ಎಮ್‌ಡಬ್ಲ್ಯೂಸಿನಲ್ಲಿ ಮಿಂಚಿದ ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

By Shwetha
|

ಮೊಬೈಲ್ ಜಗತ್ತಿನಲ್ಲಿಯೇ ಅತಿ ದೊಡ್ಡ ಕಾರ್ಯಾಗಾರವೆಂಬ ಹೆಗ್ಗಳಿಕೆಗೆ ಪಾತ್ರವಾದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2015 ಜಗತ್ತಿನ ಅತ್ಯಪೂರ್ಣ ಉತ್ಪನ್ನಗಳನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸಿದೆ. ಬಾರ್ಸಿಲೋನಾ ಸ್ಪೈನ್‌ನಲ್ಲಿ ನಡೆಯುತ್ತಿರುವ ಈ ಮೊಬೈಲ್ ಕಾರ್ಯಾಗಾರ ಹಲವಾರು ಬ್ರ್ಯಾಂಡ್ ಉತ್ಪನ್ನಗಳಿಗೆ ಪ್ರಧಾನ ಸೇತುವೆ ಎಂದೆನಿಸಿದೆ.

ಇದನ್ನೂ ಓದಿ: ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಇದೇ ಸಂದರ್ಭದಲ್ಲಿ ಸೋನಿ ತನ್ನ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದ್ದು ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್ ಇದಾಗಿದೆ. ಇದು ಸ್ನ್ಯಾಪ್‌ಡ್ರಾಗನ್ 810 ಜಿಪಿಯುನೊಂದಿಗೆ ಬಂದಿದ್ದು, 3ಜಿಬಿ RAM ಅನ್ನು ಒಳಗೊಂಡಿದೆ. ಲಾಲಿಪಪ್ 5.0 ಸಾಫ್ಟ್‌ವೇರ್ ಈ ಡಿವೈಸ್‌ನಲ್ಲಿದೆ. ಇಂದಿನ ಲೇಖನದಲ್ಲಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್ ಕುರಿತ ಪ್ರಧಾನ ವಿಶೇಷತೆಗಳನ್ನು ಅರಿತುಕೊಳ್ಳೋಣ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್ 10.1 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು 2560×1600 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಸೋನಿಯ ಟ್ರಿಲ್ಯುಮಿನಿಯಸ್ ತಂತ್ರಜ್ಞಾನವನ್ನು ಡಿಸ್‌ಪ್ಲೇ ಒಳಗೊಂಡಿದ್ದು ಎಕ್ಸ್ ರಿಯಾಲಿಟಿ ಮೊಬೈಲ್ ಎಂಜಿನ್ ಅನ್ನು ಇದು ಪಡೆದುಕೊಂಡಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಈ ಸ್ಲಿಮ್ ಟ್ಯಾಬ್ಲೆಟ್ 2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810, 64- ಬಿಟ್ ಓಕ್ಟಾ ಕೋರ್ ಮತ್ತು ಅಡ್ರೆನೊ 430 ಜಿಪಿಯುನೊಂದಿಗೆ ಬಂದಿದ್ದು 3 ಜಿಬಿ RAM ಇದರಲ್ಲಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್ 32ಜಿಬಿ ಫ್ಲ್ಯಾಶ್ ಮೆಮೊರಿಯೊಂದಿಗೆ ಬಂದಿದ್ದು, ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಇನ್ನು ಟ್ಯಾಬ್ಲೆಟ್‌ನ ಕ್ಯಾಮೆರಾ ಭಾಗದತ್ತ ಗಮನ ಕೊಟ್ಟಾಗ, ಇದು 8 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಈ ಜೆಡ್4 ಟ್ಯಾಬ್ಲೆಟ್ ಆಂಡ್ರಾಯ್ಡ್ 5.0 ವನ್ನು ಹೊಂದಿದ್ದು ಅಪ್ಟಿಮೈಸ್ ಎಕ್ಸ್‌ಪೀರಿಯಾ ಲಾಂಚರ್ ಅನ್ನು ಹೊಂದಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಇನ್ನು ಸಂಪರ್ಕ ಅಂಶಗಳತ್ತ ಗಮನಹರಿಸುವುದಾದರೆ ಇದು ಜಿಎಸ್‌ಎಮ್, ಜಿಪಿಆರ್‌ಎಸ್/ಎಡ್ಜ್, 2ಜಿ, ಯುಎಮ್‌ಟಿಎಸ್, ಎಚ್‌ಎಸ್‌ಪಿಎ 3ಜಿ ಒಳಗೊಂಡಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಇದು ಮೆಟಲ್ ಫ್ರೇಮ್‌ನೊಂದಿಗೆ ಬಂದಿದೆ ಮತ್ತು ಡ್ಯುರೇಬಲ್ ಗ್ಲಾಸ್ 6.1 ಎಮ್ಎಮ್ ಅನ್ನು ಪಡೆದುಕೊಂಡಿದೆ. ಇದು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ದೊರೆಯುತ್ತಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್4 ಟ್ಯಾಬ್ಲೆಟ್

ಸೋನಿ ಎಕ್ಸ್‌ಪೀರಿಯಾ ಜೆಡ್ 4 ಟ್ಯಾಬ್ಲೆಟ್ 6000 mAh ಬ್ಯಾಟರಿಯನ್ನು ಒಳಗೊಂಡಿದೆ ಮತ್ತು ಇದು 17 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ.

Best Mobiles in India

English summary
This article tells about MWC 2015: Top 8 Features of Sony Xperia Z4 Tablet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X