ನಿಮ್ಮದೇ ಸ್ಮಾರ್ಟ್‌ಫೋನ್‌ನಲ್ಲಿ ಹೈ-ರೆಸಲ್ಯೂಶನ್ ಫೋಟೋ ಕ್ಯಾಪ್ಚರ್‌ಗಾಗಿ 7 ಟಿಪ್ಸ್‌ಗಳು

Written By:

ಅತ್ಯಧಿಕ ಸ್ಮಾರ್ಟ್‌ಫೋನ್‌ ವಿಕಾಸದಿಂದ ಇಂದು ಯಾವುದೇ ಫೋಟೋ ತೆಗೆಯಲು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳನ್ನೇ ಬಳಸಲಾಗುತ್ತದೆ. ಆದರೂ ಸಹ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಫೋಟೋಗಳನ್ನು ಕ್ಯಾಪ್ಚರ್‌ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ಅಥವಾ ಉತ್ತಮ ಫೋಟೋಗಳಿಗಾಗಿಯೇ ಫ್ಯಾನ್ಸಿ ಕ್ಯಾಮೆರಾ ಖರೀದಿಸಿದರೆ, ಎಡಿಟಿಂಗ್‌ ಸಾಫ್ಟ್‌ವೇರ್ ಖರೀದಿ, ಇಂತಿಷ್ಟು ಸಮಯ ಮೀಸಲಿಡುವುದು ಮತ್ತು ಅದನ್ನು ಬಳಸುವುದು ಹೇಗೆ ಎಂದು ಕಲಿಯುವ ಕೆಲಸಗಳು ಹೆಚ್ಚಾಗುತ್ತವೆ.

ಆದರೆ ಈಗ ಸೂಪೇರಿಯರ್ ಮೆಗಾಪಿಕ್ಸೆಲ್ ಕ್ಯಾಮೆರಾ ಮಾಡ್ಯೂಲ್ಸ್ ಮತ್ತು ಫೋಟೋ ಎಡಿಟಿಂಗ್‌ ಆಪ್‌ಗಳು, ಇನೋವೇಟಿವ್ ಫಿಲ್ಟರ್‌ಗಳು ಇರುವ ಸ್ಮಾರ್ಟ್‌ಫೋನ್‌ಗಳಿಗೆ ಥ್ಯಾಂಕ್ಸ್ ಹೇಳಲೇಬೇಕು. ಯಾಕಂದ್ರೆ ಪ್ರಸ್ತುತ ದಿನಗಳಲ್ಲಿ ಹೈ ಕ್ವಾಲಿಟಿ ಫೋಟೋಗಳನ್ನು ಹೆಚ್ಚಿನ ಸಮಯ ತೆಗೆದುಕೊಳ್ಳದೇ ನಾವು ಕರೆ ಮಾಡಲು ಬಳಸುವ ಡಿವೈಸ್‌ಗಳಿಂದಲೇ ಕ್ಯಾಪ್ಚರ್‌ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಅದ್ಭುತ ಫೋಟೋಗಳನ್ನು(Photos) ಸೆರೆಹಿಡಿಯಲು ಸೀಕ್ರೇಟ್ ಫೀಚರ್‌ಗಳ ಹುಡುಕಾಟದಲ್ಲಿ ಇದ್ದಲ್ಲಿ, ಈ ಕೆಳಗಿನ ಟಿಪ್ಸ್‌ಗಳನ್ನು ಫಾಲೋ ಮಾಡಿ.

ಡ್ರೋನ್‌ ಸೆರೆಹಿಡಿದ ಭೂಮಿಯ ಅದ್ಭುತ ಸ್ಥಳಗಳ ನಿರ್ಬಂಧಿತ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಉತ್ತಮ ಬ್ಯಾಲೆನ್ಸ್‌ಗಾಗಿ ಗ್ರಿಡ್‌ಲೈನ್‌ಗಳನ್ನು ಬಳಸಿ

ಮೊಬೈಲ್ ಫೋಟೋಗಳ ಗುಣಮಟ್ಟ ಅಭಿವೃದ್ದಿಪಡಿಸಲು ಗ್ರಿಡ್‌ಲೈನ್‌ಗಳನ್ನು ಬಳಸಿ. ಫೋಟೋಗ್ರಫಿ ತತ್ವಗಳ ಪ್ರಕಾರ, ನೀವು ಸೆರೆಹಿಡಿಯಲು ಇಚ್ಚಿಸಿರುವ ವಸ್ತುವನ್ನು ಬ್ಯಾಲೆನ್ಸ್ ಮಾಡಲು ಗ್ರಿಡ್‌ಲೈನ್‌ಗಳನ್ನು ಬಳಸಿ .

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೆಗೆಟಿವ್ ಸ್ಪೇಸ್‌ ಅನ್ನು ಕವರ್‌ ಮಾಡದಿರಿ

ಫೋಟೋ ಕ್ಯಾಪ್ಚರ್ ಮಾಡುವಾಗ ನೆಗೆಟಿವ್‌ ಸ್ಪೇಸ್ ಎಂಬುದು ಖಾಲಿ ಸ್ಥಳವಾಗಿದ್ದು, ಅದನ್ನು ಕವರ್‌ ಮಾಡದಿರಿ. ಈ ಫೋಟೋದಲ್ಲಿ ನೆಗೆಟಿವ್‌ ಸ್ಪೇಸ್‌ ಅನ್ನು ಕಾಣಬಹುದು. ಇದು ಅನಗತ್ಯವಾಗಿದೆ.

ಪ್ರತಿಫಲನಗಳ ಜೊತೆ ಆಟವಾಡಿ

ಅಂದಹಾಗೆ ನೀರು ಮತ್ತು ಆಕಾಶದ ನಡುವೆ ಅದ್ಭುತವಾದ ಪ್ರಖ್ಯಾತತೆ ಇದೆ. ಇದು ಕಣ್ಣಿಗೆ ಯಾವಾಗಲು ಉಡುಗೊರೆಯೇ ಆಗಿದೆ. ನಿರ್ದಿಷ್ಟ ಸ್ಥಳಗಳಲ್ಲಿ ಫೋಟೋ ಕ್ಯಾಪ್ಚರ್ ಮಾಡುವಾಗ ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ಫೋಟೋ ರೀತಿಯ ಆಕರ್ಷಕ ಚಿತ್ರಗಳನ್ನು ಸೆರೆಹಿಡಿಯಬಹುದು. ನೀರು, ಕನ್ನಡಿ, ಸನ್‌ಗ್ಲಾಸ್, ನೀರು ಕುಡಿಯುವ ಗ್ಲಾಸ್, ಮೆಟಾಲಿಕ್ ಮೇಲ್ಮೈಗಳಲ್ಲಿಯೂ ಇಂತಹ ಪ್ರತಿಫಲನಗಳನ್ನು ಗಮನಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೀಡಿಂಗ್ ಲೈನ್ಸ್ ಬಳಸಿ

ಹಲವು ವೇಳೆ ಒಂದು ಲೈನ್ ನಿಮ್ಮ ಫೋಟೋವನ್ನು ಉತ್ತುಂಗ ಗುಣಮಟ್ಟಕ್ಕೆ ಕೊಂಡೊಯ್ಯಬಹುದು. ಈ ಲೈನ್‌ ಅನ್ನು ಲೀಡಿಂಗ್‌ ಲೈನ್‌ ಎಂದು ಕರೆಯಲಾಗುತ್ತದೆ. ಲೀಡಿಂಗ್ ಲೈನ್‌ ನೇರ, ವೃತ್ತಾಕಾರ, ಕರ್ಣೀಯವಾಗಿರಬಹುದು. ಚಿತ್ರ ಗಮನಿಸಿ

ಪುನರಾವರ್ತಿತ ಪ್ಯಾಟರ್ನ್‌ಗಳ ಮೇಲೆ ಕಣ್ಣಿಡಿ

ಕೆಲವು ವೇಳೆ ಪುನರಾವರ್ತಿತ ಲೈನ್, ಬಣ್ಣ, ಪ್ಯಾಟರ್ನ್‌, ಜಿಯೋಮೆಟ್ರಿಕ್ ವಿನ್ಯಾಸಗಳು ಫೋಟೋಗಳಿಗೆ ಒಂದು ಹೊಸ ಅರ್ಥ ನೀಡಬಹುದು. ಈ ಪ್ಯಾಟರ್ನ್‌ಗಳು ಇಮೇಜ್‌ ಗೆ ಪ್ರಬಲ ಪ್ರಭಾವ ಬೀರುತ್ತವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೂಮ್ ಮಾಡುವುದನ್ನು ತಪ್ಪಿಸಿ

ಫೋಟೋ ಕ್ಯಾಪ್ಚರ್ ಮಾಡುವಾಗ ಜೂಮ್‌ ಮಾಡುವುದು ಯಾವಾಗಲು ಆಕರ್ಷಕವಾಗಿದೆ. ಆದರೆ ಜೂಮ್‌ ಮಾಡಿ ಫೋಟೋ ಕ್ಯಾಪ್ಚರ್ ಮಾಡಿದರೆ ಬ್ಲರ್‌ ಅಗುತ್ತದೆ.

ಎಡಿಟ್ ಮಾಡಲು ಹೆದರದಿರಿ

ಸ್ಮಾರ್ಟ್‌ಫೋನ್ ಬಳಸಿ ಕಂಪೋಸಿಂಗ್ ಮಾಡಿ ಫೋಟೋ ತೆಗೆಯುವುದು ಮೊದಲ ಸ್ಟೆಪ್‌. ಫೋಟೋಗಳನ್ನು ಒಟ್ಟುಗೂಡಿಸಲು ಹೆದರದೇ ಎಡಿಟಿಂಗ್ ಮಾಡುವುದು ಎರಡನೇ ಸ್ಟೆಪ್. ಆದರೆ ಹೆಚ್ಚು ಫಿಲ್ಟರ್‌ಗಳನ್ನು ಬಳಸುವುದನ್ನು ತಪ್ಪಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
7 Tips to Capture High Resolution Photos from Your Smartphone. To know more visit kannada.gizbot.com
Please Wait while comments are loading...
Opinion Poll

Social Counting