ಆನ್‌ಲೈನ್ ಶಾಪಿಂಗ್ ಅನುಸರಿಬೇಕಾದ ಕ್ರಮಗಳೇನು?

By Shwetha
|

ಆನ್‌ಲೈನ್ ಶಾಪಿಂಗ್ ಎನ್ನುವುದು ಈಗ ದೇಶದಲ್ಲಿ ಹೆಚ್ಚು ಮುಖ್ಯವಾಗುತ್ತಿದೆ. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಹಿಂದಿನ ವರ್ಷಕ್ಕ ಹೋಲಿಸಿದಾಗ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರುವವರ ಸಂಖ್ಯೆ 155% ಕ್ಕಿಂತಲೂ ಅಧಿಕವಾಗಿದ್ದು ಆನ್‌ಲೈನ್‌ ಶಾಪ್‌ನ ಪ್ರಸಿದ್ಧತೆಯನ್ನು ತಿಳಿಸಿಕೊಟ್ಟಿದೆ.

ಹೀಗೆ ಆನ್‌ಲೈನ್ ಖರೀದಿ ಜನಪ್ರಿಯತೆಯ ತುತ್ತತುದಿಗೆ ಏರುತ್ತಿರುವಂತೆ ನಾವಿಲ್ಲಿ ಖರೀದಿ ಮಾಡುವಾಗ ಆವಶ್ಯಕವಾಗಿ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಏಕೆಂದರೆ ಜನಪ್ರಿಯತೆ ಇರುವಲ್ಲಿ ಮೋಸ ಕೂಡ ಬೇಗನೇ ನಡೆದುಬಿಡುತ್ತದೆ ಎಂಬುದು ಗಮನಿಸಬೇಕಾದ ಅಪಾಯವಾಗಿದೆ. ಇಬೇಯಂತಹ ಜಾಲತಾಣಗಳು ಆನ್‌ಲೈನ್ ಖರೀದಿಯಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದರೂ ಗ್ರಾಹಕರಿಗೆ ಭದ್ರತೆಯನ್ನು ಒದಗಿಸಿಕೊಡುವಲ್ಲಿ ಇವುಗಳು ಹಿಂದೆ ಬೀಳುತ್ತಿವೆ.

ಆದ್ದರಿಂದ ಇಂತಹ ಸಮಯದಲ್ಲಿ ಸೂಕ್ತವಾದ ಕ್ರಮಗಳನ್ನು ನಾವು ಪಾಲಿಸಬೇಕಾಗಿದ್ದು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಆವಶ್ಯಕವಾಗಿದೆ. ಹಾಗಿದ್ದರೆ ಆ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಶಾಪಿಂಗ್ ಹೇಗಿರಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಸಿಕೊಡುತ್ತಿದ್ದೇವೆ.

#1

#1

ನೀವು ದೀರ್ಘ ಸಮಯದಿಂದ ವೈಫೈ ಅನ್ನು ಬಳಸುತ್ತಿಲ್ಲದಿದ್ದಲ್ಲಿ ಅದನ್ನು ಆಫ್ ಮಾಡಿ. ನಿಮ್ಮ ತಾಣದಲ್ಲಿ ನೀವು ಬಯಸದೇ ಇರುವ ವ್ಯಕ್ತಿಗಳು ನಿಮ್ಮ ವೈಫೈ ಅನ್ನು ಉಪಯೋಗಿಸುವ ಅಪಾಯ ಇಲ್ಲಿದೆ. ಹ್ಯಾಕರ್‌ಗಳು ಅಂತರ್ಜಾಲ ಸಂಪರ್ಕವನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸುತ್ತಾರೆ ಮತ್ತು ಕೆಲವೊಂದು ಪಾಸ್‌ವರ್ಡ್‌ಗಳು ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಪಡೆದುಕೊಳ್ಳುವ ಸಂಭವ ಕೂಡ ಇರುತ್ತದೆ. ನಿಮಗೆ ಅವಶ್ಯಕತೆ ಇಲ್ಲದಾಗ ನೀವು ಅಂತರ್ಜಾಲ ಸಂಪರ್ಕವನ್ನು ಕಡಿದುಕೊಂಡಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#2

#2

ಹೆಚ್ಚುವರಿ ಸೈಟ್‌ಗೆ ನಿಮ್ಮನ್ನು ಕೊಂಡೊಯ್ಯುವಂತಹ ಯುಆರ್‌ಎಲ್‌ನೊಂದಿಗಿನ ಇಮೇಲ್ ಅನ್ನು ನೀವು ಪಡೆದುಕೊಳ್ಳಬಹುದು. ಯಾವುದೇ ಬ್ಯಾಂಕ್ ಅಥವಾ ಶಾಪಿಂಗ್ ಕೇಂದ್ರದಿಂದ ಇಂತಹ ಸೇವೆಗಳಿಗೆ ನೀವು ಈಗಾಗಲೇ ನೋಂದಾವಣೆ ಮಾಡಿಕೊಂಡಿದ್ದರೆ, ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

#3

#3

ಸಂದೇಹಾಸ್ಪದವಾಗಿರುವ ಜಾಹೀರಾತು ಮತ್ತು ಪಾಪ್‌ ಅಪ್‌ಗಳು ನಿಮ್ಮ ಆನ್‌ಲೈನ್ ಶಾಪಿಂಗ್ ಅಥವಾ ಬ್ಯಾಂಕಿಂಗ್ ಸಂದರ್ಭದಲ್ಲಿ ಕಂಡುಬಂದರೆ ಇದನ್ನು ನಿರ್ಲಕ್ಷ್ಯಿಸಿ

#4

#4

ಟ್ಯಾಬ್ಲೆಟ್ ಬಳಸುವಾಗ ಕೂಡ ನೀವು ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಂತೆಯೇ ಕೆಲವೊಂದು ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಹೆಚ್ಚುವರಿ ಭದ್ರತೆಗಾಗಿ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಪಾಸ್‌ವರ್ಡ್ ಅನ್ನು ಕೂಡ ಬಳಸಿ. ಮತ್ತು ಸ್ಥಳ ಆಧಾರಿತ ಹುಡುಕಾಟ ಅಪ್ಲಿಕೇಶನ್ ಅನ್ನು ಕೂಡ ನೀವು ಹೊಂದಿಸುವುದು ನೀವು ಟ್ಯಾಬ್ಲೆಟ್ ಕಳೆದುಕೊಂಡಾಗ ನಿಮಗೆ ನೆರವನ್ನು ನೀಡಬಹುದು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X