ನೀವೂ ನೋಡಬನ್ನಿ ಗೂಗಲ್‌ನ ಕ್ಯಾಮೆರಾ ಅಪ್ಲಿಕೇಶನ್

By Shwetha
|

ನೀವು ಯಾವ ಮೊಬೈಲ್ ಫೋನ್‌ನ್ನಾದರೂ ಬಳಸಿ ಅಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಕ್ಯಾಮೆರಾ ಅಪ್ಲಿಕೇಶನ್ ಆಗಿದೆ. ಇದೀಗ ತಾನೇ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆಯಾಗಿರುವ ಹೊಸ ಹಾಗೂ ಸುಧಾರಿತ ಗೂಗಲ್ ಕ್ಯಾಮೆರಾ ಅಪ್ಲಿಕೇಶನ್ ಅನ್ನು ನೀವು ನೋಡಿರುವಿರಾ?

ಇದೊಂದು ಗೂಗಲ್‌ನ ಅನನ್ಯ ಕ್ಯಾಮೆರಾ ಅಪ್ಲಿಕೇಶನ್ ಆಗಿದ್ದು ವಿಶಿಷ್ಟ ತಂತ್ರಜ್ಞಾನಗಳಿಂದ ಗಮನಸೆಳೆಯುವಂತಿದೆ. ಇದನ್ನು ನೀವು ಪ್ಲೇ ಸ್ಟೋರ್ ಅಥವಾ ಎಪಿಕೆ ಫೈಲ್ ಅನ್ನು ಇಲ್ಲಿ ಕೂಡ ನೀವು ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಲೆನ್ಸ್ ಬ್ಲರ್ ಹಾಗೂ ಫೋಟೋ ಸ್ಪಿಯರ್ ಎಂಬ ಹೆಸರಿನ ಉತ್ತಮ ಫೀಚರ್‌ಗಳು ಇದರಲ್ಲಿದ್ದು ನಿಮ್ಮ ಫೋಟೋದ ಗುಣಮಟ್ಟವನ್ನು ಅತ್ಯುನ್ನತ ಶ್ರೇಣಿಗೆ ಕೊಂಡೊಯ್ಯುತ್ತದೆ.

ಸುಧಾರಿತ ತಂತ್ರಜ್ಞಾನಗಳನ್ನು ಹೆಚ್ಚಾಗಿ ಇದರಲ್ಲಿ ಬಳಸಲಾಗಿದ್ದು ನಿಮಗೆ ಬೇಕಾದ ಹಾಗೆ ಇದರಲ್ಲಿ ಫೋಟೋವನ್ನು ಸಂಪಾದಿಬಹುದಾಗಿದೆ. ಇದರ ವಿನ್ಯಾಸ ಹಾಗೂ ಕಾರ್ಯವೈಖರಿ ನಿಜಕ್ಕೂ ಬೆರಗನ್ನು ಮೂಡಿಸುವಂತಿದೆ. ಹಾಗಿದ್ದರೆ ಬನ್ನಿ ಇದರ ಎರಡು ವೈಶಿಷ್ಟ್ಯಗಳನ್ನು ವಿಷದವಾಗಿ ಅರಿತುಕೊಳ್ಳೋಣ.

#1

#1

ಹಿನ್ನಲೆಯನ್ನು ಬ್ಲರ್ ಮಾಡಿ ಟಾರ್ಗೆಟ್ ಅನ್ನು ಮಾತ್ರ ಫೋಕಸ್ ಮಾಡುವ ವಿಶಿಷ್ಟತೆ ಇದರಲ್ಲಿದೆ. ಸಿಂಗಲ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ವೈಶಿಷ್ಟ್ಯ ಇದಾಗಿದ್ದು ಈ ಅಪ್ಲಿಕೇಶನ್ ಮೂಲಕ ನಿಮ್ಮ ಫೋನ್‌ಗಳಲ್ಲೀ ನೀವು ಇದನ್ನು ಪಡೆದುಕೊಳ್ಳಬಹುದಾಗಿದೆ.
ನೀವು ಫೋಟೋ ತೆಗೆದ ನಂತರ ಬ್ಲರ್ ಲೆವೆಲ್ ಅನ್ನು ಹೊಂದಿಸಿಡಬಹುದು. ಒಟ್ಟಾರೆ ನೀವು ತೆಗೆದ ಫೋಟೋಗೂ ಮತ್ತು ಹಿನ್ನಲೆಗೂ ಇರುವ ವ್ಯತ್ಯಾಸವನ್ನು ಇದು ಚೆನ್ನಾಗಿ ತಿಳಿಯಪಡಿಸುತ್ತದೆ ಎಂದಾಗಿದೆ.

#2

#2

ಪನೋರಮಾ ಮೋಡ್ ಅನ್ನು ನೀಡುವ ಒಂದು ಫೋಟೋ ಅಪ್ಲಿಕೇಶನ್ ಇದಾಗಿದ್ದು ನಿಮಗೆ ಇಷ್ಟವಾಯಿತೆಂದರೆ ಇದು ಚೆನ್ನಾಗಿಯೇ ನಿಮ್ಮನ್ನು ನಿಪುಣರನ್ನಾಗಿಸುತ್ತದೆ. ಫೋಟೋ ಸ್ಪಿಯರ್ ಅನ್ನು ನೀವು ನಿಮ್ಮ ಡಿವೈಸ್‌ಗೆ ಅನ್ವಯಿಸಿದೊಡನೆ ನಾಲ್ಕು ಪಾಯಿಂಟ್‌ಗಳನ್ನು ಕಾಣಬಹುದು. ಬಲ, ಎಡ, ಕೆಳಗೆ, ಮೇಲೆ ಹೀಗೆ ನಾಲ್ಕು ಪಾಯಿಂಟ್‌ಗಳು ನಿಮಗೆ ಫೋಟೋದ ಮೇಲೆ ಗೋಚರಿಸುತ್ತದೆ. ಈ ಡಾಟ್ ಅಥವಾ ಪಾಯಿಂಟ್‌ಗಳು ನಿಮ್ಮ ಸಾಧನದಲ್ಲಿರುವ ಕ್ಯಾಮೆರಾಗೆ ಸೂಕ್ತವಾದ ಫೋಟೋ ಸ್ಪಿಯರ್ ಅನ್ನು ರಚಿಸಲು ಸಹಾಯ ಮಾಡುತ್ತದೆ. ಪೂರ್ಣ 360 ಡಿಗ್ರಿಗಳಷ್ಟು ಅಳತೆಯಲ್ಲಿ ನೀವು ಇದನ್ನು ಮಾಡಬಹುದಾಗಿದೆ. 50 ಮೆಗಾಪಿಕ್ಸೆಲ್‌ವರೆಗಿನ ಫೋಟೋಗಳನ್ನು ಇದರ ಮೂಲಕ ನಿಮಗೆ ತೆಗೆಯಬಹುದಾಗಿದೆ.

#3

#3

ಹೆಚ್ಚಿನ ಎತ್ತರದಲ್ಲಿ ಪೂರ್ಣ ಪ್ರಮಾಣದ ದೃಶ್ಯವನ್ನು ನೀವು ಸುಧಾರಿತ ಪನೋರಮಾದಲ್ಲಿ ತೆಗೆಯಬಹುದಾಗಿದೆ. ಸೂಕ್ಷ್ಮವಾಗಿ ಇದರಲ್ಲಿ ಫೋಟೋವನ್ನು ತೆಗೆಯಬಹುದಾಗಿದೆ.

#4

#4

ತಪ್ಪಾದ ದೃಷ್ಟಿಕೋನದಲ್ಲಿ ನೀವು ತೆಗೆದ ವೀಡಿಯೋ ಮುಕ್ತಾಯಗೊಳ್ಳುವದನ್ನು ನೀವು ಇಷ್ಟಪಡುವಿರಾ? ಫೋಟೋ ಆಗಲಿ ವೀಡಿಯೋವೇ ಆಗಲಿ ಅದನ್ನು ಬೇಕಾದ ಹಾಗೆ ಸುಲಭವಾಗಿ ತಿರುಗಿಸುವುದು ಕಷ್ಟಕರ ವಿಷಯವಾಗಿದೆ. ನೀವು ಲಂಬವಾದ ಮೋಡ್‌ನಲ್ಲಿ ವೀಡಿಯೋವನ್ನು ತೆಗೆಯಲು ಪ್ರಯತ್ನಿಸುವಾಗ ಈ ಕ್ಯಾಮೆರಾ ಅಪ್ಲಿಕೇಶನ್ ಸಾಧನವನ್ನು ತಿರುಗಿಸಲು ನಿಮಗೆ ನೆನಪಿಸುತ್ತದೆ. ನೀವು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನಿಮಗೆ ಬೇಕಾದ ರೀತಿಯಲ್ಲಿ ಈ ವೀಡಿಯೋವನ್ನು ದಾಖಲಿಸಬಹುದು.

#5

#5

ನಿಮ್ಮ ಹಿಂದಿನ ಕ್ಯಾಮೆರಾ ಅಪ್ಲಿಕೇಶನ್‌ನಿಂದಾಗಿ ನೀವು ಬೇಜಾರುಗೊಂಡಿರುವಿರಾ? ಹಾಗಿದ್ದರೆ ಈ ಸುಧಾರಿತ ಉತ್ತಮ ಇಂಟರ್ಫೇಸ್ ವ್ಯವಸ್ಥೆ ನಿಮಗೆ ಸಹಕರಿಸುವಂತಿದೆ. ಇದರಲ್ಲಿರುವ ಕ್ಯಾಮೆರಾ ಫೀಚರ್‌ಗಳ ನಿರ್ವಹಣೆ ತುಂಬಾ ಸುಲಭವಾಗಿದೆ. ಕೆಳಬಲ ಭಾಗದಲ್ಲಿ ಮೆನು ಬಟನ್ ಅನ್ನು ಸ್ಪರ್ಶಿಸುವ ಮೂಲಕ ಬಲಕ್ಕೆ ಸ್ವೈಪ್ ಮಾಡುವ ಅಂಶ ಇದರಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X