ವಾಟ್ಸ್‌ಆಪ್‌ನಿಂದ ಹೊಸ ಆಯ್ಕೆ: ಪಿಚ್ಚರ್ ಜೊತೆ ಸ್ಟೇಟಸ್ ಪೋಸ್ಟ್ ಮಾಡಬಹುದು

ವಾಟ್ಸ್‌ಆಪ್ ಸದ್ಯ ಪಿಚ್ಚರ್ ಸಮೇತ ಸ್ಟೇಟಸ್ ಅಪ್‌ಡೇಟ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ.

Written By:

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ದಿನಕ್ಕೊಂದು ಹೊಸ ಆಯ್ಕೆಗಳನನ್ನು ತನ್ನ ಬಳಕೆದಾರರಿಗೆ ನೀಡುತ್ತಿದ್ದು, ಈ ಹಿಂದೆ ಕಳುಹಿಸಿದ್ದ ಮೇಸೆಜ್ ಡೀಲಿಟ್ ಮಾಡುವ ಅವಕಾಶ ನೀಡಿದ್ದ ವಾಟ್ಸ್‌ಆಪ್ ಸದ್ಯ ಪಿಚ್ಚರ್ ಸಮೇತ ಸ್ಟೇಟಸ್ ಅಪ್‌ಡೇಟ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ.

ವಾಟ್ಸ್‌ಆಪ್‌ನಿಂದ ಹೊಸ ಆಯ್ಕೆ: ಪಿಚ್ಚರ್ ಜೊತೆ ಸ್ಟೇಟಸ್ ಪೋಸ್ಟ್ ಮಾಡಬಹುದು

ಓದಿರಿ: ಸ್ಮಾರ್ಟ್‌ಪೋನಿಂದಲೇ ಪಾನ್‌ಕಾರ್ಡ್‌ ಪಡೆಯಲು ಸಾಧ್ಯ..! ಇದಕ್ಕೆಂದೆ ಸಿದ್ಧವಾಗಿ ಆಪ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವಾಟ್ಸ್‌ಆಪ್‌ ಸ್ಟೇಟ್ಸಸ್:

ಇನ್‌ಸ್ಟಗ್ರಾಮ್‌ನಲ್ಲಿ ಪರಿಚಯಿಸಿದ್ದ ಸ್ಟೋರಿಯಂತೆ ವಾಟ್ಸ್‌ಆಪ್‌ ನಲ್ಲಿ ಸ್ಟೇಟನ್ ಆಪ್‌ಡೇಟ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ, ಕಳೆದ ಮೂರು ತಿಂಗಳಿಂದ ವಾಟ್ಸ್ಆಪ್ ಈ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಸಾಕಷ್ಟು ಶ್ರಮ ಪಟ್ಟಿದೆ. ಇದಕ್ಕೆ ವಾಟ್ಸ್‌ಆಪ್‌ ಸ್ಟೇಟ್ಸಸ್ ಎಂದು ನಾಮಕರಣ ಮಾಡಿದೆ.

ಸದ್ಯದಲ್ಲೇ ಬಿಟಾ:

ಈ ಹೊಸ ಆಯ್ಕೆಯೂ ಏಕಕಾಲಕ್ಕೆ ಐಎಸ್ಓ, ಆಂಡ್ರಾಯ್ಡ್ ಮತ್ತು ವಿಂಡೋಸ್ ಬಳಕೆದಾರರಿಗೆ ಲಭ್ಯವಿರಲಿದೆ. ಆದರೆ ವಾಟ್ಸ್ಆಪ್ ವೆಬ್‌ನಲ್ಲಿ ಇದು ಕಾರ್ಯನಿರ್ವಹಿಸಲಿದೆಯೇ ಎಂಬುದು ತಿಳಿದಿಲ್ಲ. ಈ ಹೊಸ ಆಯ್ಕೆ ಸದ್ಯದಲ್ಲೇ ಬಿಟಾ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ಇಮೇಜ್, ಜಿಫ್ ಮತ್ತು ವಿಡಿಯೋ ಬಳಕೆ

ಈ ಹೊಸ ಸ್ಟೇಟಸ್ ಆಪ್‌ಡೇಟ್ ಮಾಡುವುದಕ್ಕೆ ಇಮೇಜ್ ಬಳಸಿಕೊಳ್ಳಬಹುದಾಗಿದ್ದು, ಜಿಫ್ ಗಳನ್ನು ಮತ್ತು ವಿಡಿಯೋಗಳನ್ನು ಬಳಸಬಹುದಾಗಿದೆ. ಪ್ರತಿ ಸ್ಟೇಟಸ್ 24 ಗಂಟೆ ಮಾತ್ರ ಉಳಿಯಲಿದೆ ನಂತರ ಹಳೇ ಸ್ಟೇಟಸ್‌ಗಳನ್ನು ಮತ್ತೆ ಹುಡುಕಲು ಸಾಧ್ಯವಿಲ್ಲ.

ಲುಕ್ ಬದಲಾಗಿದೆ:

ಇದಕ್ಕಾಗಿ ವಾಟ್ಸ್ಆಪ್ ತನ್ನ ಲುಕ್ ಅನ್ನು ಸ್ಪಲ್ಪ ಬದಲಾಯಿಸಿಕೊಂಡಿದ್ದು, ಕಾಲ್‌ಗಳನ್ನು ಬಲ ಬದಿಯ ಕೊನೆಗೆ ತಳ್ಳಿದ್ದು, ಮೊದಲ ಚಾಟ್ಸ್, ನಂತರ ಮಧ್ಯದಲ್ಲಿ ಸ್ಟೇಟಸ್ ಇದ್ದು, ಕಾಲ್ ಈ ಕೊನೆಗೆ ಬಂದಿದೆ. ಒಟ್ಟಿನಲ್ಲಿ ವಾಟ್ಸ್ಆಪ್ ಇನ್ನು ಮುಂದೆ ಮತ್ತಷ್ಟು ಖ್ಯಾತಿಯನ್ನು ಪಡೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
WhatsApp has posted the first series of ‘Status’ updates on the revamped status featurethat the company is working on. to know more visit kananda.gizbot.com
Please Wait while comments are loading...
Opinion Poll

Social Counting