ಆಂಡ್ರಾಯ್ಡ್ ಎಲ್ ವೈಶಿಷ್ಟ್ಯಗಳು ಹೇಗೆ ಪರಿಣಾಮಕಾರಿ

By Shwetha
|

ಗೂಗಲ್‌ನ ಇತ್ತೀಚಿನ ಐಓ ಕಾನ್ಫರೆನ್ಸ್ ಹೊಚ್ಚ ಹೊಸ ಘೋಷಣೆಗಳನ್ನು ಹೊರತಂದಿದ್ದು ಅದರಲ್ಲಿ ಹೆಚ್ಚಿನದ್ದು ಗೂಗಲ್ ಕಂಪೆನಿಯ ಬಗೆಗೆ ಮತ್ತು ಅದರ ಯೋಜನೆಗಳು, ಕೊಡುಗೆಗೆಳು ಮತ್ತು ಆಂಡ್ರಾಯ್ಡ್‌ನ ಮುಂದಿನ ತಲೆಮಾರು ಯಾವುದು ಎಂಬ ಮಾಹಿತಿಯೊಂದಿಗೆ ಬಂದಿದೆ.

ನಾವು ಹೊಚ್ಚಹೊಸದಾದ ಕ್ರೋಮ್‌ಬುಕ್ ವೈಶಿಷ್ಟ್ಯಗಳು, ಮತ್ತು ಹೊಸ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ್ದೇವೆ. ಆದರೂ ಇದೆಲ್ಲದಕ್ಕಿಂತಲೂ ಮುಖ್ಯವಾಗಿ, ಮುಂದೆ ಬರಲಿರುವ ಆಂಡ್ರಾಯ್ಡ್ ಎಲ್ ಆಗಮನ ಮತ್ತು ಘೋಷಣೆ ಅತಿ ದೊಡ್ಡ ಸುದ್ದಿಯಾಗಿದೆ. ಇದು ಆಂಡ್ರಾಯ್ಡ್‌ನ ಮುಂದಿನ ಆವೃತ್ತಿಯಾಗಿದ್ದು ಗೂಗಲ್‌ ಹೊಂದಿಸುತ್ತಿರುವ ಮುಖ್ಯ ಆವೃತ್ತಿಯಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾದ್ದು ಅತ್ಯವಶ್ಯಕವಾಗಿದೆ.

ಇದು ಗೂಗಲ್‌ನ ಅತಿದೊಡ್ಡ ನವೀಕರಣವಾಗಿದ್ದು ಎಲ್‌ನ ಆರಂಭದೊಂದಿಗೆ ಅತಿ ಮಹತ್ವದ ಮತ್ತು ಕೆಲವೊಂದು ಪ್ರಮುಖ ಬದಲಾವಣೆಗಳು ಉಂಟಾಗಲಿದೆ ಎಂದು ಆಂಡ್ರಾಯ್ಡ್ ಮುಖ್ಯಸ್ಥ ಸುಂದರ್ ಪಿಚ್ಚೈ ತಿಳಿಸಿದ್ದಾರೆ.

ಹಾಗಿದ್ದರೆ ಇದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ದೊರಕಬೇಕಾದರೆ ನೀವೇನು ಮಾಡಬೇಕು? ಇದು ಆಂತರಿಕ ಓಎಸ್‌ನೊಂದಿಗೆ ಸರಿಹೊಂದುವುದೇ? ಅಥವಾ ಅದಕ್ಕಿಂತಲೂ ಹೆಚ್ಚಿನ ಪರಿಣಾಮವನ್ನು ಬೀರಬಹುದೇ? ಈ ಬಗ್ಗೆ ಸೂಕ್ಷ್ಮ ಅವಲೋಕವನ್ನು ಮಾಡಿಕೊಳ್ಳೋಣ.

#1

#1

ಆಂಡ್ರಾಯ್ಡ್‌ನ ಮುಂಬರಲಿರುವ ಕೊಡುಗೆಯಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ಹುಡುಕಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರ ಪೂರ್ವ ನೋಟವನ್ನು ಗಮನಿಸಿದ ನಂತರ, ಗೂಗಲ್ ತನ್ನೆಲ್ಲಾ ಆಂಡ್ರಾಯ್ಡ್ ಓಎಸ್ ಕೊಡುಗೆಗಳಿಗೆ ಇದನ್ನು ಸಮಾನಾಗಿಸಿದಂತಿದೆ.

#2

#2

ಎಕ್ಸ್‌ಪೋಸ್ ಇನ್‌ಸ್ಟಾಲರ್ ಮೆಚ್ಚುಗೆಗಳನ್ನು ಈ ಹೊಸ ಥೀಮ್ ಸಾಧ್ಯವಾಗಿಸಿದಂತಿದೆ. ನಿಮ್ಮೆಲ್ಲಾ ಫ್ರೇಮ್‌ವರ್ಕ್ ಅನ್ನು ನಿರ್ವಹಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

#3

#3

ಯಾವುದೇ ಬೀಟಾ ಬಿಡುಗಡೆಯೊಂದಿಗೆ, ಇದರ ಥೀಮ್ ಇನ್ನೂ ಪೂರ್ಣವಾಗಿ ಕೊನೆಗೊಂಡಿಲ್ಲ ಎಂಬುದು ಕಂಡುಬರುತ್ತದೆ.

#4

#4

ಸೆಟ್ಟಿಂಗ್ ಪ್ಯಾನೆಲ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿದಂತೆ ಕಂಡುಬರುತ್ತಿಲ್ಲ. ಇಲ್ಲಿ ಸೆಟ್ಟಿಂಗ್ ಅನ್ನು ಮೊದಲಿದ್ದಂತೆ ಹಾಗೆಯೇ ಇರಿಸಿರುವುದು ಕಂಡುಬಂದಿದೆ.

#5

#5

ಈ ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಗಮನಿಸುತ್ತಾ ಹೋದರೆ, ಡೆವಲಪರ್ ಹೊಸ ಓಎಸ್ ಅನ್ನು ಪ್ರಸ್ತುಪಡಿಸುವಲ್ಲಿ ಸಾಕಷ್ಟು ಬದಲಾವಣೆಗಳನ್ನು ಪ್ರಯತ್ನಗಳನ್ನು ಮಾಡಿರುವುದು ನಿಚ್ಚಳವಾಗಿ ಕಂಡುಬರುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X