ಪಿಸಿ ಗೇಮ್ ಮತ್ತು ಕನ್ಸೋಲ್ ಗೇಮಿಂಗ್ ನಡುವೆ ಇರುವ ವ್ಯತ್ಯಾಸ..!!!

ಕೆಲವು ಗೇಮರ್ ಗಳು ಪಿಸಿ ಎಂದರೆ ಇನ್ನು ಕೆಲವರು ಕನ್ಸೋಲ್ ಎಂಬ ವಾದವನ್ನು ಮಾಡುತ್ತಾರೆ, ಇದರೆ ಇದಕ್ಕೆ ಅಸ್ಟು ಸುಲಭವಾಗಿ ಉತ್ತರವು ದೊರೆಯಲಾರದು.

By Precilla Dias
|

ಹಾರ್ಡ್ ಕೋರ್ ಗೇಮರ್ ಗಳು ಎಲ್ಲ ಸಮಯದಲ್ಲೂ ಯಾವುದು ಗೇಮ್ ಆಡಲು ಉತ್ತಮ ಪ್ಲಾಟ್ ಫಾರ್ಮ್ ಎಂಬುದರ ಕುರಿತು ಚರ್ಚೆಯನ್ನು ಮಾಡುತಲೇ ಇರುತ್ತಾರೆ. ಕೆಲವರು ಪಿಸಿ ಎಂದರೆ ಇನ್ನು ಕೆಲವರು ಕನ್ಸೋಲ್ ಎಂಬ ವಾದವನ್ನು ಮಾಡುತ್ತಾರೆ, ಇದರೆ ಇದಕ್ಕೆ ಅಸ್ಟು ಸುಲಭವಾಗಿ ಉತ್ತರವು ದೊರೆಯಲಾರದು.

ಪಿಸಿ ಗೇಮ್ ಮತ್ತು ಕನ್ಸೋಲ್ ಗೇಮಿಂಗ್ ನಡುವೆ ಇರುವ ವ್ಯತ್ಯಾಸ..!!!

ಈ ಹಿನ್ನಲೆಯಲ್ಲಿ ಪಿಸಿಯಲ್ಲಿ ಗೇಮ್ ಆಡಲು ಮತ್ತು ಕನ್ಸೋಲ್ ನಲ್ಲಿ ಗೇಮ್ ಆಡಲು ಇರುವ ಪ್ರಮುಖ ವ್ಯತ್ಯಾಸಗಳೇನು ಎಂಬುದನ್ನು ನೋಡುವ. ಪಿಸಿ ಗೇಮ್ ಗಳು ಎಂದರೆ ನಮ್ಮ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಆಡುವುದು. ಕನ್ಸೋಲ್ ಗೇಮ್ ಗಳೇಂದರೆ ಇವುಗಳನ್ನು ಗೇಮಿಂಗ್ ಕನ್ಸೋಲ್ ಗಳಲ್ಲಿ ಅಂದರೆ ಏಕ್ಸ್ ಬಾಕ್ಸ್, ಪ್ಲೇ ಸ್ಟೆಷನ್, ಗೇಮ್ ಕ್ಲಬ್, ನಿನ್ಟೆಂಡೊ ವಿಗಳಲ್ಲಿ ಆಡುವುದಾಗಿದೆ.

ಬೆಲೆ:

ಬೆಲೆ:

ಬೆಲೆಯ ವಿಚಾರಕ್ಕೆ ಬರುವುದಾದರೆ ಪಿಸಿಗಳು ಕನ್ಸೋಲ್ ಗಳಿಂತಲೂ ಹೆಚ್ಚು ವೆಚ್ಚದಾಯಕವಾಗಿದೆ ಎನ್ನಲಾಗಿದೆ. ಗೇಮಿಂಗ್ ಕನ್ಸೋಲ್ ಗಳಿಗೆ ಹೊಲಿಸಿಕೊಂಡರೆ ಗೇಮಿಂಗ್ ಗಾಗಿಯೇ ಪಿಸಿ ನಿರ್ಮಿಸಬೇಕು ಎಂದರೆ ಹೆಚ್ಚಿನ ವೆಚ್ಚವಾಗಲಿದೆ.

ಆಪ್ ಗ್ರೇಡ್:

ಆಪ್ ಗ್ರೇಡ್:

ಗೇಮಿಂಗ್ ಕನ್ಸೋಲ್ ಗಳು ಆಪ್ ಗ್ರೇಡ್ ಮಾಡುವುದು ಕಸ್ಟ ಸಾಧ್ಯ. ಆದರೆ ಕಂಪ್ಯೂಟರ್ ಗಳಲ್ಲಿ ಸಿಪಿಯು ತೆರೆದು ಹೊಸದಾಗಿ ಆಪ್ಡೇಟ್ ಮಾಡಿಕೊಳ್ಳಬಹುದಾಗಿದೆ, ಆದರೆ ಇದು ಕನ್ಸೋಲ್ ಗಳಲ್ಲಿ ಸಾಧ್ಯವಿಲ್ಲ. ಕೆಲವು ಕನ್ಸೋಲ್ ಗಳಲ್ಲಿ ಮಾತ್ರವೇ ಈ ಅವಕಾಶವನ್ನು ಕಾಣಬಹುದಾಗಿದೆ. ಪಿಸಿಯನ್ನು ಸುಲಭವಾಗಿ ಆಪ್ ಗ್ರೇಡ್ ಮಾಡಬಹುದಾಗಿದೆ. ಅದುವೆ ಕಡಿಮೆ ಖರ್ಚಿನಲ್ಲಿ.

ಕನ್ಸೋಲ್ ಏಕ್ಸ್ ಕ್ಲೂಸಿವ್ಸ್:

ಕನ್ಸೋಲ್ ಏಕ್ಸ್ ಕ್ಲೂಸಿವ್ಸ್:

ಮಾರುಕಟ್ಟೆಯಲ್ಲಿ ಹಲವು ಗೇಮ್ ಗಳು ಕೇವಲ ಏಕ್ಸ್ ಕ್ಲೂಸಿವ್ ಆಗಿ ಸೋನಿ ಪ್ಲೇ ಸ್ಟೆಷನ್ ಮತ್ತು ಏಕ್ಸ್ ಬಾಕ್ಸ್ ಗೆಂದೆ ದೊರೆಯಲಿದೆ. ಆದರೆ ಪಿಸಿಯಲ್ಲಿ ಎಲ್ಲಾ ಗೇಮ್ ಗಳನ್ನು ಆಡಬಹುದು. ಕೇವಲ ಪಿಸಿಗಾಗಿಯೇ ಬಿಟ್ಟ ಗೇಮ್ ಗಳನ್ನು ಕನ್ಸೋಲ್ ಗಳಲ್ಲಿ ಆಡಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ.

ಕಂಟ್ರೋಲ್ ಫ್ಲೆಕ್ಸಿಬೆಲಿಟಿ:

ಕಂಟ್ರೋಲ್ ಫ್ಲೆಕ್ಸಿಬೆಲಿಟಿ:

ಅಮೆಚೂರ್ ಗೇಮರ್ ಗಳಿಗೆ ಕನ್ಸೋಲ್ ಜಾಯ್ ಸಿಕ್ಟ್ ಗಿಂಗಲೂ ಪಿ ಸಿಯ ಕೀಬೋರ್ಡ್ ಮತ್ತು ಮೌಸ್ ಹೆಚ್ಚಿನ ಕಂಟ್ರೋಲ್ ನೀಡುತ್ತಿದೆ. ಆದರೆ ಹೆಚ್ಚು ಕಲಿತಂತೆ ಕನ್ಸೋಲ್ ಮೇಲೆ ಓಲವು ಜಾಸ್ತಿಯಾಗಲಿದೆ. ಇದಲ್ಲದೇ ಜಾಯ್ಸ್ ಸ್ಟಿಕ್ ಗಳನ್ನು ಕಂಪ್ಯೂಟರಿಗೂ ಜೋಡಿಸಿಕೊಳ್ಳುವ ಅವಕಾಶ ಇತ್ತೀಚೆಗೆ ದೊರೆಯುತ್ತಿದೆ.

Best Mobiles in India

English summary
Hard Core gamers always come up with the argument which platform is the best for gaming -- PC or Console.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X