ಆಪಲ್ ನ್ಯೂ ಐಪ್ಯಾಡ್ vs ಗೂಗಲ್ ಟ್ಯಾಬ್ಲೆಟ್

By Varun
|
ಆಪಲ್ ನ್ಯೂ ಐಪ್ಯಾಡ್ vs ಗೂಗಲ್ ಟ್ಯಾಬ್ಲೆಟ್

ಆಪಲ್ ನ್ಯೂಪ್ಯಾಡ್ ಹಾಗು ಗೂಗಲ್ ನ ನೆಕ್ಸಸ್ 7 ಟ್ಯಾಬ್ಲೆಟ್ ಗಳು ಫೀಚರುಗಳ ಲೆಕ್ಕದಲ್ಲಿ ಅವುಗಳನ್ನು ಹೋಲಿಸುವುದು ಸರಿಯಲ್ಲದಿದ್ದರೂ ಅವುಗಳ ಹೊರಮೈ ಹೇಗಿದೆ, ಅದು ಎಷ್ಟರ ಮಟ್ಟಿಗೆ ಟಫ್ ಎನಿಸಿದೆ ಅಂತ ಸ್ಕ್ವೇರ್ ಟ್ರೇಡ್ ಎಂಬ ಕಂಪನಿ ಡ್ರಾಪ್ ಟೆಸ್ಟ್ ನಡೆಸಿತು.

ಈಗಾಗ್ಲೇ ಈ ರೀತಿಯ ಹಲವಾರು ಡ್ರಾಪ್ ಟೆಸ್ಟ್ ಗಳನ್ನು ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಮಾಡಲಾಗಿರುವ ವೀಡಿಯೋವನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿರುತ್ತೀರ.

ಅದರಲ್ಲೂ ಆಪಲ್ ನ ಐಪ್ಯಾಡ್ ನ ಮೇಲೆ ಸಾಕಷ್ಟು ಪರೀಕ್ಷೆಗಳು ನಡೆದಿದ್ದು, ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಆದರೆ ಆಪಲ್ ನ ನ್ಯೂ ಐಪ್ಯಾಡ್ ಹಾಗು ಗೂಗಲ್ ನ ನೆಕ್ಸಸ್, ಪರಸ್ಪರ ಸೆಣೆಸಾಟದಲ್ಲಿ ಗೆದ್ದಿದ್ದು ಮಾತ್ರ ನೆಕ್ಸಸ್ 7 ಟ್ಯಾಬ್ಲೆಟ್.

ಮೊದಲಿಗೆ ಎರಡೂ ಟ್ಯಾಬ್ಲೆಟ್ ಗಳನ್ನು ಎದೆ ಮಟ್ಟದಿಂದ ಸೀಮೆಂಟ್ ನೆಲದ ಮೇಲೆ ಬೀಳಿಸಲಾಯಿತು. ಗೂಗಲ್ ಟ್ಯಾಬ್ಲೆಟ್ ಸ್ವಲ್ಪ ಮಟ್ಟಿಗೆ ತರಚಾಗಿದ್ದು ಬಿಟ್ಟರೆ ಹೆಚ್ಚೇನೂ ಆಗಲಿಲ್ಲ. ಅದೇ ಆಪಲ್ ನ ನ್ಯೂ ಪ್ಯಾಡ್ ನ ಡಿಸ್ಪ್ಲೇ ಸೀಮೆಂಟ್ ನೆಲದ ಮೇಲೆ ಬಿದ್ದಿದ್ದೆ ತಡ, ಚೂರು ಚೂರಾಯಿತು!

ಇದಾದ ನಂತರ ಎರಡೂ ಟ್ಯಾಬ್ಲೆಟ್ ಗಳನ್ನ ಪೂರಾ ನೀರಿರುವ ಟ್ಯಾಬ್ ನಲ್ಲಿ ಮುಳುಗಿಸಲಾಯಿತು. ಈ ನೀರಿನ ಟೆಸ್ಟ್ ನಲ್ಲಿ ಎರಡೂ ಟ್ಯಾಬ್ಲೆಟ್ ಗಳು ಪಾಸಾದವು.

ನಂತರ ನಡೆದ ಎಲ್ಲ ಪರೀಕ್ಷೆಗಳಲ್ಲೂ ನೆಕ್ಸಸ್ 7 ಗೆದ್ದು ಬಿಡ್ತು. ಆ ಪರೀಕ್ಷೆಗಳು ಯಾವುವು, ಹೇಗೆ ನಡೀತು ಪರೀಕ್ಷೆ ಅಂತ ನೀವು ವೀಡಿಯೋ ನೋಡೇ ತಿಳೀಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X