ಉತ್ತಮ ತಾಂತ್ರಿಕ ವಿನ್ಯಾಸದ ಲ್ಯಾಪ್‌ಟಾಪ್‌ಗಳು ನಿಮ್ಮ ಕೈಗೆಟಕುವ ಬೆಲೆಯಲ್ಲಿ

By Shwetha
|

ಲ್ಯಾಪ್‌ಟಾಪ್‌ ಖರೀದಿ ಕೂಡ ಈಗ ಸವಾಲಿನ ಕೆಲಸವಾಗಿ ಪರಿಣಮಿಸುತ್ತಿದೆ. ಮಾರುಕಟ್ಟೆಯಲ್ಲಿ ಫೋನ್ ವೈಶಿಷ್ಟ್ಯಗಳು ಹೇಗೆ ನಮ್ಮ ಕಣ್ಮನಸೆಳೆಯುತ್ತವೆಯೋ ಹಾಗೆಯೇ ಲ್ಯಾಪ್‌ಟಾಪ್‌ಗಳು ಕೂಡ ವಿವಿಧ ರೀತಿಯ ವೈಶಿಷ್ಟ್ಯಗಳಿಂದ ಖರೀದಿಯ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ಲ್ಯಾಪ್‌ಟಾಪ್‌ಗಳೂ ಕೂಡ ಒಂದಿಲ್ಲೊಂದು ವಿಶೇಷತೆಯಿಂದ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸಿದೆ.

ನೀವು ಗೇಮ್ಸ್, ಹಾಡು ಹೀಗೆ ಹಲವಾರು ಚಟುವಟಿಕೆಗಳನ್ನು ಲ್ಯಾಪ್‌ಟಾಪ್ ಬಳಸಿ ಆನಂದಿಸುತ್ತೀರಿ. ಆದರೆ ಮಾರುಕಟ್ಟೆಯಲ್ಲಿರುವ ಲ್ಯಾಪ್‌ಟಾಪ್‌ಗಳು ಈ ಎಲ್ಲಾ ವಿಶಿಷ್ಟತೆಗಳೊಂದಿಗೆ ನವನವೀನ ತಂತ್ರಜ್ಞಾನಗಳೊಂದಿಗೆ ನಿಮ್ಮ ಗಮನವನ್ನು ಸೆಳೆಯಲು ಆಗಮಿಸುತ್ತಿದೆ. ಇಲ್ಲಿ ಅನೇಕ ಆಯ್ಕೆಗಳಿದ್ದು ಗುಣಮಟ್ಟ, ತಂತ್ರಜ್ಞಾನಕ್ಕೆ ಅನುಗುಣವಾಗಿ ನೀವು ಇವುಗಳನ್ನು ಖರೀದಿಸಬೇಕಾಗುತ್ತದೆ.

ಹಾಗಿದ್ದರೆ ಕೈಗೆಟಕುವ ಬೆಲೆಯಲ್ಲಿ ಖರೀದಿಬಹುದಾದ ಲ್ಯಾಪ್‌ಟಾಪ್‌ಗಳು ಯಾವುವು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ನಾವಿಲ್ಲಿ ನೀಡುತ್ತಿರುವ ಉತ್ತರವಾಗಿದೆ ಈ ಲ್ಯಾಪ್‌ಟಾಪ್‌ಗಳ ಪಟ್ಟಿ.

#1

#1

ಹೈಬ್ರೀಡ್ ಲ್ಯಾಪ್‌ಟಾಪ್ ಶ್ರೇಣಿಗೆ ಬರುತ್ತಿರುವ ಈ ಡೆಲ್ XPS 12 ಮಾರ್ಕೆಟ್‌ನಲ್ಲಿ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ ಎಂದೂ ಹೇಳಬಹುದಾಗಿದೆ. ಇದು 12 ಇಂಚಿನ ವಿಂಡೋಸ್ ಟ್ಯಾಬ್ಲೆಟ್‌ಗೂ ಇದನ್ನು ಮಾರ್ಪಡಿಸಬಹುದಾಗಿದೆ. ಕೀಬೊರ್ಡ್, ೯ ಗಂಟೆಗಳ ಸುದೀರ್ಘ ಬ್ಯಾಟರಿ ಬಾಳಿಕೆ ಹೀಗೆ ಇದರ ವಿಶೇಷತೆಗಳು ಮನಮುಟ್ಟುವಂತಿವೆ. ಇದರ ಬೆಲೆ ರೂ. 48,451 ಆಗಿದೆ.

#2

#2

ನಿಮ್ಮ ಮನಸ್ಸಿಗೆ ಮುದ ನೀಡುವಂತೆ ಈ ಲ್ಯಾಪ್‌ಟಾಪ್‌ಗಳು ನಿಮ್ಮ ಗಮನಸೆಳೆಯುತ್ತವೆ. ಸ್ನಾಪಿ ಕೀಬೋರ್ಡ್, ನಿರಂತರ ಕಾರ್ಯವೈಖರಿ ಹೀಗೆ ಇದರ ಗುಣಗಾನ ಮುಂದುವರಿಯುತ್ತಾ ಹೋಗುತ್ತದೆ. ಇದೊಂದು ವಿಶೇಷವಾಗಿರುವ ಲ್ಯಾಪ್‌ಟಾಪ್ ಆಗಿದೆ ಎಂದೇ ಹೇಳಬಹುದು. ಬೆಲೆ ರೂ. 29,046 ಆಗಿದೆ.

#3

#3

ತೋಶಿಬಾ ಲ್ಯಾಪ್‌ಟಾಪ್‌ನ ಏಸರ್‌ನ E1-572-6870 ಗೆ ಸಮಾನವಾಗಿದೆ. ಇದು ಅತಿ ವಿಶಿಷ್ಟ ಮಹತ್ವವನ್ನು ತನ್ನಲ್ಲಿ ಅಭಿವೃದ್ಧಿಪಡಿಸಿಕೊಂಡಿದೆ ಎಂದೂ ಹೇಳಬಹುದು. ಆಕರ್ಷಕ ಆಡಿಯೋ ಗುಣಮಟ್ಟ, ಶಕ್ತಿಯುತ ಸೆಲೆರಾನ್ ಪ್ರೊಸೆಸರ್, ಸುಂದರ ಡಿಸ್‌ಪ್ಲೇ ಹೀಗೆ ಇದರ ಹಿರಿಮೆಯನ್ನು ಕೊಂಡಾಡಬಹುದು. ಇದರ ಬೆಲೆ ರೂ. 16,918 ಆಗಿದೆ.

#4

#4

ಇದೊಂದು ಹಗುರವಾಗಿರುವ ಲ್ಯಾಪ್‌ಟಾಪ್ ಆಗಿದ್ದು ನಿಮ್ಮ ಪಾಕೆಟ್‌ಗೆ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಆಕರ್ಷಕ ಅಂಶಗಳು ಇದರಲ್ಲಿದ್ದು ನಿಜಕ್ಕೂ ಕಣ್ಮನ ಸೆಳೆಯುವಂತೆ ಇದು ಕಂಡುಬಂದಿದೆ. ಇದರ ಬ್ಯಾಟರಿ ದೀರ್ಘತೆ ೮ ಗಂಟೆಗಳಾಗಿದೆ. ಬೆಲೆ ರೂ. 38,081 ಆಗಿದೆ.

#5

#5

ಅಲೀನ್ ವೇರ್ 17 ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಲ್ಯಾಪ್‌ಟಾಪ್ ಆಗಿದ್ದು ವಿಶೇಷ ಗುಣಮಟ್ಟಗಳಿಂದ ಕಣ್ಮನಸೆಳೆಯುವಂತಿದೆ. GTX 780M ಗ್ರಾಫಿಕ್‌ಗಳು, 2.7-GHz ಇಂಟೆಲ್ ಕೋರ್, i7 ಸಿಪಿಯು ಇದರಲ್ಲಿದೆ ಇದರ ಬೆಲೆ (ರೂ. 90,899) ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X