ಏರ್‌ಟೈಪ್‌ನಿಂದ ಕೀಬೋರ್ಡ್‌ ಇನ್ನು ಮೂಲೆಗುಂಪು

By Shwetha
|

ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್‌ಗಳಲ್ಲಿ ಟೈಪ್ ಮಾಡುವುದು ಒಮ್ಮೊಮ್ಮೆ ಕಿರಿಕಿರಿ ಎಂದೆನಿಸುತ್ತದೆ ಅಲ್ಲವೇ? ಆದರೆ ಇನ್ನು ಮುಂದೆ ಈ ಡಿವೈಸ್ ಮಾರುಕಟ್ಟೆಗೆ ಲಾಂಚ್ ಆದಲ್ಲಿ ಈ ಕಿರಿಕಿರಿಗೆ ನೀವು ಶಾಶ್ವತವಾಗಿ ವಿದಾಯ ಹೇಳಲಿರುವಿರಿ.

ಆಸ್ಟಿನ್ ಮತ್ತು ಟೆಕ್ಸಾಸ್‌ನಲ್ಲಿ ಕೀಬೋರ್ಡ್ ಇಲ್ಲದೆಯೇ ಟೈಪ್ ಮಾಡಬಹುದಾದ ಸಂಶೋಧನೆಯನ್ನು ನಡೆಸಿದ್ದು ಇದರಿಂದ ಕೀಬೋರ್ಡ್ ಇನ್ನು ತೆರೆಮರೆಗೆ ಸರಿಯಲಿದೆ.

ಇನ್ನು ಟೈಪ್ ಮಾಡಲು ಕೀಬೋರ್ಡ್ ಬೇಕಿಲ್ಲ!!!

ಈ ಪ್ರಾಜೆಕ್ಟ್ ಹೆಸರು ಏರ್‌ಟೈಪ್ ಎಂದಾಗಿದ್ದು ಇದು "ಕೀಬೋರ್ಡ್ ಇಲ್ಲದ ಕೀಬೋರ್ಡ್" ಆಗಿದೆ. ನಿಮಗೆ ಟೈಪ್ ಮಾಡಲು ಇಲ್ಲಿ ಕೀಬೋರ್ಡ್‌ನ ಅವಶ್ಯಕತೆ ಇರುವುದಿಲ್ಲ. ಯಾವುದೇ ಸ್ಥಳದಲ್ಲಿ ಕೂಡ ಕುಳಿತು ನಿಮಗೆ ಬೇಕಿದ್ದನ್ನು ಟೈಪ್ ಮಾಡಬಹುದಾಗಿದೆ. ಚಪ್ಪಟೆ ವಲಯದಲ್ಲಿ ಗೋಚರವಾಗುವ ವರ್ಚ್ಯುವಲ್ ಕೀಬೋರ್ಡ್ ಚಿತ್ರವನ್ನು ಬಳಸಿಕೊಂಡು ಈ ಡಿವೈಸ್ ಕಾರ್ಯನಿರ್ವಹಿಸಲಿದೆ.

ಏರ್‌ಟೈಪ್ ಸಿಸ್ಟಮ್ ಕಪ್‌ನಂತಿರುವ ಸೆನ್ಸಾರ್ ವಿಭಾಗಗಳನ್ನು ಒಳಗೊಂಡಿದ್ದು ಇದನ್ನು ನಿಮ್ಮ ಕೈಗಳ ಸುತ್ತಲೂ ಹಾಕಿಕೊಳ್ಳಬೇಕಾಗುತ್ತದೆ ಇದು ಬೆರಳುಗಳ ಮಣಿಗಂಟಿಗಳಲ್ಲಿ ಕುಳಿತುಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ಯೂನಿಟ್ಸ್ ನಿಮ್ಮ ಬೆರಳುಗಳ ಚಲನೆಗಳನ್ನು ಹಿಂಬಾಲಿಸಿಕೊಂಡು ನೀವು ಯಾವ ಕೀಯನ್ನು ಒತ್ತುತ್ತಿದ್ದೀರಿ ಎಂಬುದನ್ನು ಅರಿತುಕೊಂಡು ಆ ಕೀಯನ್ನು ನಿಮಗೆ ಒದಗಿಸುತ್ತದೆ.

ಈ ಸಾಧನವನ್ನು ಬಳಸಲು ನಿಮ್ಮ ಬೆರಳುಗಳ ಚಲನೆ ಅತೀ ಮುಖ್ಯವಾಗಿದೆ. ಪ್ರಾಜೆಕ್ಟ್ ತಂಡದ ಪ್ರಕಾರ, ಈ ಸಾಧನವು ಕೆಲವೊಂದು ತಂತ್ರಜ್ಞಾನದಿಂದ ರೂಪಿತಗೊಂಡಿದ್ದು ನೀವು ಟೈಪ್ ಮಾಡುವ ಪದಗಳನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಧ್ವನಿ ಮಾದರಿಗಳನ್ನು ಗುರುತಿಸಿಕೊಂಡು ಧ್ವನಿ ಗುರುತಿಸುವಿಕೆ "ಟೆಕ್" ಹೇಗೆ ಕೆಲಸ ಮಾಡುತ್ತದೋ ಅದೇ ವಿಧಾನವನ್ನು ಏರ್‌ಟೈಪ್ ಬಳಸುತ್ತಿದೆ.

ನಿಮ್ಮ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್‌ಗೆ ಸರಿಯಾಗಿ ಹೊಂದಿಕೊಳ್ಳುವಂತೆ ಈ ಏರ್‌ಟೈಪ್ ಸಾಧನವನ್ನು ನಿರ್ಮಿಸಲಾಗಿದ್ದು ಟೈಪಿಂಗ್‌ನಲ್ಲಿ ಉಂಟಾಗುವ ಕಾಗುಣಿತ ದೋಷಗಳನ್ನು ಕೂಡ ಸರಿಪಡಿಸುವ ಕಲೆಯನ್ನು ಏರ್‌ಟೈಪ್ ಹೊಂದಿದೆ.

ಏರ್‌ಟೈಪ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ವೀಡಿಯೋದಲ್ಲಿ ನೋಡಿ

<center><iframe width="100%" height="315" src="//www.youtube.com/embed/5UpEieZkJhE" frameborder="0" allowfullscreen></iframe></center>

Best Mobiles in India

Read more about:
English summary
This article tells about that Protoype improves mobile typing by ditching the keyboard.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X