ವಾಟ್ಸಾಪ್‌ನಿಂದ ಹೊಸ ಫೀಚರ್ ಪರೀಕ್ಷೆ: 'ಸ್ಟೇಟಸ್'

ಇನ್‌ಸ್ಟಗ್ರಾಂ ಸ್ಟೋರೀಸ್ ರೀತಿಯಲ್ಲಿ ವಾಟ್ಸಾಪ್ 'ಸ್ಟೇಟಸ್‌' ಎಂಬ ಹೊಸ ಫೀಚರ್‌ ಅನ್ನು ಪರೀಕ್ಷೆ ನಡೆಸುತ್ತಿದೆ.

Written By:

ವಾಟ್ಸಾಪ್ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್‌'ನಲ್ಲಿ ಹೊಸ ಬೀಟಾ ಫೀಚರ್‌ ಅನ್ನು ಪ್ರಸ್ತುತದಲ್ಲಿ ಪರೀಕ್ಷೆ ನಡೆಸುತ್ತಿದೆ. ಈ ಫೀಚರ್ ಹೋಮ್‌ ಸ್ಕ್ರೀನ್‌ನಲ್ಲಿ ಹೊಸ ಟ್ಯಾಬ್‌ ಆಗಿ 'Status' ಎಂದು ಆಡ್‌ ಮಾಡಿದೆ. ಅಲ್ಲದೇ ಕಂಪನಿಯು ಹೊಸ ಕ್ಯಾಮೆರಾ ಟ್ಯಾಬ್‌ ಅನ್ನು ಕರೆ ಟ್ಯಾಬ್‌ ಪಕ್ಕದಲ್ಲಿ ಆಡ್‌ ಮಾಡಿದೆ. ಈ ಎರಡು ಫೀಚರ್‌ಗಳಿಂದ ಶೀಘ್ರ ಫೋಟೋ ಕ್ಯಾಪ್ಚರ್ ಮಾಡಬಹುದು.

ವಾಟ್ಸಾಪ್‌ನಿಂದ ಹೊಸ ಫೀಚರ್ ಪರೀಕ್ಷೆ: 'ಸ್ಟೇಟಸ್'

ಅಂದಹಾಗೆ ಹೊಸ 'Status' ಟ್ಯಾಬ್‌ ನಿರ್ದಿಷ್ಟ ಸ್ಟೋರಿಯನ್ನು ಶೇರ್‌ ಮಾಡಲು ಅವಕಾಶ ನೀಡುತ್ತದೆ. ಇದು ಇನ್‌ಸ್ಟಗ್ರಾಂನಲ್ಲಿ ಸ್ಟೋರಿ ಶೇರ್‌ ಮಾಡುವಂತ ಫೀಚರ್ ರೀತಿಯಲ್ಲೇ ಇದೆ.

ವಾಟ್ಸಾಪ್ ಲೇಟೆಸ್ಟ್ ವರ್ಸನ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಫೀಚರ್ ಪಡೆಯುವುದು ಹೇಗೆ?

ಸಾಮಾಜಿಕ ಜಾಲತಾಣ ದೈತ್ಯ ಮೊದಲಿಗೆ ತನ್ನ ಮೆಸೇಂಜರ್‌ ಆಪ್‌ನಲ್ಲಿ 'ಮೆಸೇಂಜರ್ ಡೇ' ಮತ್ತು ನಂತರ ಇನ್‌ಸ್ಟಗ್ರಾಂನಲ್ಲಿ 'ಇನ್‌ಸ್ಟಗ್ರಾಂ ಸ್ಟೋರೀಸ್' ಎಂದು ಪರಿಚಯಿಸಿತ್ತು. ಪ್ರಸ್ತುತದಲ್ಲಿ ಇದೇ ಫೀಚರ್‌ ಅನ್ನು ವಾಟ್ಸಾಪ್‌ನಲ್ಲಿ 'ಸ್ಟೇಟಸ್' ಎಂದು ಪರಿಚಯಿಸುತ್ತಿದೆ.

ವಾಟ್ಸಾಪ್‌ನಿಂದ ಹೊಸ ಫೀಚರ್ ಪರೀಕ್ಷೆ: 'ಸ್ಟೇಟಸ್'

ಹೊಸ 'ಸ್ಟೇಟಸ್' ಟ್ಯಾಬ್‌ಗೆ ಎಂಟರ್‌ ಆದಲ್ಲಿ, ಫೋಟೋ ಆಡ್‌ ಮಾಡಲು ಅಥವಾ ಟೆಕ್ಸ್ಟ್‌ ಶೇರ್ ಮಾಡಲು ಟೈಪಿಸಿ ಎಂದು ಕೇಳಲ್ಪಡುತ್ತಾರೆ. ಆದರೆ ಈ ಸ್ಟೇಟಸ್‌ ಟ್ಯಾಬ್‌ ಪಡೆದವರಿಗೆ ಗೊಂದಲ ಆಗುವಲ್ಲಿ ಸಂಶಯವಿಲ್ಲ. ಆದರೆ ಸ್ಟೇಟಸ್ ಅಪ್‌ಡೇಟ್‌ ಮಾಡಲು ಯಾವುದೇ ರೀತಿಯಲ್ಲಿ ಸಮಯದ ಲಿಮಿಟ್ ಸಹ ಇಲ್ಲ.

ಎಚ್ಚರ: ವಾಟ್ಸಾಪ್ ಮೋಸದ ಜಾಲ ಕೊಂಚ ಜಾಗರೂಕರಾಗಿರಿ

ಹಲವು ವಾಟ್ಸಾಪ್‌ ಬಳಕೆದಾರರು ಬದಲಾಯಿಸಲು ಪಾಪಪ್‌ ಆಗಿರುವ ಹೊಸ ಸ್ಕ್ರೀನ್ ಅಥವಾ ಸ್ಟೇಟಸ್ ಡಿಲೀಟ್ ಆಗಿದೆಯೇ ಎಂಬ ಅಚ್ಚರಿಯು ಆಗುತ್ತದೆ. ಆದರೆ ಈಗಾಗಲೇ ಅಪ್‌ಡೇಟ್‌ ಮಾಡಿರುವ ಸ್ಟೇಟಸ್ ಸೆಟ್ಟಿಂಗ್‌ನಲ್ಲಿ ಇರುತ್ತದೆ. ಅದನ್ನು ಡಿಲೀಟ್ ಮಾಡಿ ಬದಲಾಯಿಸಬಹುದು.

ವಾಟ್ಸಾಪ್‌ನಿಂದ ಹೊಸ ಫೀಚರ್ ಪರೀಕ್ಷೆ: 'ಸ್ಟೇಟಸ್'

ವಾಟ್ಸಾಪ್ ಇಂದಿಗೂ ಫೀಚರ್‌ ಅನ್ನು ಪರೀಕ್ಷೆ ಮಾಡುತ್ತಿದ್ದು, ಈ ಫೀಚರ್‌ ಮುಂದಿನ ದಿನಗಳಲ್ಲಿ ಲೈವ್‌ ಆಗಿ ಲಭ್ಯವಾಗಲಿದೆ. ಆದರೆ ಹಲವರು ಈ ಫೀಚರ್ ಈಗಾಗಲೇ ವಾಟ್ಸಾಪ್‌ ಬೆಟಾ ಆಂಡ್ರಾಯ್ಡ್ ಬಳಕೆದಾರರಿಗೆ ಲೈವ್ ಆಗಿ ಲಭ್ಯವಿದೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದಾರೆ. ಆದರೆ ಈ ಫೀಚರ್ ಅನ್ನು ಇದುವರೆಗೂ ಯಾರು ಸಹ ಪಡೆದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
WhatsApp is Testing a New Feature Called 'Status', Similar to Instagram Stories! To know more visit kannada.gizbot.com
Please Wait while comments are loading...
Opinion Poll

Social Counting