ನೀವು ಕಂಡರಿಯದ ಉಪಯುಕ್ತ ಗೂಗಲ್ ಟೂಲ್‌ಗಳು

By Shwetha
|

ಸರ್ಚಿಂಗ್ ಇತಿಹಾಸದಲ್ಲೇ ಹೆಸರನ್ನು ಮಾಡಿರುವ ಗೂಗಲ್ ಮಾಡಿದ ದಾಖಲೆಗೆ ಮಿತಿಯೇ ಇಲ್ಲ ಎಂದೇ ಹೇಳಬಹುದು. ಗೂಗಲ್ ಬಳಕೆದಾರರಿಗೆ ತನ್ನೆಲ್ಲಾ ಸೇವೆಗಳನ್ನು ಒದಗಿಸುತ್ತಿದೆ. ಗೂಗಲ್ ಡ್ರೈವ್, ಚಾಟ್, ಹ್ಯಾಂಗ್‌ಔಟ್ಸ್, ಮ್ಯಾಪ್ಸ್ ಹೀಗೆ ಬೇರೆ ಬೇರೆ ಸೇವೆಗಳನ್ನ ಒದಗಿಸುವಲ್ಲಿ ನಿಷ್ಣಾತವಾಗಿದೆ.

ಇದನ್ನೂ ಓದಿ: ಅತ್ಯುತ್ತಮ ಕ್ಯಾಮೆರಾ ಫೋನ್‌ ಖರೀದಿಗೆ ಇದು ಸಕಾಲ

ಇಂದಿನ ಲೇಖನದಲ್ಲಿ ಗೂಗಲ್‌ನ ಪರಿಕರಗಳ ಸುತ್ತ ಒಂದು ನೋಟವನ್ನು ಹರಿಸೋಣ. ಈ ಪರಿಕರಗಳು ನಿಮಗೆ ಎಷ್ಟೆಲ್ಲಾ ಕಾರ್ಯಗಳನ್ನು ಸಾಧಿಸಲು ನೆರವನ್ನು ನೀಡುತ್ತದೆ ಎಂಬುದನ್ನು ನೀವು ಮನಗಂಡಿದ್ದೀರಾ? ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳತ್ತ ನೋಟ ಹರಿಸಿ.

#1

#1

ಗೂಗಲ್ ಎನ್‌ಗ್ರಾಮ್ ವ್ಯೂವರ್
ನಿಮಗೆ ಬೇಕಾಗಿರುವ ಕೀವರ್ಡ್‌ಗಳನ್ನು ಹುಡುಕಲು ಇದು ಸಹಾಯ ಮಾಡುತ್ತದೆ. ಮಿಲಿಯಗಟ್ಟಲೆ ಪುಸ್ತಕಗಳಲ್ಲಿ ಕೀವರ್ಡ್‌ಗಳನ್ನು ಹುಡುಕಲು ಸಹಾಯ ಮಾಡುವ ಗೂಗಲ್‌ನ ಎನ್‌ಗ್ರಾಮ್ ವ್ಯೂವರ್ ಸುಧಾರಿತ ಆಯ್ಕೆಗಳನ್ನು ಹೊಂದಿದೆ.

#2

#2

ಗೂಗಲ್ ಕೋರಿಲೇಟ್
ಗೂಗಲ್ ಟ್ರೆಂಡ್‌ನ ಭಾಗವಾಗಿರುವ ಇದು, ನಿಮ್ಮ ಹುಡುಕಾಡಕ್ಕೆ ಹೆಚ್ಚಿನ ನೆರವನ್ನು ಒದಗಿಸುತ್ತದೆ.

#3

#3

ಗೂಗಲ್ ಟ್ರೆಂಡ್ಸ್
ಇದರಲ್ಲಿ ನೀವು ಡೇಟಾದ ಮೂಲಕ ಹುಡುಕಾಟಗಳನ್ನು ನಡೆಸಬಹುದು. ಬೇರೆ ಬೇರೆ ವರ್ಗಗಳಲ್ಲಿ ಹೊಸ ಟಾಪ್ ಸರ್ಚ್‌ಗಳ ಮೂಲಕ ಹುಡುಕಾಟವನ್ನು ನಡೆಸಿ.

#4

#4

ಗೂಗಲ್ ಥಿಂಕ್ ಇನ್‌ಸೈಟ್ಸ್
ಇದು ವೃತ್ತಿಪರರಿಗೆ ಹೆಚ್ಚು ಬಳಕೆಯ ಪರಿಕರವಾಗಿದೆ. ನಿಮ್ಮ ವ್ಯವಹಾರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಇದು ಪ್ರಾಜೆಕ್ಟ್‌ಗಳನ್ನು ಒದಗಿಸಲಿದೆ.

#5

#5

ಗೂಗಲ್ ಪಬ್ಲಿಕ್ ಡೇಟಾ ಎಕ್ಸ್‌ಪ್ಲೋರರ್
ವಿಶ್ವದಾದ್ಯಂತ ಡೇಟಾಬೇಸ್‌ಗಳ ಮೂಲಕ ಹುಡುಕಾಟವನ್ನು ನಡೆಸಿ.

#6

#6

ಫುಲ್ ವ್ಯಾಲ್ಯೂ ಆಫ್ ಮೊಬೈಲ್
ವ್ಯವಹಾರಗಳಿಗೆ ಅತೀ ಉತ್ತಮವಾಗಿರುವ ಉಪಯುಕ್ತ ಕ್ಯಾಲ್ಕ್ಯೂಲೇಟರ್ ಇದಾಗಿದೆ.

#7

#7

ಗೆಟ್ ಯವರ್ ಬ್ಯುಸಿನೆಸ್ ಆನ್‌ಲೈನ್
ವೆಬ್‌ನಲ್ಲೇ ಸ್ಥಳೀಯ ವ್ಯವಹಾರವನ್ನು ಪಡೆದುಕೊಳ್ಳುವ ಗೂಗಲ್‌ನ ಹೊಸ ಯೋಜನೆ ಇದಾಗಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತಮಗೊಳಿಸುವುದರ ಜೊತೆಗೆ ಸಣ್ಣ ವ್ಯವಹಾರದ ಅಭಿವೃದ್ಧಿಗೆ ಸಹಾಯವನ್ನು ಒದಗಿಸುತ್ತದೆ.

http://www.youtube.com/watch?v=COcl6ax38IY

#8

ವೆಬ್‌ಮಾಸ್ಟರ್ ಟೂಲ್ಸ್
ಸೈಟ್‌ನ ಆರೋಗ್ಯ ಮತ್ತು ಟ್ರಾಫಿಕ್ ಅನ್ನು ನಿರ್ವಹಿಸುವ ಕಾರ್ಯವನ್ನು ಗೂಗಲ್‌ನ ವೆಬ್‌ಮಾಸ್ಟರ್ ಟೂಲ್ ಒದಗಿಸುತ್ತದೆ.

#9

#9

ಸ್ಕೀಮರ್
ಇದು ಟುಡು ಮತ್ತು ಸಾಮಾಜಿಕ ಈವೆಂಟ್ ಪ್ಲೇನಿಂಗ್ ಪಟ್ಟಿಯನ್ನು ತನ್ನಲ್ಲಿ ಹೊಂದಿಕೊಂಡಿದೆ. ನಿಮ್ಮ ಗೂಗಲ್ ಪ್ಲಸ್ ಖಾತೆಯ ಮೂಲಕ ಸಂಪರ್ಕಪಡಿಸಿ, ನಿಮ್ಮ ಆದ್ಯತೆಗಳನ್ನು ನಮೂದಿಸಿ ಹಾಗೂ ಸ್ಕೀಮರ್ ನಿಮಗೆ ಉತ್ತಮವಾಗಿರುವುದನ್ನು ಒದಗಿಸುತ್ತದೆ.

#10

#10

ಗೂಗಲ್ ಫಾಂಟ್ಸ್
ಖಾಸಗಿ ಮತ್ತು ವಾಣಿಜ್ಯ ರೂಪದಲ್ಲಿ ಓಪನ್ ಸೋರ್ಸ್ ವೆಬ್ ಫಾಂಟ್‌ಗಳನ್ನು ಗೂಗಲ್ ಫಾಂಟ್‌ಗಳು ನಿಮಗೆ ಒದಗಿಸುತ್ತದೆ.

#11

#11

ಗೂಗಲ್ ಡೆವಲಪರ್ಸ್
ಇಲ್ಲಿ ಬಳಕೆದಾರರು ಬಹಳಷ್ಟು ಟೂಲ್‌ಗಳನ್ನು ಬಳಸಬಹುದಾಗಿದ್ದು ನಿಜಕ್ಕೂ ಇದು ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

#12

#12

ಡಾರ್ಟ್
ಮಾಡರ್ನ್ ವೆಬ್ ಅಪ್ಲಿಕೇಶನ್‌ಗಳ ಭಾಷೆಯಂತೆ ಜಾವಾ ಸ್ಕ್ರಿಪ್ಟ್ ಅನ್ನು ಸ್ಥಳಾಂತರಿಸುವ ಗೂಗಲ್‌ನ ಪ್ರೊಗ್ರಾಮಿಂಗ್ ಭಾಷೆಯಾಗಿದೆ ಡಾರ್ಟ್. ಇದನ್ನು 2011 ರಲ್ಲಿ ಬಿಡುಗಡೆ ಮಾಡಲಾಗಿತ್ತು ಇನ್ನೂ ಇದು ಅಭಿವೃದ್ಧಿ ಹಂತಗಳಲ್ಲಿದೆ.

http://www.youtube.com/watch?v=UbvkHEDvw-o

#13

ಗೂಗಲ್ ಕೀಪ್
ಈ ವರ್ಷದ ಆರಂಭದಲ್ಲಿ ಗೂಗಲ್ ಕೀಪ್ ಅನ್ನು ಲಾಂಚ್ ಮಾಡಲಾಗಿದೆ, ನಿಮ್ಮ ಗೂಗಲ್ ಡ್ರೈವ್‌ಗೆ ಗೂಗಲ್ ಕೀಪ್ ಅಪ್ಲಿಕೇಶನ್ ಸಂಪರ್ಕಿಸುತ್ತದೆ. ನಿಮ್ಮ ಡಿವೈಸ್‌ಗಳಾದ್ಯಂತ ಇದನ್ನು ಸಿಂಕ್ ಮಾಡಬಹುದಾಗಿದೆ.

#14

#14

ಗೂಗಲ್ ಸ್ಕೈ
ಗೂಗಲ್‌ ಅರ್ತ್‌ನ ಭಾಗವಾಗಿರುವ, ಗೂಗಲ್ ಸ್ಕೈ ಬಾಹ್ಯಾಕಾಶ ಮತ್ತು ಸ್ಟಾರ್ ವ್ಯವಸ್ಥೆಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ.

Best Mobiles in India

English summary
This article tells about 14 Google Tools You Didn't Know Existed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X