ಉತ್ತಮ ಫೋಟೋ ತೆಗೆಯಲು ಪ್ರಯೋಜನಕಾರಿ ಸಲಹೆಗಳು

By Shwetha
|

ಸ್ಮಾರ್ಟ್‌ಫೋನ್‌ಗಳು ಜನಸಾಮಾನ್ಯರ ಮೇಲೆ ಉಂಟುಮಾಡಿರುವಂತಹ ಪ್ರಭಾವ ಪರಿಣಾಮಕಾರಿಯಾದುದು. ಸ್ಮಾರ್ಟ್‌ಫೋನ್‌ಗಳಿಂದ ಕರೆ ಮಾಡುವುದನ್ನು ಹಿಡಿದು ಅದ್ಭುತ ಫೋಟೋಗ್ರಫಿಯನ್ನು ಕೂಡ ತೆಗೆಯಬಹುದು ಎಂಬ ಅಂಶವನ್ನು ನೀವು ಗಮನಿಸಿದ್ದೀರಾ.

ಇದನ್ನೂ ಓದಿ: ಕಂಪ್ಯೂಟರ್‌ಗೆ ದಿಗ್ಬಂಧನ ಹೀಗಿರಲಿ

ಇನ್ನು ನೀವು ತೆಗೆದ ಫೋಟೋಗ್ರಫಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಅತಿ ಸರಳ ಕಲೆಗಳನ್ನು ನಿಮ್ಮ ಸ್ಮಾರ್ಟ್‌ಫೋನ್ ಒಳಗೊಂಡಿದೆ ಮತ್ತು ಹಲವಾರು ಆಧುನಿಕ ತಂತ್ರಗಳು ಇದಕ್ಕಾಗಿ ರೂಪುಗೊಂಡಿವೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ ಮೇಲೆ ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ

ಇನ್ನು ಎಲ್ಲಾ ಕ್ಯಾಮೆರಾಗಳು ಈ ವಿಭಿನ್ನ ತಂತ್ರಗಾರಿಕೆಯನ್ನು ಹೊಂದಿರಬೇಕು ಎಂದೇನಿಲ್ಲ. ಮ್ಯಾನುವಲ್ ಫೋಕಸ್ ಅಥವಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿರುವ ಕ್ಯಾಮೆರಾ ಫೋನ್‌ಗಳು ಅತಿ ವಿರಳವಾಗಿವೆ. ಆದರೂ ಕೆಲವೊಂದು ಮೂಲ ಸ್ಮಾರ್ಟ್‌ಫೋನ್‌ಗಳು ಅತ್ಯದ್ಭುತ ವಿಶೇಷತೆಗಳನ್ನು ಒದಗಿಸುತ್ತಿದ್ದು ನಿಮ್ಮ ಫೋನ್‌ನಲ್ಲೂ ಹೆಚ್ಚು ಕ್ಲಾರಿಟಿಯ ಮತ್ತು ಸುಂದರ ಫೋಟೋಗಳನ್ನು ತೆಗೆಯಬೇಕು ಎಂದಾದಲ್ಲಿ ಕೆಲವೊಂದು ಫೋಟೋ ಸಲಹೆಗಳನ್ನು ನೀವು ತಿಳಿದಿರಲೇಬೇಕು.

ಇದನ್ನೂ ಓದಿ: ಸಪ್ಟೆಂಬರ್ ತಿಂಗಳ ಫೋನ್ ಲಾಂಚ್ ಸುಗ್ಗಿ

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಫೋಟೋಗ್ರಫಿ ಸಲಹೆಗಳು ನಿಜಕ್ಕೂ ನಿಮಗೆ ಪ್ರಯೋಜನಕಾರಿಯಾಗಲಿದ್ದು ಇದರ ಮೂಲಕ ಸುಂದರ ಚಿತ್ರಗಳನ್ನು ನಿಮಗೆ ತೆಗೆಯಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡು ಈ ಪರಿಣಾಮಕಾರಿ ಚಿತ್ರಗಳನ್ನು ತೆಗೆಯಬಹುದಾಗಿದ್ದು ನಿಜಕ್ಕೂ ಇದು ನಿಮಗೆ ಖುಷಿಯನ್ನು ನೀಡುತ್ತದೆ.

#1

#1

ಸಾಮಾನ್ಯವಾಗಿ, ಸ್ಮಾರ್ಟ್‌ಫೋನ್‌ಗಳಲ್ಲಿರುವ ಸೆನ್ಸಾರ್‌ಗಳು ಬೆಳಕಿನ ತೀಕ್ಷ್ಣತೆ ಕಡಿಮೆ ಇದ್ದಾಗ ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ನೀವು ಫೋಟೋ ತೆಗೆಯುವ ವಸ್ತುವನ್ನು ಖಾತ್ರಿಪಡಿಸುವುದು ಅತಿ ಮುಖ್ಯವಾಗಿದೆ.

#2

#2

ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಜೂಮ್ ಮಾಡಬಹುದಾದ ವಿಶೇಷತೆಗಳನ್ನು ಹೊಂದಿರುತ್ತದೆ. ಆದರೆ ಕೆಲವೊಂದು ಫೋನ್‌ಗಳು ಮಾತ್ರವೇ ಬಿಲ್ಟ್ ಇನ್ ಆಪ್ಟಿಕಲ್ ಜೂಮ್ ಫೀಚರ್ ಅನ್ನು ಹೊಂದಿರುತ್ತದೆ. ಉತ್ತಮ ಚಿತ್ರವನ್ನು ಪಡೆದುಕೊಳ್ಳಲು ಜೂಮ್ ಫೀಚರ್ ಅನ್ನು ಬಳಸದಿರಿ.

#3

#3

ಸ್ಮಾರ್ಟ್‌ಫೋನ್‌ನಲ್ಲಿ ಎಚ್‌ಡಿಆರ್ ಮೋಡ್ ನಿಜಕ್ಕೂ ಗಮನಾರ್ಹವಾಗಿದೆ. ಎಚ್‌ಡಿಆರ್ ಮೋಡ್‌ನಲ್ಲಿ ಎರಡು ವಿಭಿನ್ನ ಎಕ್ಸ್‌ಪೋಶರ್ ಉಳ್ಳ ಚಿತ್ರಗಳನ್ನು ತೆಗೆಯಬಹುದಾಗಿದ್ದು ನಂತರ ಇವುಗಳನ್ನು ಒಗ್ಗೂಡಿಸಿ ಹೆಚ್ಚು ಡೈನಾಮಿಕ್ ಶ್ರೇಣಿಯ ಚಿತ್ರವನ್ನು ಉತ್ಪಾದಿಸಬಹುದಾಗಿದೆ. ನೆರಳನ್ನು ಸೆರೆಹಿಡಿಯಲು, ಹೆಚ್ಚುವರಿ ಬೆಳಕಿನ ಸಂದರ್ಭದಲ್ಲಿ ಈ ಅಂಶ ಪ್ರಯೋಜನಕಾರಿಯಾಗಿರುತ್ತದೆ.

#4

#4

ಪರದೆಯಲ್ಲಿರುವ ಆನ್ ಸ್ಕ್ರೀನ್ ಟಚ್ ಬಟನ್‌ಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

#5

#5

ಉತ್ತಮ ಚಿತ್ರವನ್ನು ಮಾಡಲು ಎಡಿಟಿಂಗ್ ಅಂಶ ಕೂಡ ಪರಿಣಾಮಕಾರಿಯಾಗಿರಬೇಕು. ಅಪ್ಲಿಕೇಶನ್ ಸ್ಟೋರ್‌ನಿಂದ ಉತ್ತಮ ಗುಣಮಟ್ಟದ ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿ.

Best Mobiles in India

English summary
This article tells about Top 5 Tips For Better Smartphone Photography in a simple way. Its very good tips to take natural photos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X