ಗೂಗಲ್ ಮ್ಯಾಪ್ಸ್ (ನಕ್ಷೆ) ಸುಧಾರಿತ ಆವೃತ್ತಿಯಲ್ಲಿ

By Shwetha
|

ಗೂಗಲ್ ಮ್ಯಾಪ್ಸ್ ಐಓಎಸ್‌ನೊಂದಿಗೆ ಸ್ಥಳಗಳನ್ನು ಹುಡುಕಾಡುವುದು ಈಗ ತುಂಬಾ ಸುಲಭವಾಗಿದೆ. ತನ್ನ ಐಓಎಸ್ ಆವೃತ್ತಿಯಾದ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಗೂಗಲ್ ಕೆಲವೊಂದು ನವೀಕರಣಗಳನ್ನು ಸೇರ್ಪಡಿಸಿದೆ. ಇದು ಹುಡುಕಾಡವನ್ನು ಇನ್ನಷ್ಟು ಸುಧಾರಿಸಲಿದ್ದು ಜಿಮೇಲ್ ಈವೆಂಟ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲಿದೆ ಮತ್ತು ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ನೀವು ಹೋಟೆಲ್ ಅಥವಾ, ಅಂಗಡಿ ಇಲ್ಲವೇ ಇತರ ಸ್ಥಳೀಯ ವ್ಯವಹಾರವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ, ಗೂಗಲ್ ನಕ್ಷೆ (ಮ್ಯಾಪ್ಸ್) ಅಪ್ಲಿಕೇಶನ್‌ನ ಅರ್ಧ ಭಾಗದಲ್ಲಿ ಇದರ ಬಗ್ಗೆ ವರದಿಯನ್ನು ಪ್ರಕಟಪಡಿಸಲಿದೆ. ಮುಂಚೆ ಈ ಅಪ್ಲಿಕೇಶನ್ ಬರಿಯ ಹತ್ತಿರದ ಸ್ಥಳಗಳನ್ನು ಮಾತ್ರ ತೋರಿಸುತ್ತಿತ್ತು ಬಳಕೆದಾರರು ಮ್ಯಾಪ್‌ನಿಂದ ನ್ಯಾವಿಗೇಟ್ ಮಾಡಿ ಎಲ್ಲಾ ಫಲಿತಾಂಶಗಳನ್ನು ವೀಕ್ಷಿಸಬೇಕು.

ಸುಧಾರಿತ ಗೂಗಲ್ ನಕ್ಷೆಯ ವಿಶೇಷತೆ ಏನು?

ಸಂಬಂಧಿತ ಹುಡುಕಾಟ ಫಲಿತಾಂಶಗಳೂ ಕೂಡ ನಕ್ಷೆಯಲ್ಲಿ ಗೋಚರಿಸುತ್ತಿದ್ದು, ಪ್ರತಿಯೊಂದು ಸ್ಥಳದ ಅರ್ಧದಷ್ಟು ವಿವರಣೆಯೊಂದಿಗೆ ನಿಮ್ಮ ಹುಡುಕಾಟ ಸ್ಥಳದ ವಿವರಣೆಯನ್ನು ಇದು ನೀಡುತ್ತದೆ.

ನಿಮ್ಮ ಜಿಮೇಲ್ ಖಾತೆಯಿಂದ ನೇರವಾಗಿ, ಈವೆಂಟ್ ಅಥವಾ ಮೀಟಿಂಗ್ ಮಾಹಿತಿಯನ್ನು ನಿಮ್ಮ ನಕ್ಷೆಯಲ್ಲಿ ಇದು ತೋರಿಸುತ್ತದೆ, ನೀವು ಗೂಗಲ್ ನಕ್ಷೆಯನ್ನು ತೆರೆದಾಗಲೆಲ್ಲಾ ನಿಮ್ಮ ಮುಂದಿನ ಮೀಟಿಂಗ್ ಅಥವಾ ಬುಕ್ಕಿಂಗ್ ಕುರಿತ ಮಾಹಿತಿಯನ್ನು ನಿಮಗೆ ನೋಡಬಹುದಾಗಿದೆ.

ಸುಧಾರಿತ ಗೂಗಲ್ ನಕ್ಷೆಯ ವಿಶೇಷತೆ ಏನು?

ಗೂಗಲ್ "ಎಕ್ಸ್‌ಪ್ಲೋರ್ ನಿಯರ್‌ಬೈ" (ಹತ್ತಿರದಲ್ಲಿ ಅನ್ವೇಷಿಸಿ) ಅಪ್ಲಿಕೇಶನ್ ಅನ್ನು ಸುಧಾರಿಸಿದ್ದು ಇದು ವಿವಿಧ ಸ್ಥಳಗಳು ಮತ್ತು ನಿಮ್ಮ ಸ್ಥಳವನ್ನು ಆಧರಿಸಿದ ಚಟುವಟಿಕೆಗಳನ್ನು ಸೂಚಿಸುತ್ತದೆ. ಇದರಲ್ಲಿ ಸ್ಮಾರ್ಟಿ ಪಿನ್ಸ್ ಎಂಬ ಟ್ರಿವಿಯಾ ಗೇಮ್ ಕೂಡ ಇದ್ದು ಅಪ್ಲಿಕೇಶನ್‌ನಲ್ಲೇ ಬಳಕೆದಾರರು ತಮ್ಮ ಭೌಗೋಳಿಕ ಜ್ಞಾನವನ್ನು ಬಳಕೆದಾರರು ಅರಿತುಕೊಳ್ಳಬಹುದಾಗಿದೆ.

ಗೂಗಲ್ ನಕ್ಷೆ ಅಥವಾ ಮ್ಯಾಪ್ಸ್‌ನ ಇತ್ತೀಚಿನ ಆವೃತ್ತಿ ಆಪ್ ಸ್ಟೋರ್‌ನಲ್ಲಿ ಇದೀಗ ಲಭ್ಯವಿದೆ.

Best Mobiles in India

Read more about:
English summary
This article tells about that Google updates Maps with gmail invitations better search.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X