ಅಂತರ್ಜಾಲ ಡೇಟಾ ಸೇವೆಯನ್ನು ಸುಗಮಗೊಳಿಸುವ ಸರಳ ವಿಧಾನಗಳು

By Shwetha
|

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಕೆಲಸವೂ ಅಂತರ್ಜಾಲದಲ್ಲಿ ನಡೆಯುತ್ತಿದೆ, ದುಡ್ಡಿನ ವ್ಯವಹಾರವಾಗಿರಬಹುದು ಇಲ್ಲವೇ ಅಗತ್ಯದ ಡೇಟಾ ಸೇವೆ ಆಗಿರಬಹುದು, ಇಂದು ಅದನ್ನೆಲ್ಲಾವನ್ನೂ ಚಕಚಕನೇ ಅಂತರ್ಜಾಲದಲ್ಲಿ ಮಾಡಿ ಮುಗಿಸಬಹುದು. ಇಂದಿಗೂ ಹಾರ್ಡ್‌ಡಿಸ್ಕ್ ಮತ್ತು ಪೆನ್‌ಡ್ರೈವ್‌ನ ಪ್ರಯೋಗವನ್ನು ಅಂತರ್ಜಾಲ ಡೇಟಾ ಸೇವೆಯ ಮುಖಾಂತರ ಹೆಚ್ಚಿಸಲಾಗಿದೆ. ಆದರೆ ಅಂತರ್ಜಾಲ ಡೇಟಾ ಸೇವೆಯನ್ನು ಮಾಡುವ ಕೆಲ ವಿಭಿನ್ನ ವಿಧಾನಗಳಿದ್ದು ಇದರಿಂದ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತದೆ. ಅಂದರೆ ಇದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ.

ನಿಮ್ಮ ಹಾರ್ಟ್‌ ಡಿಸ್ಕ್, ಪೆನ್ ಡ್ರೈವ್ ಇಲ್ಲವೇ ಪಿಸಿಯ ಯಾವುದೇ ತೊಂದರೆಯಿಂದ ನಿಮ್ಮ ಡೇಟಾ ಅಳಿಸಿ ಹೋಯಿತೆಂದರೆ ನಿಮಗೆ ತೊಂದರೇ ಇದಕ್ಕೆ ಬದಲಾಗಿ ಅಂತರ್ಜಾಲ ಡೇಟಾ ಸೇವೆಯನ್ನು ನೀವು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಪ್ರವೇಶಿಸಬಹುದಾಗಿದೆ ಅದರಲ್ಲೂ ಮೊಬೈಲ್ ಮತ್ತು ಟ್ಯಾಬ್ಲೆಟ್‌ನ ಆಗಮನವಾದ ನಂತರ ಇದರ ಸೇವೆ ದುಪ್ಪಟ್ಟುಗೊಂಡಿದೆ. ಆದರೆ ಅಂತರ್ಜಾಲ ಡೇಟಾ ಸೇವೆಯನ್ನು ಮಾಡುವ ವಿವಿಧ ವಿಧಾನಗಳು ನಿಮಗೆ ಗೊತ್ತೇ?

ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಮಾಹಿತಿಯ ಬಗ್ಗೆ ನಾವು ವಿವರ ನೀಡಲಿದ್ದು ನಿಮಗೆ ಇದು ಸಹಕಾರಿಯಾಗಲಿದೆ.

#1

#1

ಮೈಕ್ರೋಸಾಫ್ಟ್‌ನ ಸ್ಕೈ ಡ್ರೈವ್ ಕ್ಲೌಡ್ ಸೇವೆಯ ಸಹಕಾರದಿಂದ ನೀವು ಏಳು ಜಿಬಿವರೆಗೆ ಉಚಿತವಾಗಿ ಡೇಟಾ ಸೇವೆಯನ್ನು ಮಾಡಬಹುದಾಗಿದೆ. ಇದರ ನಂತರವೂ ನಿಮಗೆ ಹೆಚ್ಚುವರಿ ಮೆಮೊರಿಯ ಅಗತ್ಯವಿದೆ ಎಂದಾದಲ್ಲಿ ಸ್ವಲ್ಪ ದುಡ್ಡನ್ನು ನೀಡಿ ಕ್ಲೌಡ್ ಸ್ಟೋರೇಜ್‌ನ ಮೆಮೊರಿಯನ್ನು ಹೆಚ್ಚಿಸಬಹುದು.

#2

#2

ಸ್ಕೈ ಡ್ರೈವ್‌ನಂತೆಯೇ ಗೂಗಲ್ ಡ್ರೈವ್‌ನಲ್ಲಿ ಕೂಡ ನೀವು ಹದಿನೈದು ಜಿಬಿವರೆಗೆ ಡೇಟಾವನ್ನು ಉಳಿಸಬಹುದಾಗಿದೆ ಆದರೆ ಇದರಲ್ಲಿರುವ ವ್ಯತ್ಯಾಸವೆಂದರೆ ಗೂಗಲ್‌ ಡ್ರೈವ್‌ನಲ್ಲಿ ನಿಮಗೆ ಕಡಿಮೆ ಸಂಗ್ರಹಣೆ ದೊರೆಯುತ್ತದೆ.

#3

#3

ಡ್ರಾಪ್ ಬಾಕ್ಸ್‌ನಲ್ಲಿ ಐದು ಜಿಬಿವರೆಗೆ ಅಂತರ್ಜಾಲ ಸಂಗ್ರಹಣೆ ದೊರೆಯುತ್ತದೆ, ನಿಮಗೆ ಇದರಲ್ಲಿ ಹೆಚ್ಚುವರಿ ಸ್ಥಳ ಬೇಕೆಂದಾದಲ್ಲಿ 700 ರೂಪಾಯಿಗಳಲ್ಲಿ 25 ಜಿಬಿವರೆಗೆ ಹೆಚ್ಚುವರಿ ಸ್ಥಳವನ್ನು ಖರೀದಿಸಬಹುದಾಗಿದೆ.

#4

#4

ನೀವು ನಿಮ್ಮ ಪಿಸಿಯಲ್ಲಿ ವಿಂಡೋನ ಪ್ರಯೋಗವನ್ನು ಮಾಡುತ್ತಿಲ್ಲ ಎಂದಾದಲ್ಲಿ ಲಾಂಡೆಕ್ಸ್ ಅಥವಾ ಉಬಂಟು ಯೂಜರ್‌ನಲ್ಲಿ ಅಂತರ್ಜಾಲ ಕ್ಲೌಡ್ ಸಂಗ್ರಹಣೆಯ ಸಹಾಯವನ್ನು ಪಡೆಯಬಹುದಾಗಿದೆ ಇದರಲ್ಲಿ ನಿಮಗೆ 5 ಜಿಬಿಯ ಅಂತರ್ಜಾಲ ಡೇಟಾ ಸಂಗ್ರಹಣೆ ದೊರೆಯುತ್ತದೆ.

#5

#5

ಮೊಬೈಲ್ ಬಳಕೆದಾರರಿಗೆ ಈ ಸೇವೆಯು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಇದನ್ನು ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ ಸೇರಿಕೊಂಡು ಪ್ರಾರಂಭಿಸಿತು. ಇದರಲ್ಲಿ ಬಳಕೆದಾರರಿಗೆ 8 ಜಿಬಿಇಯಷ್ಟು ಡೇಟಾ ಸಂಗ್ರಹಣೆ ದೊರೆಯುತ್ತದೆ.

#6

#6

ಸೂಪರ್ ಸಿಂಕ್ ಕ್ಲೌಡ್ ಸಂಗ್ರಹಣೆಯಲ್ಲಿ ನಿಮಗೆ 5 ಜಿಬಿವರೆಗೆ ಡೇಟಾ ಸೇವೆ ಲಭ್ಯವಿದ್ದು ಇದನ್ನು ವಿಂಡೋ ಅಥವಾ ಮ್ಯಾಕ್ ಬಳಕೆದಾರರು ತಮ್ಮ ಪಿಸಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

#7

#7

ಇದೊಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು ನಿಮ್ಮ ಡ್ರಾಪ್ ಬಾಕ್ಸ್‌ನಂತೆಯೇ ನಿಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಬಳಸಬಹುದಾಗಿದೆ. ಆದರೆ ಇದರಲ್ಲಿ ನಿಮಗೆ ಕೇವಲ 500 ಎಮ್‌ಬಿ ಡೇಟಾ ಸಂಗ್ರಹಣೆ ದೊರೆಯುತ್ತದೆ ಆದರೆ ಇದು ಇತರ ಇತರ ಪ್ಲಾಟ್‌ಫಾರ್ಮ್‌ನಂತೆ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿಲ್ಲ.

Best Mobiles in India

English summary
This article tells about Safe way to save data in Online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X