ಸ್ಯಾಮ್ಸಂಗ್ ಗ್ಯಾಲಕ್ಸಿ Tab 2 ಆಂಡ್ರಾಯ್ಡ್ ಟ್ಯಾಬ್ಲೆಟ್

By Varun
|
ಸ್ಯಾಮ್ಸಂಗ್ ಗ್ಯಾಲಕ್ಸಿ Tab 2 ಆಂಡ್ರಾಯ್ಡ್ ಟ್ಯಾಬ್ಲೆಟ್

ಸಣ್ಣ ಪುಟ್ಟ ಕಂಪನಿಗಳೆಲ್ಲಾ ಭಾರತೀಯ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್ಟುಗಳನ್ನು ಬಿಡುಗಡೆ ಮಾಡುತ್ತಿರುವಾಗ ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ, ಜಗತ್ತಿಗೆ ವಿನೂತನ ಸಾಧನಗಳನ್ನು ಕೊಟ್ಟಿರುವ ಸ್ಯಾಮ್ಸಂಗ್ ಸುಮ್ಮನಿರಲು ಸಾಧ್ಯವೆ. ಹಾಗಾಗಿಯೇ ಈಗ ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 (ಟ್ಯಾಬ್ 310) ಟ್ಯಾಬ್ಲೆಟ್ ಅನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.

ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿರುವ ಈ ಟ್ಯಾಬ್ಲೆಟ್, ಫೆಬ್ರುವರಿ ತಿಂಗಳಲ್ಲಿ ನಡೆದ ವಿಶ್ವ ಮೊಬೈಲ್ ಕಾಂಗ್ರೆಸ್ ನಲ್ಲಿ ಸಾಕಷ್ಟು ಜನಮೆಚ್ಚುಗೆ ಗಳಿಸಿತ್ತು. ಹೈ ಸ್ಪೀಡ್ ಇಂಟರ್ನೆಟ್ ಬೇಕು ಎನ್ನುವವರಿಗಾಗಿ ಹೇಳಿ ಮಾಡಿಸಿದಂಥ HSPA+3G ತಂತ್ರಜ್ಞಾನ ಹೊಂದಿರುವ ಈ ಟ್ಯಾಬ್ಲೆಟ್ಟಿನಲ್ಲಿ ನೀವು 21 Mbps ವೇಗದಲ್ಲಿ ಡೌನ್ಲೋಡ್ ಮಾಡಬಹುದಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಕ್ಷಿಪ್ರವಾಗಿ ಬ್ರೌಸ್ ಮಾಡಲು ಅನುಕೂಲ ಮಾಡಿಕೊಡುತ್ತದೆ ಹಾಗು ಫೈಲ್ ಶೇರಿಂಗ್ ಕೂಡ ಸುಲಭವಾಗಿಸುತ್ತದೆ.

ಈ ಟ್ಯಾಬ್ಲೆಟ್ಟಿನ ಇತರೇ ಫೀಚರುಗಳು ಈ ರೀತಿ ಇವೆ:

  • 7 ಇಂಚು ಕೆಪಾಸಿಟಿವ್ ಟಚ್ ಸ್ಕ್ರೀನ್ (PLS ತಂತ್ರಜ್ಞಾನ)

  • 1204 x 600 ಪಿಕ್ಸೆಲ್ ರೆಸಲ್ಯೂಶನ್

  • ಗೂಗಲ್ ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • ಡ್ಯುಯಲ್ ಕೋರ್ 1 GHz ಪ್ರೊಸೆಸರ್

  • DDR 2 1 GB ರಾಮ್

  • 3 ಮೆಗಾಪಿಕ್ಸೆಲ್ ಕ್ಯಾಮೆರಾ

  • ವಿಜಿಎ ​​ಕ್ಯಾಮೆರಾ

  • ರಶಿಯನ್ ತಂತ್ರಜ್ಞಾನದ GLONASS ಉಪಗ್ರಹ ಟ್ರ್ಯಾಕಿಂಗ್ ಸಿಸ್ಟಮ್

  • USB 2.0

  • ಜಿಪಿಎಸ್ ಸೌಲಭ್ಯ

  • 3G ಸಂಪರ್ಕ

  • HSPA

  • ವೈಫೈ

  • 4000mAh ಲಿ-ಅಯಾನ್ ಬ್ಯಾಟರಿ

ಮುಂದಿನ ವಾರ ಬರಲಿರುವ ಈ ಟ್ಯಾಬ್ಲೆಟ್ ಬೇರೆ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ಟುಗಳಿಗೆ ಹೋಲಿಸಿದರೆ ಸ್ಪೆಸಿಫಿಕೇಷನ್ ಲೆಕ್ಕದಲ್ಲಿ ತುಂಬಾ ಚೆನ್ನಾಗಿದ್ದು 20,000 ರೂಪಾಯಿಗೆ ಕೊಳ್ಳಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X