ವೈಫೈ ಅಳವಡಿತ ಬೆಂಗಳೂರು ರೈಲು ನಿಲ್ದಾಣ ದೇಶದಲ್ಲೇ ಪ್ರಥಮ

By Shwetha
|

ವೇಗವಾದ ಅಂತರ್ಜಾಲ ವ್ಯವಸ್ಥೆಯನ್ನು ತನ್ನ ಪ್ರಯಾಣಿಕರಿಗೆ ವೈಫೈ ಮೂಲಕ ನೀಡಿರುವ ಬೆಂಗಳೂರು ರೈಲ್ವೇ ಸ್ಟೇಶನ್ ದೇಶದಲ್ಲೇ ಪ್ರಥಮ ವೈಫೈ ಅಳವಡಿತ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಉತ್ತಮ ಅಂತರ್ಜಾಲ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ವೈಫೈ ಮೂಲಕ ಒದಗಿಸುತ್ತಿದ್ದು ನಿಜಕ್ಕೂ ಇದು ಗುರುತಿಸಲ್ಪಡುವ ಕಾರ್ಯ ಎಂದೆನಿಸಿದೆ.

ಇದನ್ನೂ ಓದಿ: ಫ್ಲ್ಯಾಬ್ಲೆಟ್ ಖರೀದಿಯೇ ಇಲ್ಲೂ ಒಮ್ಮೆ ಪರಿಶೀಲಿಸಿ

ಮೊದಲ 30 ನಿಮಿಷಗಳ ಕಾಲ ಪ್ರಯಾಣಿಕರಿಗೆ ತಮ್ಮ ಫೋನ್‌ನಲ್ಲಿ ಉಚಿತ ಅಂತರ್ಜಾಲ ವ್ಯವಸ್ಥೆ ಲಭ್ಯವಿದ್ದು ನಂತರದ 30 ನಿಮಿಷಗಳ ನಂತರ, ಪ್ರಯಾಣಿಕರು ಯಾ ಬಳಕೆದಾರರು ವೈಫೈ ಸಹಾಯ ವೇದಿಕೆಯಲ್ಲಿ ಲಭ್ಯವಿರುವ ಸ್ಕ್ರಾಚ್ ಕಾರ್ಡ್ ಅನ್ನು ಖರೀದಿಸಿ ಅಂತರ್ಜಾಲ ವ್ಯವಸ್ಥೆಯನ್ನು ಬಳಸಬಹುದಾಗಿದೆ.

ಬೆಂಗಳೂರು ರೈಲು ನಿಲ್ದಾಣಕ್ಕೆ ಹಿರಿಮೆಯ ಗರಿ

ಈ ಕಾರ್ಡ್ 30 ನಿಮಿಷಗಳಿಗೆ ರೂ 25 ಅನ್ನು ನಿಗದಿಪಡಿಸಿದ್ದು ಒಂದು ಗಂಟೆಗಾಗಿ ರೂ 35 ಮತ್ತು ಇದು 24 ಗಂಟೆಗಳಿಗೂ ಅನ್ವಯವಾಗಲಿದೆ. ಇನ್ನು ಕ್ರೆಡಿಟ್/ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು, ಹೆಚ್ಚುವರಿ ಬ್ರೌಸಿಂಗ್ ಸಮಯವನ್ನು ಖರೀದಿಸಬಹುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಐಫೋನ್ ಬೇಕೇ? ಮಿಸ್ ಮಾಡದಿರಿ ಈ ಕೊಡುಗೆ

ಇನ್ನು ರೈಲು ನಿಲ್ದಾಣದಲ್ಲಿ ವೈಫೈ ವ್ಯವಸ್ಥೆಯನ್ನು ಒದಗಿಸುವಲ್ಲಿ RailWire ಮತ್ತು PSU ತಮ್ಮ ಸಹಕಾರವನ್ನು ನೀಡಿವೆ. ಪ್ರಯಾಣಿಕರಿಗಾಗಿ ವೈಫೈ ವ್ಯವಸ್ಥೆಯನ್ನು ಹೊಂದಿರುವ ದೇಶದ ಪ್ರಥಮ ನಿಲ್ದಾಣ ಇದಾಗಿದ್ದು ನಿಜಕ್ಕೂ ಇದು ಹೆಮ್ಮೆಯ ವಿಷಯವಾಗಿದೆ ಎಂದು ವ್ಯವಸ್ಥೆಯನ್ನು ಉದ್ಘಾಟಿಸಿರುವ ರೈಲ್ವೇ ಮಂತ್ರಿ ಸದಾನಂದ ಗೌಡ ತಿಳಿಸಿದ್ದಾರೆ.

Best Mobiles in India

English summary
This article tells about Bangalore station becomes 1st station to have WiFi facility.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X