ಫೋಟೋಗ್ರಫಿ ಬಗ್ಗೆ ತಿಳಿಯಲೇಬೇಕಾದ 10 ಸತ್ಯಾಂಶಗಳು

By Suneel
|

ಪ್ರಪಂಚದಾದ್ಯಂತ ಫೋಟೋಗ್ರಾಫರ್‌ಗಳು ಇದ್ದಾರೆ. ಫ್ಯಾಷನ್‌, ಕ್ರೀಡೆ, ವೈಲ್ಡ್‌ಲೈಪ್, ಆಕ್ಷನ್‌, ಪೆಟ್‌ ಫ್ರೋಟೋಗ್ರಾಫರ್‌ಗಳು ಎಂದು 50 ಕ್ಕೂ ಹೆಚ್ಚಿನ ವಿಧದ ಫೋಟೋಗ್ರಾಫರ್‌ಗಳು ಪ್ರಪಂಚದಾದ್ಯಂತ ಇದ್ದಾರೆ. ಅಂದಹಾಗೆ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದ ಮೇಲಂತು ಸೆಲ್ಫಿ ಫೋಟೋಗ್ರಾಫರ್‌ಗಳು ಹೆಚ್ಚಾಗಿದ್ದಾರೆ.

ಸ್ಮಾರ್ಟ್‌ಫೋನ್‌ ಕೈಯಲ್ಲಿ ಹಿಡಿದು ಆಗಾಗ ಸೆಲ್ಫಿ ಕ್ಲಿಕ್ಕಿಸುವವರಲ್ಲೇ ಹಲವು ಸೆಲ್ಫಿ ಫೋಟೋಗ್ರಾಫರ್‌ಗಳು ಇದ್ದಾರೆ. ಅಂದಹಾಗೆ ಭಯಾನಕ ವಿಷಯ ಎಂದರೆ ಸ್ಕೇರಿ ಸೆಲ್ಫಿ ಫೋಟೋಗ್ರಾಫರ್‌ಗಳು ಬೆಟ್ಟದ ತುದಿಯಲ್ಲಿ, ರೈಲು ಬರುವ ಅಳಿಯಲ್ಲಿ ನಿಂತು ಸಹ ಫೋಟೋ ಕ್ಲಿಕ್ಕಿಸುವುದುಂಟು. ಆದರೆ ಸೆಲ್ಫಿ ಕ್ಲಿಕ್ಕಿಸುವವರನ್ನು ಫೋಟೋಗ್ರಾಫರ್‌ಗಳೆಂದು ಕರೆಯಲು ಸಾಧ್ಯವಿಲ್ಲ. ಈ ಫೋಟೋಗ್ರಾಫರ್‌ಗಳ ಬಗ್ಗೆ ಏಕೆ ಹೇಳ್ತಿದ್ದೀವಿ ಎಂದರೆ ಸ್ಮಾರ್ಟ್‌ಫೋನ್‌ ಪ್ರಿಯರು, ಸೆಲ್ಫಿ ಪ್ರಿಯರು, ಫೋಟೋಗ್ರಾಫರ್‌ಗಳು, 'ಫ್ರೋಟೋಗ್ರಫಿ' ಬಗ್ಗೆ ತಿಳಿಯಲೇ ಬೇಕಾದ 10 ಸತ್ಯಾಂಶಗಳಿವೆ. ಈ ಸತ್ಯಾಂಶಗಳನ್ನು ಲೇಖನದಲ್ಲಿ ನೀಡುತ್ತಿದ್ದು, ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ವರ್ಲ್ಡ್‌ ಫೋಟೋಗ್ರಫಿ ಡೇ

ವರ್ಲ್ಡ್‌ ಫೋಟೋಗ್ರಫಿ ಡೇ

ಅಂದಹಾಗೆ 'ವರ್ಲ್ಡ್‌ ಫೋಟೋಗ್ರಫೀ ಡೇ'ಯನ್ನು ಆಗಸ್ಟ್‌ 19 ರಂದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. 1839 ಆಗಸ್ಟ್‌ 19 ರಂದು ಫ್ರೆಂಚ್‌ ಸರ್ಕಾರ ಫೋಟೋಗ್ರಫಿಯ "daguerreotype"ನ ಸ್ವಾಮ್ಯ ಪಡೆದು, ಪ್ರಪಂಚಕ್ಕೆ ಮುಕ್ತವಾಗಿ ಬಿಡುಗಡೆ ಮಾಡಿತು. ಅಂದಿನಿಂದ ಈ ದಿನವನ್ನು ಪ್ರಪಂಚದ ಫೋಟೋಗ್ರಫಿ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಫೋಟೋಗ್ರಫಿಕ್‌ ಪ್ರೊಸೆಸ್

ಫೋಟೋಗ್ರಫಿಕ್‌ ಪ್ರೊಸೆಸ್

ಫೋಟೋಗ್ರಫಿಕ್ ಫ್ರೊಸೆಸ್‌"Daguerreotype" anfnu 1837 ರಲ್ಲಿ ಅನ್ವೇಷಿಸಿ, ಇದು ಮೊಟ್ಟ ಮೊದಲ ಪ್ರಾಯೋಗಿಕ ಫೋಟೋಗ್ರಫಿಕ್ ಪ್ರೊಸೆಸ್ ಆಗಿದೆ.

 ಹೀಲಿಯೊಗ್ರಫಿ

ಹೀಲಿಯೊಗ್ರಫಿ

"Daguerreotype" ಫೋಟೋಗ್ರಫಿ ಪ್ರೊಸೆಸ್‌ಗಿಂತ ಹಿಂದೆ 'ಶಾಶ್ವತ ಫೋಟೋಗ್ರಫಿ ಇಮೇಜ್‌' ಎಂದು ಪ್ರಖ್ಯಾತವಾಗಿದ್ದ 'ಹೀಲಿಯೊಗ್ರಫಿ' ಪ್ರೊಸೆಸ್‌ ಇತ್ತು. ಇದನ್ನು 1826 ರಲ್ಲಿ ನಿರ್ಮಿಸಲಾಗಿತ್ತು.

 ಹೀಲಿಯೊಗ್ರಫಿ

ಹೀಲಿಯೊಗ್ರಫಿ

ಅಂದಹಾಗೆ ಹೀಲಿಯೊಗ್ರಫಿ ಪ್ರೊಸೆಸ್‌ ಮುಖಾಂತರ ಛಾಯಾಚಿತ್ರ ರಚಿಸಿ ಅನಾವರಣ ಮಾಡಲು 8 ಗಂಟೆಗಳ ಸಮಯ ಬೇಕಿತ್ತು.

ಡಿಜಿಟಲ್‌ ಕ್ಯಾಮೆರಾ

ಡಿಜಿಟಲ್‌ ಕ್ಯಾಮೆರಾ

ಥ್ಯಾಂಕ್ಸ್ ಹೇಳಿ ಡಿಜಿಟಲ್‌ ಮತ್ತು ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳಿಗೆ. ಪ್ರಪಂಚದಾದ್ಯಂತ 350 ಶತಕೋಟಿ ಫೋಟೋಗಳು ಇಂದು ಪ್ರತಿವರ್ಷ ಸೆರೆಹಿಡಿಯಲ್ಪಡುತ್ತಿವೆ.

ಫೇಸ್‌ಬುಕ್

ಫೇಸ್‌ಬುಕ್

250 ಶತಕೋಟಿ ಫೋಟೋಗಳು ಫೇಸ್‌ಬುಕ್‌ಗೆ ಅಪ್‌ಲೋಡ್ ಆಗುತ್ತಿವೆ.

ವಿಕ್ಟೋರಿಯಾ ರಾಣಿ

ವಿಕ್ಟೋರಿಯಾ ರಾಣಿ

ವಿಕ್ಟೋರಿಯಾ ರಾಣಿ ಮತ್ತು ಪ್ರಿನ್ಸ್‌ ಆಲ್ಬರ್ಟ್‌'ರವರು ತಮ್ಮ ವಿಂಡ್ಸರ್‌ ಕ್ಯಾಸಲ್‌ನಲ್ಲಿ ಡಾರ್ಕ್‌ರೂಮ್‌ ಅನ್ನು ಇನ್‌ಸ್ಟಾಲ್‌ ಮಾಡಿ ಛಾಯಾಗ್ರಹಣ ಮತ್ತು ಫ್ಯಾಷನ್‌ ಆಸೆಗಳ ಪೂರೈಕೆಗಾಗಿ ಬಳಸುತ್ತಿದ್ದರು.

ಚಂದ್ರನ ಫೋಟೋ

ಚಂದ್ರನ ಫೋಟೋ

ಮೊಟ್ಟ ಮೊದಲು ಚಂದ್ರನ ಫೋಟೋವನ್ನು 1851 ರಲ್ಲಿ ಸೆರೆಹಿಡಿಯಲಾಯಿತು. ನಂತರ ಚಂದ್ರನ ಮೊಟ್ಟ ಮೊದಲ ಕಪ್ಪು ಪ್ರದೇಶವನ್ನು 1959 ರಲ್ಲಿ ಸೆರೆಹಿಡಿಯಲಾಯಿತು.

ಫೋಟೋಗ್ರಾಫ್‌

ಫೋಟೋಗ್ರಾಫ್‌

ಮೊಟ್ಟ ಮೊದಲು ಇಂದು ಪ್ರಖ್ಯಾತವಾಗಿರುವ "ಫೋಟೋಗ್ರಾಫ್‌" ಪದವನ್ನು 1839 ರಲ್ಲಿ ಖಗೋಳಶಾಸ್ತ್ರಜ್ಞರಾದ 'ಸರ್‌ ಜಾನ್‌ ಹರ್ಸ್ಚೆಲ್' ಬಳಸಿದರು.

 Photo

Photo

ಮೊಟ್ಟ ಮೊದಲು 'Photo' ಪದದ ವಿಸ್ತರಣೆಯನ್ನು ರಾಣಿ ವಿಕ್ಟೋರಿಯಾ'ರವರು 1860 ರಲ್ಲಿ ಪತ್ರದಲ್ಲಿ ಬರೆದು ನೀಡಿದ್ದರು.

Best Mobiles in India

Read more about:
English summary
Top 10 facts about photography. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X