ಮೈಕ್ರೋಸಾಫ್ಟ್‌ನಿಂದ ಆಂಡ್ರಾಯ್ಡ್ ವೇರ್‌ಗೆ 'ಅನಲಾಗ್' ಕೀಬೋರ್ಡ್

By Shwetha
|

ಆಂಡ್ರಾಯ್ಡ್ ವೇರ್ ವೇರಿಯೇಬಲ್ ಅನ್ನು ಧರಿಸುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಇಂತಹ ಸಮಯ ಸೂಚಕಕ್ಕಾಗಿ ಮೈಕ್ರೋಸಾಫ್ಟ್ ಪ್ರೊಟೋಟೈಪ್ ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. 'ನ್ಯೂ ಅನಲಾಗ್ ಕೀ ಬೋರ್ಡ್' ಇದಾಗಿದ್ದು ನೀವು ಸ್ಮಾರ್ಟ್‌ವಾಚ್ ಪರದೆಯ ಮೇಲೆ ಅಕ್ಷರಗಳನ್ನು ಬರೆಯಬಹುದಾಗಿದೆ. ಈ ಹೊಸ ಅಪ್ಲಿಕೇಶನ್ ಕುರಿತು ನೀವು ಈಗಾಗಲೇ ಹೆಚ್ಚು ಕಾತರರಾಗಿದ್ದರೆ, ಮೈಕ್ರೋಸಾಫ್ಟ್‌ನ ವೆಬ್‌ಸೈಟ್‌ನಿಂದ ಕೀಬೋರ್ಡ್ ಅನ್ನು ನಿಮಗೆ ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ: ದೀಪಾವಳಿ ದರ ಕಡಿತ ನೋಕಿಯಾ ಫೋನ್‌ಗಳು

ವೇರಿಯೇಬಲ್ ಕ್ಷೇತ್ರದಲ್ಲಿ ವಾಯ್ಸ್ ಇನ್‌ಪುಟ್ ಟೆಕ್ಸ್ಟಿಂಗ್ ಚಾಲ್ತಿಯಲ್ಲಿರುವ ವಿಧಾನವಾಗಿದ್ದು ನಿಮ್ಮ ಸ್ಮಾರ್ಟ್‌ವಾಚ್‌ನಲ್ಲಿ ನಿಮಗೆ ಮಾತನಾಡುವುದು ಬೇಡವಾಗಿದ್ದ ಸಂದರ್ಭದಲ್ಲಿ ವಾಯ್ಸ್ ರೆಕಗ್ನಿಶನ್ ಯಾವಾಗಲೂ ಸರಿಯಾಗಿರುವುದಿಲ್ಲ. ಎಂಬುದು ಮೈಕ್ರೋಸಾಫ್ಟ್‌ನ ಅಭಿಮತವಾಗಿದೆ. ಮೈಕ್ರೋಸಾಫ್ಟ್‌ನ ಅನಲಾಗ್ ಕೀಬೋರ್ಡ್ ಚೌಕ ಪರದೆ 320 x 320 ರೆಸಲ್ಯುಶನ್‌ನೊಂದಿಗೆ ಬೆಂಬಲವನ್ನೊದಗಿಸುತ್ತಿದ್ದು ಇನ್ನು ವೃತ್ತಾಕಾರದ್ದನ್ನು ಮೋಟೋ 360 ನಲ್ಲಿ ಬಳಸಬಹುದಾಗಿದೆ. ಇದು ಕಡಿಮೆ ರೆಸಲ್ಯೂಶನ್ ಪರದೆಗೆ (280x280) ಮತ್ತು 360 ಆವೃತ್ತಿಗೆ ಬೆಂಬವನ್ನೊದಗಿಸುವುದಿಲ್ಲ ಎಂದು ಕಂಪೆನಿ ತಿಳಿಸಿದೆ.

ಆಂಡ್ರಾಯ್ಡ್ ವೇರ್ ಡಿವೈಸ್‌ಗಳಿಗೆ ಮೈಕ್ರೋಸಾಫ್ಟ್ ವರದಾನ

ಮೈಕ್ರೋಸಾಫ್ಟ್‌ ಹೇಳುವಂತೆ ಇದರಲ್ಲಿ ಬರಹ, ಮಾತುಗಳು ಉತ್ತಮವಾಗಿದ್ದು ಹಿನ್ನಲೆ ಶಬ್ಧ ತೊಂದರೆಯನ್ನುಂಟು ಮಾಡುವುದಿಲ್ಲ. ಮೃದುವಾದ ಕೀಬೋರ್ಡ್‌ನಂತೆ, ಹೆಚ್ಚಿನ ಕೀಗಳು ಸಣ್ಣ ಪರದೆ ವಲಯವನ್ನು ಹಂಚಿಕೊಳ್ಳಬೇಕಾಗುತ್ತದೆ, ಆದರೆ ಬರಹ ವಿಧಾನವು ಪ್ರತಿ ಸಿಂಬಲ್‌ಗೂ ಪೂರ್ಣ ಪರದೆಯನ್ನು ಒದಗಿಸುತ್ತದೆ. ಇದರಿಂದಾಗಿ ಸಣ್ಣ ಡಿವೈಸ್‌ಗಳಲ್ಲೂ ಸುಲಭವಾಗಿ ಅಕ್ಷರಗಳು ಪ್ರವೇಶಿಸಬಹುದಾಗಿದೆ.

ಇದನ್ನೂ ಓದಿ: ಟಾಪ್ 10 ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

"ಇನ್ನು ಪರದೆಯನ್ನು ನೋಡದೇ ಕೂಡ ಬರಹ ವಿಧಾನವನ್ನು ಇಲ್ಲಿ ಪ್ರಯೋಗಿಸಬಹುದಾಗಿದೆ. ಇನ್ನು ವೃತ್ತಾಕಾರದ ಡಿಸ್‌ಪ್ಲೇನಲ್ಲಿ ಕೆಲವೊಂದು ಬರಹ ವಿಧಾನಗಳನ್ನು ಸಣ್ಣ ಮಾರ್ಪಾಡುಗಳ ಮೂಲಕ ಜಾರಿಗೆ ತರಬಹುದಾಗಿದೆ. ಇದು ನಿಜಕ್ಕೂ ಜನಪ್ರಿಯತೆಯನ್ನು ಹೆಚ್ಚಿಸುವಂಥದ್ದಾಗಿದೆ".

Best Mobiles in India

English summary
This article tells about Microsoft Releases ‘Analog’ Keyboard for Android Wear Devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X