ಕಂಪ್ಯೂಟರ್‌ನಲ್ಲಿ ವೈರಸ್ ದಾಳಿಯನ್ನು ತಡೆಗಟ್ಟುವ ವಿಧಾನಗಳು

By Shwetha
|

ಕಂಪ್ಯೂಟರ್‌ನಲ್ಲಿ ವೈರಸ್ ದಾಳಿ ಮಾಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ನಿಮ್ಮ ಕಂಪ್ಯೂಟರ್‌ಗಳನ್ನು ಇಂತಹ ಅಪಾಯಗಳಿಂದ ತಪ್ಪಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡರೆ ವೈರಸ್ ಕಾಟ ನಿಮ್ಮ ಕಂಪ್ಯೂಟರ್ ಬಳಿ ಸುಳಿಯುವುದಿಲ್ಲ. ಇಂದಿನ ಲೇಖನದಲ್ಲಿ ವೈರಸ್ ದಾಳಿಯನ್ನು ನಿಮ್ಮ ಕಂಪ್ಯೂಟರ್‌ನಿಂದ ತಪ್ಪಿಸುವುದು ಹೇಗೆ ಎಂಬುದನ್ನು ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ವಾಟ್ಸಾಪ್‌ನ ಅತಿ ಆಕರ್ಷಕ ವಿಶೇಷತೆಗಳು

#1

#1

ನೀವು ಅಂತರ್ಜಾಲದಲ್ಲಿ ಯಾವುದೇ ಫೈಲ್ ಅನ್ನು ಡೌನ್‌ಲೋಡ್ ಮಾಡುವ ಸಮಯದಲ್ಲಿ ತುಸು ಜಾಗರೂಕರಾಗಿರಬೇಕು. ಈಗಾಗಲೇ ಹಾನಿಗೊಳಗಾಗಿರುವ ಫೈಲ್ ಅನ್ನು ನಿಮ್ಮ ಕಂಪ್ಯೂಟರ್ ಹೊಂದಿದೆ ಎಂದಾದಲ್ಲಿ ಅದನ್ನು ಪ್ರತ್ಯೇಕವಾಗಿ ತೆಗೆದಿಡಿ. ವೈರಸ್ ಅನ್ನು ಪತ್ತೆ ಮಾಡಿದ ನಂತರ ಫೈಲ್‌ಗಳ ಬ್ಯಾಕಪ್ ಅನ್ನು ತೆಗೆದಿಡುವುದು ಹೆಚ್ಚು ಮುಖ್ಯವಾಗಿದೆ.

#2

#2

ಯಾವಾಗಲೂ ಆಂಟಿ ವೈರಸ್ ಸಾಫ್ಟ್‌ವೇರ್ ಅನ್ನು ಬಳಸಿ. ಇದು ನಿಮ್ಮ ಸ್ಕ್ಯಾನರ್ ಅನ್ನು ಕೂಡ ಸ್ಕ್ಯಾನ್ ಮಾಡುವಂತಿರಬೇಕು. ಹೊಸ ವೈರಸ್‌ಗಳು ದಿನವೂ ಉತ್ಪನ್ನವಾಗುತ್ತದೆ, ಆದ್ದರಿಂದ ಅಪಾಯವನ್ನು ಗುರುತಿಸುವ ಹೊಸ ಸಾಫ್ಟ್‌ವೇರ್ ಅನ್ನು ಹೊಂದಿರುವುದು ಅತೀ ಅಗತ್ಯವಾಗಿದೆ.

#3

#3

ನಿಮ್ಮ ಆಂಟಿ ವೈರಸ್ ಪ್ರೊಗ್ರಾಮ್‌ನಲ್ಲಿ ನಿಯಮಿತವಾಗಿ ವೈರಸ್ ಡೇಟಾಬೇಸ್ ಅನ್ನು ನವೀಕರಿಸಿ.

#4

#4

ಪಿಸಿಯಲ್ಲಿ, CMOS ಸೆಟ್ಟಿಂಗ್ ಅನ್ನು ಬದಲಾಯಿಸಿ ಹಾಗೂ ಸಿ ಡ್ರೈವ್ ಅನ್ನು ಸ್ವಚ್ಛಗೊಳಿಸುತ್ತಿರಿ. ಇದು ನಿಮ್ಮ ಬೂಟಪ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

#5

#5

ನಿಮ್ಮ ವೆಬ್‌ ಬ್ರೌಸರ್‌ನಲ್ಲಿ ಸ್ವಯಂಚಾಲಿತವಾಗಿ ಪ್ರೊಗ್ರಾಮ್‌ಗಳನ್ನು ಚಾಲನೆ ಮಾಡಲು ಬಿಡದಿರಿ ಅಂದರೆ ಎಮ್‌ಎಸ್ ವರ್ಡ್ ಅಥವಾ ಇಮೇಲ್ ಪ್ರೊಗ್ರಾಮ್ ಮೂಲಕ ನಡೆಸುವಂತಹ ಇತರ ಪ್ರೊಗ್ರಾಮ್‌ಗಳನ್ನು ಚಾಲನೆ ಮಾಡದಿರಿ.

#6

#6

ಆಕ್ಟೀವ್ ಎಕ್ಸ್, ಜಾವಾ ಮತ್ತು ಜಾವಾ ಸ್ಕ್ರಿಪ್ಟ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ ವೆಬ್ ಬ್ರೌಸರ್‌ಗಳನ್ನು ಕಾನ್ಫಿಗರ್ ಮಾಡಿ.

#7

#7

ಇನ್‌ಫೆಕ್ಟೆಡ್ ಫೈಲ್ ಅನ್ನು ಲಾಂಚ್ ಮಾಡುವ ಮೂಲಕ ಅಥವಾ ಈ ರೀತಿಯ ಫೈಲ್ ಅನ್ನು ಬೂಟಿಂಗ್ ಮಾಡುವ ಮೂಲಕ ಈ ರೀತಿ ಉಂಟಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ಇದ್ದಾಗ ಅಥವಾ ಇಮೇಲ್ ಅನ್ನು ಓದುವಾಗ ವೈರಸ್ ದಾಳಿಯಾಗುವುದಿಲ್ಲ. ಈ ರೀತಿಯ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ ಮಾತ್ರವೇ ವೈರಸ್ ನಿಮ್ಮ ಕಂಪ್ಯೂಟರ್‌ನಲ್ಲಿ ಕಂಡುಬರಬಹುದು.

#8

#8

ಈಗಾಗಲೇ ನವೀಕರಿಸಲಾದ ಆಂಟಿ ವೈರಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಹೊಸ ಸಾಫ್ಟ್‌ವೇರ್‌ನಲ್ಲಿ ವೈರಸ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಂತರವೇ ಇದನ್ನು ನಿಮ್ಮ ಡ್ರೈವ್‌ನಲ್ಲಿ ಇನ್‌ಸ್ಟಾಲ್ ಮಾಡಿ.

#9

#9

ಹೋಕ್ಸಸ್ ಕುರಿತು ಎಚ್ಚರಿಕೆಯಿಂದಿರಿ. ಹೋಕ್ಸಸ್ ಕುರಿತು ಈ ವೆಬ್‌ಸೈಟ್‌ಗೆ ಭೇಟಿ ನೀಡಿ.

#10

#10

ನಿಮ್ಮ ಕಂಪ್ಯೂಟರ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುವುದು ಕೂಡ ವೈರಸ್ ದಾಳಿಯಿಂದ ಸುರಕ್ಷಿತವಾಗಿರಲು ಇರುವ ಉಪಾಯವಾಗಿದೆ.

Best Mobiles in India

English summary
This article tells about that How to protect your computer from virus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X