ಮೈಕ್ರೋಸಾಫ್ಟ್ ನಿಂದ ಸ್ವಂತ ವಿಂಡೋಸ್ 8 ಟ್ಯಾಬ್ಲೆಟ್

By Varun
|
ಮೈಕ್ರೋಸಾಫ್ಟ್ ನಿಂದ ಸ್ವಂತ ವಿಂಡೋಸ್ 8 ಟ್ಯಾಬ್ಲೆಟ್

ಆಪರೇಟಿಂಗ್ ಸಿಸ್ಟಮ್ ಹಾಗು ತಂತ್ರಾಂಶಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ 8 ತಂತ್ರಾಂಶವನ್ನು ಅಕ್ಟೋಬರ್ ವೇಳೆಗೆ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೈಕ್ರೋಸಾಫ್ಟ್ ಕಂಪನಿ ತನ್ನ ವಿಂಡೋಸ್ RT ತಂತ್ರಾಂಶವನ್ನು ಬಳಸಿಕೊಂಡು ತನ್ನದೇ ಆದ ಟ್ಯಾಬ್ಲೆಟ್ ಹೊರತರಲು ನಿರ್ಧರಿಸಿದ್ದು ಇದರ ಬಗ್ಗೆ ಇಂದು ಲಾಸ್ ಎಂಜಲೀಸ್ ನಲ್ಲಿ ಘೋಷಣೆಯಾಗಲಿದೆ ಎಂಬ ಸುದ್ದಿ ಬಂದಿದೆ.

ಮೈಕ್ರೋಸಾಫ್ಟ್ ಕಂಪನಿ ತನ್ನ 37 ವರ್ಷದ ಇತಿಹಾಸದಲ್ಲಿ ಇದುವರೆಗೂ ತನ್ನದೇ ಆದ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ತಯಾರಿಸಿಲ್ಲದಿದ್ದರೂ, ಆಪಲ್ ನ ಐಪ್ಯಾಡ್ ಬಂದಮೇಲೆ ವಿಂಡೋಸ್ ತಂತ್ರಾಂಶವಿರುವ ಲ್ಯಾಪ್ಟಾಪುಗಳಿಗೆ ಹೊಡೆತ ಬಿದ್ದಿದ್ದು, ಅದೂ ಅಲ್ಲದೆ ಆಂಡ್ರಾಯ್ಡ್ ತಂತ್ರಾಂಶವಿರುವ ಟ್ಯಾಬ್ಲೆಟ್ ಗಳು ಬೇಡಿಕೆಯಲ್ಲಿರುವುದರಿಂದ ಇವೆಲ್ಲವನ್ನೂ ಒಟ್ಟಿಗೆ ಎದುರಿಸಲು ಮೈಕ್ರೋಸಾಫ್ಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ತನ್ನ ವಿಂಡೋಸ್ 8 ತಂತ್ರಾಂಶವಿರುವ ಟ್ಯಾಬ್ಲೆಟ್ ಮಾದರಿಯನ್ನು ಡೆಲ್, ಏಸರ್, ಅಸುಸ್ ನಂತಹ ಕಂಪನಿಗಳು ಕಂಪ್ಯೂಟೆಕ್ಸ್ 2012 ನಲ್ಲಿ ಅನಾವರಣಗೊಳಿಸಿದ್ದು ಕೂಡ ಮೈಕ್ರೋಸಾಫ್ಟ್ ಗೆ ಪ್ರೇರಣೆಯಾಗಿದೆ ಎನ್ನಲಾಗಿದೆ.

ಹಾರ್ಡ್ವೇರ್ ಕ್ಷೇತ್ರದಲ್ಲಿ ಅಷ್ಟೇನೂ ಅನುಭವವಿಲ್ಲದ ಅದು ಈಗಾಗಲೇ Zune ಹಾಗು Xbox 360 ಉತ್ಪಾದನೆ ಮಾಡಿ ಅಷ್ಟೇನೂ ಸಫಲತೆ ಕಂಡಿಲ್ಲವಾದ್ದರಿಂದ ಟ್ಯಾಬ್ಲೆಟ್ ಅನ್ನು ಹೇಗೆ ಉತ್ಪಾದನೆ ಮಾಡಿ ಸ್ಪರ್ಧೆ ಮಾಡಲಿದೆ ಎಂಬುದು ದೊಡ್ಡ ಪ್ರಶ್ನೆ.

ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಅನ್ನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಹಾಗು ಆಪಲ್ ನ ಐಪ್ಯಾಡ್ ಗಳಿಗೆವಿಂಡೋಸ್ 8 ತಂತ್ರಾಶದ ಟ್ಯಾಬ್ಲೆಟ್ ಗಳುಇವುಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X