ವಾಟ್ಸಾಪ್'ನಲ್ಲಿ ಬರಲಿದೆ ಹೊಸ ಫೀಚರ್! ಒಂದೇ ಬಾರಿ ಹಲವಾರು ಕಾಂಟ್ಯಾಕ್ಟ್ಸ್ ಶೇರ್ ಮಾಡಬಹುದು

ಜನರ ವಿಶ್ವಾಸಗಳಿಸಿ ಅವರ ಆಸಕ್ತಿಯನ್ನು ಮತ್ತೆ ಗರಿಗೆದರಿಸಲು ವಾಟ್ಸಾಪ್ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಸದ್ಯ ವಾಟ್ಸಾಪ್ ತನ್ನ ಕಾಂಟ್ಯಾಕ್ಟ್ ಪ್ರೋಗ್ರಾಂನಲ್ಲಿ ಬದಲಾವಣೆ ತರಲು ಯೋಚಿಸುತ್ತಿದೆ

By Precilla Dias
|

ವಾಟ್ಸಾಪ್ ಯುವಜನರ ಫೇವರಿಟ್. ಆದರೆ ಇತ್ತೀಚೆಗೆ ಆ್ಯಪ್'ನಲ್ಲಾಗುತ್ತಿರುವ ಅಪ್ಡೇಟ್ಸ್ ಹಾಗೂ ಬರುತ್ತಿರುವ ಹೊಸ ಫೀಚರ್'ಗಳು ಭಾರೀ ಸುದ್ದಿಯಾಗುತ್ತಿವೆ. ಯುವಕ/ಯುವತಿಯರೂ ದಿನಗಳೆದಂತೆ ಇದರಿಂದ ದೂರ ಸರಿಯುತ್ತಿದ್ದಾರೆ. ಇನ್ನು ಸ್ಟೇಟಸ್ ಫೀಚರ್'ನ್ನು ನವೀಕರಿಸಿದ ಬಳಿಕವಂತೂ ಬಹುತೇಕ ಮಂದಿ ವಾಟ್ಸಾಪ್ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎನ್ನಬಹುದು.

ವಾಟ್ಸಾಪ್'ನಲ್ಲಿ ಬರಲಿದೆ ಹೊಸ ಫೀಚರ್!

ಜನರ ವಿಶ್ವಾಸಗಳಿಸಿ ಅವರ ಆಸಕ್ತಿಯನ್ನು ಮತ್ತೆ ಗರಿಗೆದರಿಸಲು ವಾಟ್ಸಾಪ್ ಇನ್ನಿಲ್ಲದ ಸಾಹಸ ಮಾಡುತ್ತಿದ್ದು, ನೂತನ ಫೀಚರ್'ಗಳನ್ನೂ ಪರಿಚಯಿಸುವ ಕಾರ್ಯಕ್ಕಿಳಿದಿದೆ. ಸದ್ಯ ವಾಟ್ಸಾಪ್ ತನ್ನ ಕಾಂಟ್ಯಾಕ್ಟ್ ಪ್ರೋಗ್ರಾಂನಲ್ಲಿ ಬದಲಾವಣೆ ತರಲು ಯೋಚಿಸುತ್ತಿದೆ. ಪ್ರಸ್ತುತ ಒಂದು ಬಾರಿ ಕೇವಲ ಒಂದೇ ಕಾಂಟ್ಯಾಕ್ಟ್ ಶೇರ್ ಮಾಡಲು ಸಾಧ್ಯವಿದೆ.

ಆದರೆ ಶೀಘ್ರದಲ್ಲೇ ಒಬ್ಬ ವ್ಯಕ್ತಿ ಒಂದು ಬಾರಿ ಹಲವಾರು ಕಾಂಟ್ಯಾಕ್ಟ್ಸ್'ಗಳನ್ನು ಕಳುಹಿಸಲು ಸಾಧ್ಯವಾಗುವಂತಹ ಫೀಚರ್ ಒಂದನ್ನು ಪರಿಚಯಿಸಲು ವಾಟ್ಸಾಪ್ ತಯಾರಿ ನಡೆಸುತ್ತಿದೆ.

ಈ ನೂತನ ಫೀಚರ್ ಈಗಾಗಲೇ ಲೇಟೆಸ್ಟ್ ಆ್ಯಂಡ್ರಾಯ್ಡ್'ನ ಬೀಟಾ ವರ್ಶನ್'ನಲ್ಲಿ ಲಭ್ಯವಿದೆ. ಹೀಗಾಗಿ ಇದನ್ನು ಅಧಿಕೃತವಾಗಿ ಪರಿಚಯಿಸುವ ಮುನ್ನ ಆಸಕ್ತಿ ಇರುವ ಬಳಕೆದಾರರು ಗೂಗಲ್ ಪ್ಲೇಯಲ್ಲಿರುವ ಈ ಬೀಟಾ ವರ್ಶನ್'ಗೆ ಸೈನ್ ಇನ್ ಆಗಿ ಬಳಸಬಹುದಾಗಿದೆ. ಕೆಲ ವರದಿಗಳನ್ವಯ ವಾಟ್ಸಾಪ್'ನ ಈ ಬೀಟಾ ವರ್ಶನ್ 2.17.122 ಹಾಗೂ 2.17.123 ನಡುವೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಓದಿರಿ: ಐಪಿಎಲ್ ಪ್ರಿಯರ ಕಿಕ್ ಏರಿಸಲು ಬರುತ್ತಿದೆ 'ಒಪೆರಾ ಕ್ರಿಕೆಟ್': ಏನಿದು? ಇಲ್ಲಿದೆ ಮಾಹಿತಿ'

ಕಾಂಟ್ಯಾಕ್ಟ್'ಗಳನ್ನು ಮೊದಲಿನಂತೆ ಶೇರ್ ಮಾಡಬಹುದು, ಆದರೆ ಇದನ್ನು ಬಳಸಿ ಒಂದೇ ಬಾರಿ ನೂರಕ್ಕೂ ಅಧಿಕ ಕಾಂಟ್ಯಾಕ್ಟ್ ಶೇರ್ ಮಾಡಬಹುದು. ಸದ್ಯ ಶೇರ್ ಮಾಡುವ ಗರಿಷ್ಟ ಮಿತಿಯನ್ನು ವಾಟ್ಸಾಪ್ ನಿಗದಿಪಡಿಸಿಲ್ಲ. ಇನ್ನು ಈ ಫೀಚರ್ ಮೂಲಕ ವೈಯುಕ್ತಿಕವಾಗಿ ಮಾತ್ರವಲ್ಲದೇ ಗ್ರೂಪ್'ಗಳಿಗೂ ಒಂದೇ ಬಾರಿ ಹಲವು ಕಾಂಟ್ಯಾಕ್ಟ್ಸ್'ಗಳನ್ನು ಕಳುಹಿಸಬಹುದಾಗಿದೆ. ಈ ಮೆಸೇಜ್'ಗಳನ್ನು ಸ್ವೀಕರಿಸುವ ವ್ಯಕ್ತಿ ಕೇವಲ ತನಗೆ ಬೇಕಾದ ಕಾಂಟ್ಯಾಕ್ಟ್ ಆಯ್ದುಕೊಂಡು ಸೇವ್ ಮಾಡಬಹುದು.

ಅದೇನಿದ್ದರೂ ಕಾಂಟ್ಯಾಕ್ಟ್ ಶೇರ್ ಮಾಡುವ ಆಯ್ಕೆ ಬಳಸುವುದು ಅತಿ ವಿರಳ ಹೀಗಾಗಿ ಈ ನೂತನ ಫೀಚರ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಬಳಕೆದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಷ್ಟೇ

Best Mobiles in India

English summary
WhatsApp is making its way into headlines nowadays because of the few updates it keeps releasing every now and then.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X