಲಾಗಿದೆ.!! ವಾಟ್ಸ್‌ಆಪ್ ನಂತರ ಟ್ರೂ ಕಾಲರ್ ಈ ಫೀಚರ್ ಅಳವಿಡಿಕೊಳ್ಳುತ್ತಿದೆ.!!

ನೆಟ್‌ ಸಂಪರ್ಕವಿಲ್ಲದೇ ಕಾರ್ಯನಿರ್ವಹಣೆ!!

ಏರ್‌ಟೆಲ್‌ ಟ್ರೂ ಕಾಲರ್ ಐಡಿ ಎಂಬ ಹೊಸ ಸೌಲಭ್ಯವನ್ನು ಟ್ರೂ ಕಾಲರ್ ಪರಿಚಯಿಸಿದ್ದು, ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಏರ್‌ಟೆಲ್‌ ಕಂಪೆನಿಯ ಅಪರಿಚಿತ ಕರೆಗಳ ವಿವರ ತಿಳಿದುಕೊಳ್ಳಬಹುದು. ಆದರೆ, ಇತರ ಕಂಪೆನಿಗಳ ಜೊತೆ ಟ್ರೂ ಕಾಲರ್ ಇನ್ನು ಒಪ್ಪಂದದ ಹತ್ತಿರವಿದೆ.!

ವಿಡಿಯೊ ಕರೆ!!

ವಾಟ್ಸ್‌ಆಪ್, ಸ್ಕೈಪ್‌ನಂತಹ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಟ್ರೂ ಕಾಲರ್, ಗೂಗಲ್ ಡ್ಯುಯೊ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದೆ. ಗೂಗಲ್ ಡ್ಯುಯೊ ಸಹಯೋಗದ ಮೂಲಕ ವಿಡಿಯೊ ಕರೆ ಮಾಡುವು ಸೌಲಭ್ಯವನ್ನು ನೂತನ ಟ್ರೂ ಕಾಲರ್ ಆಪ್ ಹೊಂದಿದೆ.

ಮೊಬೈಲ್ ರೀಚಾರ್ಜ್‌!!

ಹೊಸದಾಗಿ ರೀಚಾರ್ಜ್‌ ಸೌಲಭ್ಯವನ್ನು ಟ್ರೂ ಕಾಲರ್ ಆಪ್ ಹೊಂದಿದ್ದು, ಹಣವರ್ಗಾವಣೆ ಜೊತೆಗೆ ಮೊಬೈಲ್‌ ರೀಚಾರ್ಜ್ ಮಾಡುವ ಆಯ್ಕೆಯನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Ever since Unified Payments Interface (UPI) has been launched, online payments have become popular.to know morw visit to kannada.gizbot.com
Please Wait while comments are loading...
Opinion Poll

Social Counting