ಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು

By Suneel
|

1975 ರಲ್ಲಿ ಸ್ಥಾಪನೆಯಾದ ಮೈಕ್ರೋಸಾಫ್ಟ್‌ ಕಂಪನಿ ಇಂದು ತನ್ನ ಪ್ರಖ್ಯಾತಿಯನ್ನು ಪ್ರಪಂಚದಾದ್ಯಂತ ಪಡೆದಿರುವುದು ಎಲ್ಲರಿಗೂ ಗೊತ್ತೇಇದೆ. ಅಂದು ಬಿಲ್‌ ಗೇಟ್ಸ್‌ ಮತ್ತು ಪಾಲ್‌ ಅಲ್ಲೆನ್‌'ರವರು ಜೊತೆಗೂಡಿ ಸ್ಥಾಪಿಸಿದ ಕಂಪನಿ ಇಂದು ಸತ್ಯ ನಾಡೆಲ್ಲಾ'ರವರ ಸಿಇಓ ನಾಯಕತ್ವದಲ್ಲಿ ದಿನದಿಂದ ದಿನಕ್ಕೆ ಪಿಸಿ ಅಭಿವೃದ್ದಿ ಕ್ಷೇತ್ರದಲ್ಲಿ ಏಳಿಗೆ ಪಡೆಯುತ್ತಲೇ ಇದೆ. ಕಂಪ್ಯೂಟರ್‌ ಸಾಫ್ಟ್‌ವೇರ್‌ ಸಂಶೋಧನೆ ಕ್ಷೇತ್ರದಲ್ಲಿ ವಿಂಡೋಸ್‌ ಓಎಸ್‌, ವಿಂಡೋಸ್‌ ಮೊಬೈಲ್‌, ವಿಂಡೋಸ್‌ ಟ್ಯಾಬ್ಲೆಟ್‌ಗಳ ಪ್ರಾಡಕ್ಟ್‌ಗಳನ್ನು ಹೊರತು ಪಡಿಸಿ ಯೋಚಿಸಿದರೆ ಮೈಕ್ರೋಸಾಫ್ಟ್‌ ಬಗ್ಗೆ ತಿಳಿದಿರುವ ವಿಷಯವಾದ್ರು ಏನು ಎಂದು ಪ್ರಶ್ನೆ ಹಾಕಿಕೊಂಡರೆ ಉತ್ತರಗಳು ಬಹಳಷ್ಟು ಕಡಿಮೆ. ಹೌದು, ಇದು ನಿಜ. ಯಾಕಂದ್ರೆ ಮೈಕ್ರೋಸಾಫ್ಟ್‌ ಟೆಕ್‌ ಕಂಪನಿ ಬಗ್ಗೆ ಯಾರೂ ತಿಳಿಯದ ಕೆಲವು ಅದ್ಭುತ ಮಾಹಿತಿಗಳು ಇವೆ. ಅವುಗಳನ್ನು ಕನ್ನಡ ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ತಿಳಿಯಿರಿ.

1

1

1997 ರಲ್ಲಿ ಮೈಕ್ರೋಸಾಫ್ಟ್‌ ಕಂಪನಿ ಆಪಲ್‌ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿ ದಿವಾಳಿತನವನ್ನು ತಪ್ಪಿಸಿತ್ತು. ಮೈಕ್ರೋಸಾಫ್ಟ್‌ $150 ಮಿಲಿಯನ್‌ ಡಾಲರ್‌ ಹೂಡಿಕೆ ಹಣ ನೀಡುವ ಮೂಲಕ ಆಪಲ್‌ ಅನ್ನು ಸಂಕಷ್ಟದಿಂದ ಪಾರುಮಾಡಿತ್ತು. ಇದನ್ನು ಸ್ಟೀವ್ ಜಾಬ್ಸ್‌'ರವರು ಸಿಇಓ ಆದಾಗ ವೇದಿಕೆಯೊಂದರಲ್ಲಿ ಹೇಳಿದ್ದರು.

2

2

ಬಿಲ್‌ ಗೇಟ್ಸ್‌'ರವರು 1987 ರಲ್ಲಿಯೇ ಅತಿ ಕಿರಿಯ ಬಿಲಿಯನೇರ್‌ ಎಂದು ಹೆಸರು ಪಡೆದಿದ್ದರು. ಅಲ್ಲದೇ 1995 ರಲ್ಲಿ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಸೇರಿದರು.

3

3

ಬಿಲ್‌ ಗೇಟ್ಸ್‌ ನಂತರದಲ್ಲಿ ಮೈಕ್ರೋಸಾಫ್ಟ್‌ 12,000 ಲಕ್ಷಾಧಿಪತಿಗಳನ್ನು ಸೃಷ್ಟಿಸಿದೆ.

4

4

ಕೇವಲ ಒಂದೇ ದಿನದಲ್ಲಿ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕರಾದ ಬಿಲ್‌ ಗೇಟ್ಸ್‌ ಮತ್ತು ಪಾಲ್‌ ಅಲ್ಲೆನ್‌'ರವರು ಮೈಕ್ರೋಸಾಫ್ಟ್‌ ಕಂಪನಿಯ ಲೋಗೋ ವಿನ್ಯಾಸಗೊಳಿಸಿದ್ದರು.

5

5

ವಿಂಡೋಸ್‌ 95'ನ ಥೀಮ್‌ ಸಾಂಗ್‌ ಅನ್ನು ಪ್ರಖ್ಯಾತ ಸಂಗೀತಗಾರ ಬ್ರಿಯನ್‌ ಇನೊ ಬರೆದು ಹಾಡಿದ್ದಾರೆ. Start Me Up ಓಎಸ್‌ನ ಅಧಿಕೃತ ಥೀಮ್‌ ಸಾಂಗ್‌ ಆಗಿದೆ.

6

6

ಮೈಕ್ರೋಸಾಫ್ಟ್‌ನ ಮೊದಲ ಕಿಲ್ಲರ್‌ ಆಪ್‌ "ಮೈಕ್ರೋಸಾಫ್ಟ್‌ ಎಕ್ಸೆಲ್‌"

7

7

ಮೈಕ್ರೋಸಾಫ್ಟ್‌ನ ಉದ್ಯೋಗಿಗಳು ಕೆಲಸ ವಾರ್ಷಿಕೋತ್ಸವದ ಅಂಗವಾಗಿ M&Ms(ಚಾಕೋಲೇಟ್‌) ಅನ್ನು ತಂದು ಹಂಚಲು ಬಯಸುತ್ತಾರೆ.

8

8

ಮೈಕ್ರೋಸಾಫ್ಟ್ ಫಂಕಿ ಫ್ಯೂಚರಿಸ್ಟಿಕ್‌ "HoloLens" ಹೆಡ್‌ಸೆಟ್‌ ಸೇರಿದಂತೆ 48,313 ಪೇಟೆಂಟ್‌ಗಳನ್ನು ಹೊಂದಿದೆ

 9

9

ಮೊದಲ ಸ್ಮಾರ್ಟ್‌ವಾಚ್‌ ಅನ್ನು 1994'ರಲ್ಲಿ ಟೈಮೆಕ್ಸ್‌ ಮತ್ತು ಮೈಕ್ರೋಸಾಫ್ಟ್‌ "Datalink" ಸ್ಮಾರ್ಟ್‌ವಾಚ್ ಅನ್ನು ವಿನ್ಯಾಸಗೊಳಿಸಿ ಮೊಟ್ಟ ಮೊದಲ ಬಾರಿಗೆ ಲಾಂಚ್‌ ಮಾಡಿತು.

10

10

1988 ರಲ್ಲಿ ಬಿಲ್‌ ಗೇಟ್ಸ್‌ 66,000 ಚದರ ಅಡಿಯ 'Xanadu 2.0' ಮನೆಯನ್ನು ವಾಷಿಂಗ್ಟನ್‌ನ ಮೆಡಿನಾ ಎಸ್ಟೇಟ್‌ನಲ್ಲಿ ಅಂದು $2 ದಶಲಕ್ಷಕ್ಕೆ ಕೊಂಡಿದ್ದರು. ಇದು ಆ ಮನೆಯ ಬೆಲೆ $123m (8,192,415,000 ರೂ)

11

11

ಮೈಕ್ರೋಸಾಫ್ಟ್ ಉದ್ಯೋಗಿಗಳು ಪ್ರತಿವರ್ಷ 23 ದಶಲಕ್ಷದ ಪಾನೀಯಗಳನ್ನು ಉಚಿತವಾಗಿ ಕಂಪನಿ ಕೆಫೆಟೇರಿಯಾದಲ್ಲಿ ಕುಡುಯುತ್ತಾರಂತೆ. ಬಹುಶಃ ಅದು ಹಾಲು ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್‌ ಇರಬಹುದು.

12

12

ಮೈಕ್ರೋಸಾಫ್ಟ್‌ ಮತ್ತು ಆಪಲ್‌ ಮೊದಲು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸಿದವು. ಆಗ ಬಿಲ್‌ ಗೇಟ್ಸ್‌ ಮತ್ತು ಸ್ಟೀವ್ ಜಾಬ್ಸ್‌ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಈ ಎರಡು ಕಂಪನಿಗಳು ಸಹ ಪರಸ್ಪರ ಸ್ಪರ್ಧಾತ್ಮಕ ವಿರೋಧಿಗಳಾಗಿವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಟೀವ್ ಜಾಬ್ ಬಗ್ಗೆ ತಪ್ಪು ಹೇಳಿಕೆ ರಾಹುಲ್ ಗಾಂಧಿಗೆ ಟ್ವೀಟ್ ಚಾಟಿಏಟುಸ್ಟೀವ್ ಜಾಬ್ ಬಗ್ಗೆ ತಪ್ಪು ಹೇಳಿಕೆ ರಾಹುಲ್ ಗಾಂಧಿಗೆ ಟ್ವೀಟ್ ಚಾಟಿಏಟು

ಮೈಕ್ರೋಸಾಫ್ಟ್‌ನಲ್ಲಿ 1.02 ಕೋಟಿ ವರಮಾನ: ವೆಲ್ಡರ್ ಪುತ್ರನ ಸಾಧನೆಮೈಕ್ರೋಸಾಫ್ಟ್‌ನಲ್ಲಿ 1.02 ಕೋಟಿ ವರಮಾನ: ವೆಲ್ಡರ್ ಪುತ್ರನ ಸಾಧನೆ

40 ರ ಹರೆಯಕ್ಕೆ ಕಾಲಿಟ್ಟ ಹಳೆ ಹುಲಿ ಮೈಕ್ರೋಸಾಫ್ಟ್ ಕರಾಮತ್ತೇನು?40 ರ ಹರೆಯಕ್ಕೆ ಕಾಲಿಟ್ಟ ಹಳೆ ಹುಲಿ ಮೈಕ್ರೋಸಾಫ್ಟ್ ಕರಾಮತ್ತೇನು?

ಮೈಕ್ರೋಸಾಫ್ಟ್ ಆಫೀಸ್‌ ಒಳಗಡೆ ಒಮ್ಮೆ ಸುತ್ತಾಡಿಮೈಕ್ರೋಸಾಫ್ಟ್ ಆಫೀಸ್‌ ಒಳಗಡೆ ಒಮ್ಮೆ ಸುತ್ತಾಡಿ

Best Mobiles in India

English summary
12 amazing facts you probably didn't know about Microsoft. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X