ಬರಲಿದೆ ಸೋನಿ ಕಂಪೆನಿಯ ಸ್ಮಾರ್ಟ್‌ಐಗ್ಲಾಸ್

By Shwetha
|

ಗೂಗಲ್ ಗ್ಲಾಸ್ ಟೆಕ್ ಕ್ಷೇತ್ರದಲ್ಲೇ ಹೆಚ್ಚಿನ ಮನ್ನಣೆಯನ್ನು ಪಡೆಯುತ್ತಿರುವ ಸಂದರ್ಭದಲ್ಲಿಯೇ, ಸೋನಿ ಕೂಡ ತನ್ನ ಪ್ರಥಮ ಐ ವೇರ್ ಅನ್ನು ಘೋಷಿಸಿದೆ. ಇದನ್ನು ಕಂಪೆನಿ ಸೋನಿ ಐಗ್ಲಾಸ್ ಎಂದು ಕರೆದಿದ್ದು, ಇದು ಕಂಪೆನಿಯ ಮೊದಲ ಸ್ಮಾರ್ಟ್‌ ಐ ವೇರ್ ಆಗಿದೆ ಮತ್ತು ಹೆಚ್ಚಿನ ಸುಂದರ ವಿನ್ಯಾಸ ಹಾಗೂ ಆಕರ್ಷಣೆಯಿಂದ ಮನಗೆಲ್ಲುವಂತಿದೆ. ನಿಜಕ್ಕೂ ಇದೊಂದು ಅದ್ಭುತ ಸ್ಮಾರ್ಟ್‌ ಗ್ಲಾಸ್ ಎಂಬುದನ್ನು ಸೋನಿಯು ತನ್ನ ಈ ಉತ್ಪನ್ನದ ಮೂಲಕ ಸಾಧಿಸಿದೆ.

ಇಂದು ಸೋನಿಯು ತನ್ನ ಸ್ಮಾರ್ಟ್‌ಐಗ್ಲಾಸ್‌ಗಾಗಿ SDK ಯನ್ನ ಬಿಡುಗಡೆ ಮಾಡಿದ್ದು ನೈಜ ಅಪ್ಲಿಕೇಶನ್‌ಗಳನ್ನು ಇದು ತನ್ನಲ್ಲಿ ಪಡೆದುಕೊಂಡಿದೆ. ಇದನ್ನು ಸಂಯೋಜಿಸಬಹುದಾದ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಸಂಪರ್ಕಪಡಿಸಬಹುದಾಗಿದ್ದು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮಾಹಿತಿ ಇದರಲ್ಲಿ ಚಾಲನೆಯಾಗುತ್ತದೆ, ಆದರೆ ಆಂಡ್ರಾಯ್ಡ್ ಇದರಲ್ಲಿ ಚಾಲನೆಯಾಗುತ್ತದೆ ಎಂಬುದು ಸಂದೇಹವಾಗಿದೆ.

ಆಕರ್ಷಕ ವಿಶೇಷತೆಯ ಸೋನಿ ಸ್ಮಾರ್ಟ್‌ಐಗ್ಲಾಸ್

ಇನ್ನೂ ಹೆಚ್ಚು ವಿಶದವಾಗಿ ಹೇಳಬೇಕೆಂದರೆ, ಸ್ಮಾರ್ಟ್‌ಐ ಗ್ಲಾಸ್ ಇದು ಸೆನ್ಸಿಂಗ್ ತಂತ್ರಜ್ಞಾನಗಳ ಡೈವರ್ಸ್ ಶ್ರೇಣಿಯನ್ನು ಪಡೆದುಕೊಂಡಿದ್ದು ಇದರಲ್ಲಿ CMOS ಇಮೇಜ್ ಸೆನ್ಸಾರ್, ಅಕ್ಲೆರೊಮೀಟರ್, ಗಿರೋಸ್ಕೋಪ್, ಇಲೆಕ್ಟ್ರಾನಿಕ್ ಕಂಪಾಸ್, ಬ್ರೈಟ್‌ನೆಸ್ ಸೆನ್ಸಾರ್ ಮತ್ತು ಮೈಕ್ರೋಫೋನ್ ಇದೆ.

ಸಂಪರ್ಕವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನಿಂದ GPS ಸ್ಥಾನ ಮಾಹಿತಿಯನ್ನು ಪಡೆದುಕೊಂಡು ಇದರ ಜೊತೆಗೆ ಈ ಎಲ್ಲಾ ವಿಶೇಷತೆಗಳನ್ನು ಅದು ಬಳಸುತ್ತದೆ. ಸೋನಿಯು ಅನನ್ಯ ಹೋಲೋಗ್ರಾಮ್ ಆಪ್ಟಿಕ್ಸ್ ತಂತ್ರಜ್ಞಾನವನ್ನು ಬಳಸಿ ತನ್ನ ಲೆನ್ಸ್ ಅನ್ನು ಅಭಿವೃದ್ಧಿಪಡಿಸಿದೆ. ಇದು 85% ದಷ್ಟು ಹೆಚ್ಚಿನ ಪಾರದರ್ಶಕತೆಯನ್ನು ಸಾಧಿಸಿದ್ದು ಕನ್ನಡಿಯನ್ನು ಬಳಸದೇ ಬಳಕೆದಾರರ ದೃಷ್ಟಿಯನ್ನು ಹಿಡಿದಿಡುತ್ತದೆ.

ಇನ್ನೂ ಹೆಚ್ಚಾಗಿ, ಬಣ್ಣದ ಡಿಸ್‌ಪ್ಲೇಗಿಂತ ಶಕ್ತಿಯ ಬಳಕೆ ಇದರಲ್ಲಿ ಕಡಿಮೆ ಎಂಬುದನ್ನು ಮೋನೋಕ್ರೋಮ್ ಡಿಸ್‌ಪ್ಲೇಯು ಖಾತ್ರಿಪಡಿಸುತ್ತದೆ ಇದರಿಂದ ಬಳಕೆದಾರರು ಪಠ್ಯವನ್ನು ಸುಲಭವಾಗಿ ಓದಬಹುದಾಗಿದ್ದು ನಿಜಕ್ಕೂ ಖರೀದಿದಾರರ ಮನದ ಬಯಕೆಯನ್ನು ಈಡೇರಿಸುವಂತಿದೆ. ಈ ಸ್ಮಾರ್ಟ್‌ಐ ಗ್ಲಾಸ್ ಅನ್ನು ಮಾರ್ಚ್ 2015 ರ ಕೊನೆಗೆ ಮಾರುಕಟ್ಟೆಗೆ ಮಾರಾಟಕ್ಕೆ ಬಿಡುವ ಯೋಜನೆ ಇದೆ. ಬೆಲೆ ಇನ್ನೂ ತಿಳಿದುಬಂದಿಲ್ಲ.

Best Mobiles in India

English summary
This article tells about Sony SmartEyeglass To Go On Sale Next Year Around March.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X