ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

By Ashwath
|

ಡ್ಯುಯಲ್‌ ಸಿಮ್‌ ಫೀಚರ್‌ಫೋನ್‌,ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ವಿಶ್ವದ ಬ್ರ್ಯಾಂಡ್‌ ಕಂಪೆನಿಗಳಿಗೆ ಸ್ಪರ್ಧೆ‌ ನೀಡುತ್ತಿರುವ ಮೈಕ್ರೋಮ್ಯಾಕ್ಸ್‌ ಈಗ ಟ್ಯಾಬ್ಲೆಟ್‌‌ನಲ್ಲೂ ಎರಡು ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಟ್ಯಾಬ್ಲೆಟ್‌ ತಯಾರಿಸಿದೆ.ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ನಲ್ಲಿ ಹೊಸ ಎರಡು ಓಎಸ್‌‌‌ ಒಳಗೊಂಡಿರುವ ಕ್ಯಾನ್‌ವಾಸ್‌ ಲ್ಯಾಪ್‌ಟಾಪ್‌ ಟ್ಯಾಬ್ಲೆಟ್‌ನ್ನು ಪ್ರದರ್ಶನಕ್ಕಿರಿಸಿದೆ.

ಎಚ್‌ಡಿ ಸ್ಕ್ರೀನ್‌ ಹೊಂದಿರುವ ಟ್ಯಾಬ್ಲೆಟ್‌‌ ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌ ಮತ್ತು ವಿಂಡೋಸ್‌ 8.1 ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ. ಮೈಕ್ರೋಮ್ಯಾಕ್ಸ್‌ ಈ ಟ್ಯಾಬ್ಲೆಟ್‌ನೊಂದಿಗೆ ವೈರ್‌ಲೆಸ್‌ ಕೀಬೋರ್ಡ್‌‌ನ್ನು ಸಹ ಬಿಡುಗಡೆ ಮಾಡಿದೆ.ದೇಶೀಯ ಮಾರುಕಟ್ಟೆಗೆ ಈ ಟ್ಯಾಬ್ಲೆಟ್‌ನ್ನು ಅಧಿಕೃತವಾಗಿ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದ್ದು ಇದರ ಬೆಲೆಯನ್ನು ಮೈಕ್ರೋಮ್ಯಾಕ್ಸ್‌ ಪ್ರಕಟಿಸಿಲ್ಲ.

ಹೆಚ್ಚಾಗಿ ಕಡಿಮೆ ಬೆಲೆಯಲ್ಲಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ವಿಯಾಗುತ್ತಿರುವ ಮೈಕ್ರೋಮ್ಯಾಕ್ಸ್‌,ಭಾರತದಲ್ಲಿ ಶೇ.18 ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಐಡಿಸಿ ತನ್ನ ವರದಿಯಲ್ಲಿ ಹೇಳಿತ್ತು.

ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್‌ ಅಕ್ಟೋಬರ್‌ನಲ್ಲಿ ಮೊದಲ ಫುಲ್‌ ಎಚ್‌‌ಡಿ ಸ್ಕ್ರೀನ್‌ ಹೊಂದಿರುವ ಕ್ಯಾನ್‌ವಾಸ್‌ ಟರ್ಬೋ ಸ್ಮಾರ್ಟ್‌ಫೋನ್‌ ಬಿಡುಗಡೆಮಾಡಿತ್ತು. ಈ ಸ್ಮಾರ್ಟ್‌ಫೋನಿಗೆ ಹಾಲಿವುಡ್‌ ನಟ ಹ್ಯೂ ಜ್ಯಾಕ್‌ಮನ್‌ರನ್ನು ಮೈಕ್ರೋಮ್ಯಾಕ್ಸ್‌‌ ನೂತನ ರಾಯಭಾರಿಯಾಗಿ ನೇಮಿಸಿತ್ತು.

ಮೈಕ್ರೋಮ್ಯಾಕ್ಸ್‌ ಈಗ ದೇಶದಲ್ಲೇ ಸ್ಮಾರ್ಟ್‌‌‌ಫೋನ್‌‌ ಬಿಡಿಭಾಗಗಳನ್ನು ಜೋಡಿಸುವ ಕಾರ್ಖಾನೆ ತೆರೆಯಲು ‌‌ಮುಂದಾಗಿದ್ದು.ಈಗಾಗಲೇ ಉತ್ತರಖಂಡ್‌ದ ರುದ್ರಪುರದಲ್ಲಿ ಕಾರ್ಖಾನೆ ತೆರೆದಿದ್ದು ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳ ಜೋಡಣೆಯ ಕೆಲಸ ಪ್ರಯೋಗಿಕವಾಗಿ ಆರಂಭವಾಗಿದೆ. ಈ ತಿಂಗಳಿನಲ್ಲಿ ರಷ್ಯಾ ಬ್ರಝಿಲ್‌ ದೇಶಗಳ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಮೈಕ್ರೋಮ್ಯಾಕ್ಸ್‌ ಈ ಹಿಂದೆ ಹೇಳಿತ್ತು.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಟ್ಯಾಬ್‌

ವಿಶೇಷತೆ:
10.1 ಇಂಚಿನ ಐಪಿಎಸ್‌ ಕೆಪಾಸಿಟಿವ್ ಸ್ಕ್ರೀನ್‌(1280x800 ಪಿಕ್ಸೆಲ್‌)
ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಮತ್ತು ವಿಂಡೋಸ್‌ 8.1 ಓಎಸ್‌‌ ಡ್ಯುಯಲ್‌ ಬೂಟ್‌ ಸಪೋರ್ಟ್‌
1.46GHz ಇಂಟೆಲ್‌ Celeron N2805 ಪ್ರೊಸೆಸರ್‌
2ಜಿಬಿ ರ್‍ಯಾಮ್‌
32 ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌4.0, ವೈಫೈ
7400mAh ಬ್ಯಾಟರಿ

ಇದನ್ನೂ ಓದಿ: ಭಾರತದ ಟಾಪ್‌ 10 ಮೊಬೈಲ್‌ ಬ್ರ್ಯಾಂಡ್‌ ಕಂಪೆನಿಗಳು

 ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಟ್ಯಾಬ್‌

 ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಟ್ಯಾಬ್‌

 ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಟ್ಯಾಬ್‌

 ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಬಿಡುಗಡೆ ಮಾಡಲಿದೆ ಡ್ಯುಯಲ್‌ ಓಎಸ್ ಟ್ಯಾಬ್ಲೆಟ್‌‌‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಲ್ಯಾಪ್‌ಟ್ಯಾಬ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X