ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌ನ ವಿಶೇಷತೆಯೇನು

By Shwetha
|

ಹೆಚ್ಚು ನಿರೀಕ್ಷಿತ ಟ್ಯಾಬ್ಲೆಟ್ ಶ್ರೇಣಿಯನ್ನು ಸ್ಯಾಮ್‌ಸಂಗ್ ಇಂದು ಘೋಷಿಸಿದ್ದು ಇದು ಗ್ಯಾಲಕ್ಸಿ ಟ್ಯಾಬ್ ಸಿರೀಸ್ ಎಂಬ ಹೆಸರಿನಿಂದ ನಿಮ್ಮ ಬಳಿಗೆ ಬರಲಿದೆ. ಇದು ಗ್ಯಾಲಕ್ಸಿ ಟ್ಯಾಬ್ ಎಸ್ 10.5 ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 8.4 ಅನ್ನು ಒಳಗೊಂಡಿದೆ.

ಮೆಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಈವೆಂಟ್ ನಡೆದಿದ್ದು ಕಂಪೆನಿ ತನ್ನೆರಡು ಸಣ್ಣನೆಯ ಟ್ಯಾಬ್ಲೆಟ್‌ಗಳನ್ನು ಮಾತ್ರ ಘೋಷಿಸಿದ್ದಲ್ಲದೆ, ಇದರ ವಿಶಿಷ್ಟತೆಗಳನ್ನು ಆಕ್ಸಸಿರೀಸ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಆಕ್ಸಸಿರೀಸ್‌ಗಳು ಗ್ಯಾಲಕ್ಸಿ ಟ್ಯಾಬ್ ಹೊಸ ಬಗೆಯ ವಿನ್ಯಾಸವುಳ್ಳ ಬುಕ್ ಕವರ್, ಸ್ಯಾಮ್‌ಸಂಗ್ ಬ್ಲೂಟೂತ್ ಕೀಬೋರ್ಡ್ ಮತ್ತು ಸ್ಯಾಮ್‌ಸಂಗ್ ಲೆವೆಲ್ ಸಿರೀಸ್ ಹೆಡ್‌ಫೋನ್‌ಗಳನ್ನು ಒಳಗೊಂಡಿದ್ದು ಆಕರ್ಷಕವಾಗಿದೆ. ಈ ಎಲ್ಲಾ ಆಕ್ಸಸಿರೀಸ್‌ಗಳು ಗ್ಯಾಲಕ್ಸಿ ಟ್ಯಾಬ್ ಎಸ್‌ ವೈಶಿಷ್ಟ್ಯಗಳ ಪ್ರಯೋಜನವನ್ನು ಪಡೆದುಕೊಂಡಿದ್ದು ಟ್ಯಾಬ್ಲೆಟ್ ಸಾಮರ್ಥ್ಯಗಳು ಮತ್ತು ಕೆಲವು ಟಾಸ್ಕ್‌ಗಳನ್ನು ಬಳಕೆದಾರರಿಗೆ ನೀಡುವ ಮೂಲಕ ಗ್ಯಾಲಕ್ಸಿ ಟ್ಯಾಬ್‌ಗೆ ಉತ್ತಮ ಮೌಲ್ಯವನ್ನೊದಗಿಸಿವೆ.

ಹಾಗಿದ್ದರೆ ಈ ಟ್ಯಾಬ್‌ನ ಆಕ್ಸಸಿರೀಸ್ ಅನ್ನು ಒಳಗೊಂಡ ಇನ್ನಷ್ಟು ಮಾಹಿತಿಗಳು ಕೆಳಗಿನ ಸ್ಲೈಡ್‌ಗಳಲ್ಲಿ ನಿಮಗಾಗಿ

#1

#1

ಬುಕ್ ಕವರ್‌ ಆಕ್ಸಸಿರೀಸ್ ಮೂರು ವಿಧದ ಡಿಸ್‌ಪ್ಲೇ ಏಂಗಲ್‌ಗಳೊಂದಿಗೆ ಬಂದಿದ್ದು ಇದು ವೀಡಿಯೋಗಳನ್ನು ವೀಕ್ಷಿಸಲು, ಓದಲು ಟೈಪ್ ಮಾಡಲು ಅನುಕೂಲಕರವಾಗಿದೆ. ಇದರ ಕವರ್ ಅನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಕಣ್ಮನ ಸೆಳೆಯುವ ರೀತಿಯಲ್ಲಿದೆ.

#2

#2

ಬುಕ್ ಕವರ್‌ನ ಅದೇ ಸುರಕ್ಷಿತ ರಚನೆಯನ್ನು ಬಳಕೆದಾರರು ಎದುರು ನೋಡುತ್ತಿದ್ದರೆ, ಸ್ಲಿಮ್ಮರ್ ವಿನ್ಯಾಸದೊಂದಿಗೆ ಸ್ಯಾಮ್‌ಸಂಗ್ ಸಿಂಪಲ್ ಕವರ್ ಅನ್ನು ರಚಿಸಿದೆ. ನಿಮ್ಮ ಡಿವೈಸ್‌ಗೆ ಇದು ಉತ್ತಮ ಸುರಕ್ಷೆಯನ್ನು ನೀಡಲಿದ್ದು ಸ್ಟೈಲಿಶ್ ಆಗಿದೆ. ನಿಮಗೆ ಕೈಯಲ್ಲಿ ಹಿಡಿಯಲೂ ಇದು ಆರಾಮದಾಯಕವಾಗಿದೆ.

#3

#3

ಗ್ಯಾಲಕ್ಸಿ ಟ್ಯಾಬ್ ಎಸ್‌ನ ವೈಶಿಷ್ಟ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಸ್ಯಾಮ್‌ಸಂಗ್ ಬ್ಲೂಟೂತ್ ಕೀಬೋರ್ಡ್ ಆಗಿದೆ. ಲ್ಯಾಪ್‌ಟಾಪ್ ಕೀಬೋರ್ಡ್‌ನಂತೆ ಇದು ಅದೇ ರೀತಿಯ ವಿನ್ಯಾಸವನ್ನು ನೀಡುತ್ತಿದ್ದು ಗ್ಯಾಲಕ್ಸಿ ಬಳಕೆದಾರರಿಗಾಗಿ ಇದನ್ನು ಇನ್ನಷ್ಟು ಮಜುಬೂತು ಮಾಡಲಾಗಿದೆ. ಸರಳ ಮತ್ತು ತ್ವರಿತ ಪ್ರವೇಶಕ್ಕಾಗಿ ನಿರ್ದಿಷ್ಟ ಹಾಟ್ ಕೀಗಳು ಕರ್ವ್ ಕೀಕ್ಯಾಪ್ಸ್ ನೊಂದಿಗೆ ಮ್ಯಾಪ್ ಮಾಡಲಾದ ಮಲ್ಟಿ ವಿಂಡೋ, ಎಸ್ ಫೈಂಡರ್ ಮತ್ತು ಸ್ಕ್ರೀನ್ ಕ್ಯಾಪ್ಚರ್ ವೈ‍ಶಿಷ್ಟ್ಯಗಳನ್ನು ಜೋಡಿಸಲಾಗಿದೆ.

#4

#4

ವಿಶುವಲ್ ಲೈಫ್‌ಗೆ ಜೀವಂತಿಕೆಯನ್ನು ತರುವುದು ಉತ್ತಮವಾದ ವೀಡಿಯೋವಾಗಿದೆ. ಹೆಚ್ಚಿನ ಶ್ರೇಣಿಯ ವೀಡಿಯೋ ಉತ್ಪನ್ನಗಳೊಂದಿಗೆ ಆಡಿಯೋ ಆಕ್ಸಸಿರೀಸ್ ಅನ್ನು ಕೂಡ ಸ್ಯಾಮ್‌ಸಂಗ್ ಹೊರತಂದಿದ್ದು ಎಸ್‌ ವಾಯ್ಸ್‌ನೊಂದಿಗೆ ಇದು ವಿಶಿಷ್ಟವಾಗಿದೆ. ನಿಮಗಿದರಲ್ಲಿ ಸ್ವಾಭಾವಿಕ ಸ್ಪಷ್ಟ ಧ್ವನಿಯನ್ನು ಆಲಿಸಬಹುದಾಗಿದ್ದು ಕಿವಿಗೆ ಯಾವುದೇ ರೀತಿಯ ಸಮಸ್ಯೆಯನ್ನು ಇದು ತಂದೊಡ್ಡುವುದಿಲ್ಲ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X