ಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆ

By Shwetha
|

ನಮ್ಮ ದೈನಂದಿನ ಜೀವನ ತಂತ್ರಜ್ಞಾನ ಉತ್ಪನ್ನಗಳಿಗೆ ಇಂದು ಎಷ್ಟು ಹೊಂದಿಕೊಂಡಿದೆ ಎಂದರೆ ಅವುಗಳನ್ನು ಬಿಟ್ಟು ನಾವು ಇರಲಾರೆವು ಎಂಬ ಮನೋಭಾವನೆ ಮನದಲ್ಲಿ ಬೇರೂರಿಬಿಟ್ಟಿದೆ. ದಿನನಿತ್ಯದ ಜೀವನದಲ್ಲಿ ನಾವು ಬಳಸುವ ಎಷ್ಟೇ ದುಬಾರಿ ಉತ್ಪನ್ನಗಳೇ ಆಗಿರಬಹುದು ಅವುಗಳಿಂದ ನಾವು ಪಡೆಯುವ ಲಾಭ ಬೆಟ್ಟದಷ್ಟಿರುತ್ತದೆ ಮತ್ತು ಅವುಗಳನ್ನು ಮರೆತು ನಾವು ಒಂದು ಹೆಜ್ಜೆಯನ್ನು ಮುಂದಿಡಲಾರೆವು.

ಓದಿರಿ: ಹೆಚ್ಚು ಮಾರಾಟವಾಗಿರುವ ಹೋನರ್ ಬೀಯಲ್ಲಿ ಮೆಚ್ಚುವ ಅಂಶವೇನು?

ಅದು ಫೋನ್ ಆಗಿರಬಹುದು, ಲ್ಯಾಪ್‌ಟಾಪ್ಸ್ ಇಲ್ಲವೇ ಕಂಪ್ಯೂಟರ್ ಕೂಡ ಆಗಿರಬಹುದು ಹೀಗೆ ಹೆಚ್ಚು ಹೆಚ್ಚು ಇಂತಹ ಉತ್ಪನ್ನಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ಈ ಉತ್ಪನ್ನಗಳು ಕೈಕೊಟ್ಟಾಗ ಮಾತ್ರ ನಮಗೆ ದಿಗಿಲು ಉಂಟಾಗುವುದು ಸಹಜವಾಗಿದೆ. ನಾವು ಒಂದು ಹೆಜ್ಜೆಯನ್ನು ಮುಂದಿಡಲಾರದಷ್ಟು ಅಸಹಾಯಕರಾಗಿ ಬಿಡುತ್ತೇವೆ. ಇಂತಹುದೇ ಅತಿ ವಿಶೇಷ ಲೇಖನದೊಂದಿಗೆ ನಾವು ನಿಮ್ಮ ಮುಂದೆ ಇದ್ದು ನೀವು ಇಂತಹುದೇ ಸಮಸ್ಯೆ ಎದುರಿಸುತ್ತಿದ್ದಲ್ಲಿ ಫಲಪ್ರದ ಎಂದೆನಿಸಲಿದೆ.

ಓದಿರಿ:ಸರಳ ಹಂತ ಅನುಸರಿಸಿ ಮೋಟೋ ಜಿ ವೇಗ ವರ್ಧಿಸಿ

ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? ಹಲವಾರು ವಿಧಾನಗಳನ್ನು ಅನುಸರಿಸಿದರೂ ನಿಮಗೆ ಇದರಿಂದ ಫಲಿತಾಂಶ ಸಿಕ್ಕಿಲ್ಲವೇ ಅದಕ್ಕೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ವಿಧಾನಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಿ.

ಬಳಕೆಯಲ್ಲಿಲ್ಲದ ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಬಳಕೆಯಲ್ಲಿಲ್ಲದ ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಪಿಸಿಗಳಲ್ಲಿ ಬಳಕೆಯಲ್ಲಿಲ್ಲದ ಪ್ರೊಗ್ರಾಮ್‌ಗಳು ಇರುವುದು ಸರ್ವೇ ಸಾಮಾನ್ಯವಾಗಿದೆ. ಅವುಗಳು ಇರುವುದೂ ಕೂಡ ನಿಮಗೆ ತಿಳಿದಿರುವುದಿಲ್ಲ. ನಿಮ್ಮ ಕಂಪ್ಯೂಟರ್ ಅನ್ನು ನೀವು ಲೋಡ್ ಮಾಡಿದಾಗ ಹಿನ್ನಲೆಯಲ್ಲಿ ಇವುಗಳು ಚಾಲನೆಯಾಗುತ್ತಿರುತ್ತದೆ. ಇದನ್ನು ನಿವಾರಿಸಲು ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಇದರಲ್ಲಿ ಪ್ರೊಗ್ರಾಮ್ ಮತ್ತು ಫೀಚರ್ಸ್ ಪುಟಕ್ಕೆ ಹೋಗಿ ಇದರಲ್ಲಿ ಇನ್‌ಸ್ಟಾಲ್ ಮಾಡಿರುವ ಪ್ರೊಗ್ರಾಮ್‌ಗಳ ಪಟ್ಟಿ ನಿಮಗೆ ದೊರೆಯುತ್ತದೆ.

ತಾತ್ಕಾಲಿಕ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಿ

ತಾತ್ಕಾಲಿಕ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಿ

ಮೈ ಕಂಪ್ಯೂಟರ್ ತೆರೆಯಿರಿ ಮತ್ತು ನಿಮ್ಮ ಸ್ಥಳೀಯ ಡ್ರೈವ್ ಆರಿಸಿ. ವಿಂಡೋಸ್ ಫೋಲ್ಡರ್ ಆಯ್ಕೆಮಾಡಿ ಮತ್ತು "ಟೆಂಪ್" ಹೆಸರಿನ ಫೋಲ್ಡರ್ ತೆರೆಯಿರಿ.

ಸೋಲಿಡ್ ಸ್ಟೇಟ್ ಡ್ರೈವ್ ಇನ್‌ಸ್ಟಾಲ್ ಮಾಡಿ

ಸೋಲಿಡ್ ಸ್ಟೇಟ್ ಡ್ರೈವ್ ಇನ್‌ಸ್ಟಾಲ್ ಮಾಡಿ

ಸೋಲಿಡ್ ಸ್ಟೇಟ್ ಡ್ರೈವ್ ಅನ್ನು ಪಿಸಿಯಲ್ಲಿ ಇನ್‌ಸ್ಟಾಲ್ ಮಾಡುವುದು ನಿಮ್ಮ ಕಂಪ್ಯೂಟರ್ ಕೆಲಸವನ್ನು ವೇಗಗೊಳಿಸುತ್ತದೆ.

ಹೆಚ್ಚು ಹಾರ್ಡ್ ಡ್ರೈವ್ ಸಂಗ್ರಹಣೆ

ಹೆಚ್ಚು ಹಾರ್ಡ್ ಡ್ರೈವ್ ಸಂಗ್ರಹಣೆ

ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದರಿಂದ ನಿಮ್ಮ ಹಾರ್ಡ್‌ ಡ್ರೈವ್ ಭರ್ತಿಯಾಗುತ್ತದೆ. ನಿಮ್ಮ ಕಂಪ್ಯೂಟರ್‌ನ ವೇಗಕ್ಕೆ ಮಾರಕವಾಗಬಹುದು.

ಅನಗತ್ಯ ಸ್ಟಾರ್ಟಪ್‌ಗಳನ್ನು ನಿರ್ಬಂಧಿಸಿ

ಅನಗತ್ಯ ಸ್ಟಾರ್ಟಪ್‌ಗಳನ್ನು ನಿರ್ಬಂಧಿಸಿ

ಸ್ಟಾರ್ಟ್ ಕ್ಲಿಕ್ ಮಾಡಿ. ನಂತರ "ರನ್‌" ಗೆ ಹೋಗಿ ಇಲ್ಲಿ ಎಂಟರ್ ಒತ್ತಿರಿ. ಇಲ್ಲಿ ನಿಮಗೆ ಸ್ಟಾರ್ಟಪ್ ಟ್ಯಾಬ್ ಕಂಡುಬರುತ್ತದೆ.

ಹೆಚ್ಚಿನ RAM

ಹೆಚ್ಚಿನ RAM

ಹೆಚ್ಚಿನ ಪ್ರೊಗ್ರಾಮ್‌ಗಳನ್ನು ನೀವು ಬಳಸಿದಂತೆಲ್ಲಾ, ಹೆಚ್ಚು RAM ಬಳಕೆಯನ್ನು ನೀವು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಕಂಪ್ಯೂಟರ್ ನಿಧಾನವಾಗುತ್ತದೆ.

ಡಿಸ್ಕ್ ಡಿಫ್ರಾಗ್‌ಮೆಂಟ್ ರನ್ ಮಾಡಿ

ಡಿಸ್ಕ್ ಡಿಫ್ರಾಗ್‌ಮೆಂಟ್ ರನ್ ಮಾಡಿ

ಮೈ ಕಂಪ್ಯೂಟರ್‌ಗೆ ಹೋಗಿ, ಹಾರ್ಡ್ ಡ್ರೈವ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "ಪ್ರಾಪರ್ಟೀಸ್" ಆಯ್ಕೆಮಾಡಿ. "ಪರಿಕರಗಳು" ಅಡಿಯಲ್ಲಿ ಡಿಫ್ರಾಗ್‌ಮೆಂಟ್ ನೌ ಆಯ್ಕೆಮಾಡಿ.

ಎಲ್ಲಾ ಪ್ರೊಗ್ರಾಮ್‌ಗಳು > ಆಕ್ಸೆಸರೀಸ್ > ಸಿಸ್ಟಮ್ ಟೂಲ್ಸ್ > ಡ..." data-gal-src="kannada.gizbot.com/img/600x100/img/2015/06/19-1434692599-8.jpg">
ಡಿಸ್ಕ್ ಕ್ಲೀನ್ ಅಪ್ ರನ್ ಮಾಡಿ

ಡಿಸ್ಕ್ ಕ್ಲೀನ್ ಅಪ್ ರನ್ ಮಾಡಿ

ವಿಂಡೋಸ್‌ಗಳಲ್ಲಿ ಡಿಸ್ಕ್ ಕ್ಲೀನ್ ಅಪ್ ಆಯ್ಕೆ ಇರುತ್ತದೆ. "ಸ್ಟಾರ್ಟ್ > ಎಲ್ಲಾ ಪ್ರೊಗ್ರಾಮ್‌ಗಳು > ಆಕ್ಸೆಸರೀಸ್ > ಸಿಸ್ಟಮ್ ಟೂಲ್ಸ್ > ಡಿಸ್ಕ್ ಕ್ಲೀನಪ್ ಈ ವಿಧಾನದಲ್ಲಿ ಡಿಸ್ಕ್ ಕ್ಲೀನಪ್ ತೆರೆಯಿರಿ.

ಕಂಪ್ಯೂಟರ್‌ಗೆ ಐಪಿ ನೀಡಿ

ಕಂಪ್ಯೂಟರ್‌ಗೆ ಐಪಿ ನೀಡಿ

ನಿಮ್ಮ ಕಂಪ್ಯೂಟರ್‌ಗೆ ನಿಖರವಾದ ಐಪಿ ವಿಳಾಸವನ್ನು ನೀಡುವುದು ನಿಮ್ಮ ಕಂಪ್ಯೂಟರ್ ವೇಗವನ್ನು ದುಪ್ಪಟ್ಟುಗೊಳಿಸುತ್ತದೆ.

ಧೂಳು ತೆಗೆಯುವುದು

ಧೂಳು ತೆಗೆಯುವುದು

ಧೂಳು ನಿಮ್ಮ ಕಂಪ್ಯೂಟರ್‌ನ ಅಪಾಯಕಾರಿ ಶತ್ರುವಾಗಿದೆ. ನೀವು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ಆದಷ್ಟು ಧೂಳನ್ನು ತೆಗೆಯಿರಿ. ಈ ಸಮಯದಲ್ಲಿ ಸಾಧ್ಯವಾದಷ್ಟು 30 ನಿಮಿಷಗಳ ಕಾಲ ಕಂಪ್ಯೂಟರ್ ಸ್ವಿಚ್ ಆಫ್ ಆಗಿರಲಿ

Best Mobiles in India

English summary
Rather than buying a new laptop or PC, here are 10 ways of avoiding a costly new purchase by making your existing computer run faster.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X