ಉಚಿತ ವೈಫೈ ಬಳಸುತ್ತಿದ್ದೀರಾ ಎಚ್ಚರವಾಗಿರಿ!!!

By Shwetha
|

ಉಚಿತವಾಗಿ ವೈಫೈ ಲಭ್ಯವಾಗುತ್ತಿರುವಾಗ ಅದರ ಬಳಕೆಯನ್ನು ನಾವು ಮಾಡುವುದು ಸಹಜವೇ. ಆದರೆ ಇದು ಎಷ್ಟು ಭದ್ರವಾಗಿದೆ ಎಂಬುದನ್ನು ನೀವು ಪರಿಶೀಲಿಸಿದ್ದೀರಾ? ಸಾರ್ವಜನಿಕ ಸ್ಥಳದಲ್ಲಿ ನೀವು ಉಚಿತ ಅಂರ್ಜಾಲ ವ್ಯವಸ್ಥೆಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅತೀ ಅಗತ್ಯವಾಗಿದೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಸ್ನೇಹ ಸೇತುವೆ ಗಟ್ಟಿಯಾಗಬೇಕೇ? ಹಾಗಿದ್ದರೆ ಇಲ್ಲಿದೆ ಸಲಹೆ

ಇಂದಿನ ಲೇಖನದಲ್ಲಿ ಆ ಮುಂಜಾಗ್ರತಾ ಕ್ರಮಗಳು ಯಾವುವು ಎಂಬುದನ್ನು ನೋಡೋಣ. ಈ ಮುನ್ಸೂಚನೆಗಳನ್ನು ಪಾಲಿಸಿ ನೀವು ಉಚಿತ ಅಂರ್ಜಾಲ ವ್ಯವಸ್ಥೆಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಅದು ನಿಮಗೆ ಸುರಕ್ಷಿತವಾಗಿರುತ್ತದೆ. ಮತ್ತು ಇಂತಹ ಸೇವೆಗಳನ್ನು ನೀವು ಬಳಸುತ್ತಿರುವಾಗ ನಿಮ್ಮ ಯಾವೆಲ್ಲಾ ಕೆಲಸಗಳನ್ನು ನಿರ್ವಹಿಸಬಾರದು ಎಂಬುದನ್ನು ಕೂಡ ನೋಡಿ.

#1

#1

ಆನ್‌ಲೈನ್ ಬ್ಯಾಂಕಿಂಗ್, ಶಾಪಿಂಗ್, ಮುಂತಾದ ಕೆಲಸಗಳನ್ನು ಈ ಉಚಿತ ಅಂತರ್ಜಾಲ ವ್ಯವಸ್ಥೆಯನ್ನು ಬಳಸಿಕೊಂಡು ಮಾಡದಿರಿ.

#2

#2

ಆಂಟಿವೈರಸ್ ಸಾಫ್ಟ್‌ವೇರ್ ಮತ್ತು ಫೈರ್‌ವಾಲ್ ಅನ್ನು ನೀವು ಆನ್ ಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

#3

#3

ನೀವು ಹೋಟೆಲ್‌ಗಳಲ್ಲಿ ಇಂತಹ ಅಂತರ್ಜಾಲ ವ್ಯವಸ್ಥೆಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ವೈಫೈ ನೆಟ್‌ವರ್ಕ್ ಹೆಸರನ್ನು ಪರಿಶೋಧಿಸಿಕೊಳ್ಳಿ.

#4

#4

ನೀವು ವೆಬ್‌ಸೈಟ್‌ಗಳಿಂದ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೀರಿ ಎಂದಾದಲ್ಲಿ "Https" ನಿಂದ ಇದು ಪ್ರಾರಂಭವಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

#5

#5

ಯಾವುದೇ ಗೌಪ್ಯ ಫೈಲ್‌ಗಳನ್ನು ಹಂಚಿಕೊಳ್ಳದಿರಿ.

#6

#6

ವಿಪಿಎನ್ (virtual private network) ಅನ್ನು ಸಾಧ್ಯವಾದಲ್ಲಿ ಬಳಸಿ.

#7

#7

ಎರಡು ರೀತಿಯ ದೃಢೀಕರಣ ಕೋಡ್‌ಗಳನ್ನು ನಿಮ್ಮ ಖಾತೆಯಲ್ಲಿ ಬಳಸಿ ನೀವು ಅನಧಿಕೃತ ಐಪಿ ವಿಳಾಸವನ್ನು ಬಳಸಿ ಲಾಗಿನ್ ಆಗುತ್ತಿದ್ದೀರಿ ಎಂದಾದಲ್ಲಿ ನಿಮಗೆ ಮೇಲ್ ಅಥವಾ ಪಠ್ಯದ ಮೂಲಕ ಕಳುಹಿಸಬಹುದಾದ ಕೋಡ್ ಅನ್ನು ನೀವು ಬಳಸಬೇಕು.

Best Mobiles in India

English summary
This article tells about Using Public Wi-Fi? Be Careful: 7 Tips & Tricks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X