ವಿಂಡೋಸ್‌ XP, ವಿಂಡೋಸ್ vista ಬಳಕೆದಾರರೇ ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

ಈ ಕ್ರೋಮ್ v53 ಆವೃತ್ತಿಗಿಂತಲು ಕೆಳಗಿನವೂ ವಿಂಡೋಸ್‌ XP, ವಿಂಡೋಸ್ vistaದಲ್ಲಿ ಬಳಕೆಯಾಗುತ್ತಿದ್ದು, ಈ ಓಎಸ್‌ಗಳಲ್ಲಿರುವ ಕ್ರೋಮ್ ಆಪ್‌ಡೇಟ್ ಮಾಡಲು ಸಾಧ್ಯವಿಲ್ಲ

Written By:

ಗೂಗಲ್ ಒಡೆತನದ ಇ-ಮೇಲ್ ದೈತ್ಯ ಜಿ-ಮೇಲ್ ಇನ್ನು ಮುಂದೆ ಹಳೇ ವರ್ಷನ್ ಕ್ರೋಮ್‌ಗೆ ಸಪೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ. ಹಳೇಯ ಆವೃತ್ತಿಯ ಕ್ರೋಮ್‌ನಲ್ಲಿ ಸುರಕ್ಷತೆ ಕಡಿಮೆ ಇರುವ ಕಾರಣ ಗೂಗಲ್ ಈ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

ಓದಿರಿ: ಮುಂದುವರೆಯುತ್ತಾ ಜಿಯೋ ಉಚಿತ ಕೊಡುಗೆ.? ಫೆಬ್ರವರಿ 6 ರಂದು ನಿರ್ಧಾರವಾಗಲಿದೆ ಜಿಯೋ ಭವಿಷ್ಯ

ಇತ್ತಿಚೀನ ದಿನಗಳಲ್ಲಿ ಇ-ಮೇಲ್ ಹ್ಯಾಕಿಂಗ್ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಿ-ಮೇಲ್ ಅನ್ನು ಹೆಚ್ಚು ಭದ್ರ ಪಡಿಸಲು ಗೂಗಲ್ ಈ ಕಾರ್ಯ ಮುಂದಾಗಿದೆ, ಹಾಗಾಗಿ ಈ ವರ್ಷದ ಕೊನೆಯಲ್ಲಿ ಕ್ರೋಮ್ v53 ಗಿಂತಲೂ ಕಳೆಗಿನ ಆವೃತ್ತಿಗಳಲ್ಲಿ ಜಿ-ಮೇಲ್ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ.

ಈ ಕ್ರೋಮ್ v53 ಆವೃತ್ತಿಗಿಂತಲು ಕೆಳಗಿನವೂ ವಿಂಡೋಸ್‌ XP, ವಿಂಡೋಸ್ vistaದಲ್ಲಿ ಬಳಕೆಯಾಗುತ್ತಿದ್ದು, ಈ ಓಎಸ್‌ಗಳಲ್ಲಿರುವ ಕ್ರೋಮ್ ಆಪ್‌ಡೇಟ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದ್ದು, ಹಾಗಾಗಿ ಈವರೆಲ್ಲರೂ ವಿಡೋಂಸ್ ಆಪ್‌ಡೇಟ್ ಮಾಡಬೇಕಾಗಿದೆ.

ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

ಓದಿರಿ: ರೆಡ್‌ಮಿ ಪ್ರೋ 2: ಡುಯಲ್ ಕ್ಯಾಮೆರಾ, 6 GB RAM, 128 GB ಮೆಮೊರಿ, 4500mAh ಬ್ಯಾಟರಿ

ಈ ಹಿನ್ನಲೆಯಲ್ಲಿ ಫೆಬ್ರವರಿ 8 ರಿಂದ ಕ್ರೋಮ್‌ ತನ್ನ ಬಳಕೆದಾರರಿಗೆ ಈ ಕುರಿತು ನೋಟಿಫಿಕೇಷನ್ ನೀಡಲಿದ್ದು, ತಮ್ಮ ಕ್ರೋಮ್‌ ಆವೃತ್ತಿಯನ್ನು ಆಪ್‌ಡೇಟ್ ಮಾಡಿಕೊಳ್ಳಿ ಎಂದು ತಿಳಿಸಲಿದೆ. ಈಗಾಗಲೇ ಹೊಸ ವರ್ಷನ್ ಗಳು ಆನ್‌ಲೈನ್ ನಲ್ಲಿ ಉಚಿತವಾಗಿ ಲಭ್ಯವಿದೆ.

ಹೊಸ ಆಪ್‌ಡೇಟ್‌ಗಳಲ್ಲಿ ಜಿ-ಮೇಲ್ ಹೆಚ್ಚು ಸುರಕ್ಷಿತವಾಗಿರಲಿದೆ. ಇದರಿಂದ ನಿಮ್ಮ ಮೇಲ್ ಹ್ಯಾಕ್ ಆಗುವುದು ಕಡಿಮೆಯಾಗಲಿದೆ. ಒಟ್ಟಿನಲ್ಲಿ ಗೂಗಲ್ ನ ಈ ಕ್ರಮ ಕೆಲವರಿಗೆ ಸಹಾಯವಾದರೆ ಇನ್ನು ಕೆಲವರಿಗೆ ನುಂಗಲಾರದ ತುಪ್ಪವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Google on Wednesday announced that Gmail will stop supporting older Chrome versions by the end of this year. to know more visit kannada.gizbot.com
Please Wait while comments are loading...
Opinion Poll

Social Counting