ಟಿವಿಯ ಬಗ್ಗೆ ನಿಮಗೆ ಗೊತ್ತಿರದ ಹತ್ತು ಆಸಕ್ತಿಕರ ಸಂಗತಿಗಳು.

|

'ಮೂರ್ಖರ ಪೆಟ್ಟಿಗೆ' ಅಥವಾ ಟೆಲಿವಿಷನ್ ಅಥವಾ ಟಿವಿ ಎಂದು ಏನನ್ನು ಕರೆಯುತ್ತೇವೆಯೋ ಅದು ಮನುಷ್ಯನಾಗಿದ್ದಿದ್ದರೆ ಬರುವ ಅಕ್ಟೋಬರ್ 30ಕ್ಕೆ ಅದಕ್ಕೆ 91 ವರುಷಗಳಾಗುತ್ತಿತ್ತು.

ಟಿವಿಯ ಬಗ್ಗೆ ನಿಮಗೆ ಗೊತ್ತಿರದ ಹತ್ತು ಆಸಕ್ತಿಕರ ಸಂಗತಿಗಳು.

ಓದಿರಿ: ಜಿಯೋದ 7 ಟ್ಯಾರಿಪ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕರೆ ಮತ್ತು ರೋಮಿಂಗ್ ಆಫರ್!

ಈ ಸಂದರ್ಭದಲ್ಲಿ, ಈ ಅತ್ಯದ್ಭುತ ಅನ್ವೇಷಣೆಯ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದೇವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಗತಿ 1: ಟಿವಿಯಲ್ಲಿ ಮೊದಲು ಕಾಣಿಸಿಕೊಂಡ ಮುಖ ಯಾರದೆಂದು ಗೊತ್ತಿದೆಯಾ?

ಸಂಗತಿ 1: ಟಿವಿಯಲ್ಲಿ ಮೊದಲು ಕಾಣಿಸಿಕೊಂಡ ಮುಖ ಯಾರದೆಂದು ಗೊತ್ತಿದೆಯಾ?

ಅನ್ವೇಷಕ ಜಾನ್ ಲೊಗಿ ಬೇರ್ಡ್ ನ ಸಹಾಯಕ ವಿಲಿಯಂತ ಟೇಯ್ನ್ಟನ್ ನ ಮುಖ ಟಿವಿಯಲ್ಲಿ ಮೊದಲು ಪ್ರಸಾರವಾಯಿತು. ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಬಿಸಿಯಾಗಿದ್ದ ಟಿವಿ ಟ್ರಾನ್ಸ್ ಮಿಟರ್ ನ ಮುಂದೆ ಸುಮ್ಮನೆ ಕೂರಲು ಆತನಿಗೆ ಎರಡು ಶಿಲ್ಲಿಂಗ್ ಮತ್ತು ಆರು ಪೆನ್ಸ್ ನೀಡಲಾಗುತ್ತಿತ್ತು.

ಸಂಗತಿ 2: ಟಿವಿಯ ಮುಂದೆ ಇದ್ದ ವ್ಯಕ್ತಿ ನಿಜವಾದವನಲ್ಲ!

ಸಂಗತಿ 2: ಟಿವಿಯ ಮುಂದೆ ಇದ್ದ ವ್ಯಕ್ತಿ ನಿಜವಾದವನಲ್ಲ!

ಟಿವಿಯನ್ನು ಅನ್ವೇಷಿಸಿದ ಬೇರ್ಡ್ ಟಿವಿ ಟ್ರಾನ್ಸ್ ಮಿಟರ್ ನ ಮುಂದೆ ಕೂರಿಸಿದ್ದ ಡಮ್ಮಿಯ ಹೆಸರು ಸ್ಟೂಕಿ ಬಿಲ್.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಗತಿ 3: ಬ್ರಿಟೀಷರಿಗೆ ಟಿವಿ ನೋಡುವ ಹುಚ್ಚಿಲ್ಲ.

ಸಂಗತಿ 3: ಬ್ರಿಟೀಷರಿಗೆ ಟಿವಿ ನೋಡುವ ಹುಚ್ಚಿಲ್ಲ.

ಟೆಲಿವಿಷನ್ ಕಂಡುಹಿಡಿದವನು ಬ್ರಿಟೀಷನೇ ಆದರೂ, ಯುಕೆಯ ಜನರು ಅಂದಾಜು ದಿನಕ್ಕೆ ನಾಲ್ಕು ಘಂಟೆಗಳಷ್ಟು ಕಾಲ ಮಾತ್ರ ಟಿವಿ ನೋಡುತ್ತಾರೆ.

ಸಂಗತಿ 4: ಅಮೆರಿಕಾದ ಮಕ್ಕಳು ಹೆಚ್ಚು ಸಾವನ್ನು ನೋಡುತ್ತಾರೆ.

ಸಂಗತಿ 4: ಅಮೆರಿಕಾದ ಮಕ್ಕಳು ಹೆಚ್ಚು ಸಾವನ್ನು ನೋಡುತ್ತಾರೆ.

ಆಘಾತದ ಸಂಗತಿಯೆಂದರೆ 5-14ವರ್ಷದ ಅಮೆರಿಕಾದ ಮಕ್ಕಳು ಟಿವಿಯಲ್ಲಿ 13,000 ಕೊಲೆ ಮತ್ತು ಸಾವುಗಳನ್ನು ನೋಡುತ್ತಾರೆಂದು ಲೆಕ್ಕ ಹಾಕಲಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಗತಿ 5: ಆ ಕೋತಿಯನ್ನು ಬಂಧಿಸಿ!

ಸಂಗತಿ 5: ಆ ಕೋತಿಯನ್ನು ಬಂಧಿಸಿ!

1997ರಲ್ಲಿ, ಆಫ್ರಿಕಾದ ಬೆನಿನ್ ರಾಜ್ಯದಲ್ಲಿ ಟೆಲಿವಿಷನ್ ಏರಿಯಲ್ ಅನ್ನು ಕದ್ದ ಆರೋಪದ ಮೇಲೆ ಕೋತಿಯನ್ನು ಬಂಧಿಸಲಾಗಿತ್ತು!

ಸಂಗತಿ 6: ಟಿವಿ ಸಾಂದ್ರತೆ.

ಸಂಗತಿ 6: ಟಿವಿ ಸಾಂದ್ರತೆ.

ಬ್ರಿಟೀಷರು ದಿನಕ್ಕೆ ಕೇವಲ ನಾಲ್ಕು ಘಂಟೆಗಳಷ್ಟು ಮಾತ್ರ ಟಿವಿ ನೋಡಿದರೂ, 2004ರಲ್ಲಿ ಯುಕೆಯಲ್ಲಿನ ಟಿವಿಗಳ ಸಂಖೈ ಅಲ್ಲಿನ ಜನಸಂಖೈಯನ್ನು ಮೀರಿಸಿತ್ತು!.

ಸಂಗತಿ 7: ಟಿವಿಯಲ್ಲಿ ತೋರಿಸಿದ ಹಾಸಿಗೆಯ ಮೇಲಿದ್ದ ಮೊದಲ ಜೋಡಿಗಳ್ಯಾವುದು ಗೊತ್ತೆ?!

ಸಂಗತಿ 7: ಟಿವಿಯಲ್ಲಿ ತೋರಿಸಿದ ಹಾಸಿಗೆಯ ಮೇಲಿದ್ದ ಮೊದಲ ಜೋಡಿಗಳ್ಯಾವುದು ಗೊತ್ತೆ?!

ಫ್ರೆಡ್ ಮತ್ತು ವಿಲ್ಮಾ ಫ್ಲಿನ್ ಸ್ಟೋನ್ಸ್! ಹೌದು, ದಿ ಫ್ಲಿನ್ ಸ್ಟೋನ್ಸ್ ಕಾರ್ಟೂನಿನ ಫ್ರೆಡ್ ಮತ್ತು ವಿಲ್ಮಾ ಜೋಡಿಯು ಹಾಸಿಗೆಯಲ್ಲಿದ್ದಿದ್ದನ್ನು ಮೊದಲ ಬಾರಿಗೆ ಯು.ಎಸ್ ವಾಹಿನಿಯಲ್ಲಿ ತೋರಿಸಲಾಗಿತ್ತು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಗತಿ 8: ಐಸ್ ಲ್ಯಾಂಡಿನಲ್ಲಿ ಟಿವಿ ಇಲ್ಲ!

ಸಂಗತಿ 8: ಐಸ್ ಲ್ಯಾಂಡಿನಲ್ಲಿ ಟಿವಿ ಇಲ್ಲ!

ಹೌದು, 1987ರವರೆಗೆ ಐಸ್ ಲ್ಯಾಂಡಿನಲ್ಲಿ ಟಿವಿ ಬ್ರಾಡ್ ಕ್ಯಾಸ್ಟರ್ ಇರಲಿಲ್ಲ.

ಸಂಗತಿ 9: ಟೆಲಿವಿಷನ್ ಎಂಬ ಪದವೇ ಇರಲಿಲ್ಲ!

ಸಂಗತಿ 9: ಟೆಲಿವಿಷನ್ ಎಂಬ ಪದವೇ ಇರಲಿಲ್ಲ!

ಟೆಲಿವಿಷನ್ ಎಂಬ ಪದವನ್ನು ಗುರುತಿಸಿ ಒಪ್ಪಿಕೊಂಡಿದ್ದು 1907ರಲ್ಲಿ. ಅದರ ಸಂಕ್ಷಿಪ್ತ ರೂಪ ಟಿವಿಯನ್ನು ಉಪಯೋಗಿಸಲಾರಂಭಿಸಿದ್ದು 1948ರಲ್ಲಿ.

ಸಂಗತಿ 10: ಟಿವಿಯ ಬಗ್ಗೆ ಅತ್ಯುತ್ತಮ ಸಂಗತಿಯನ್ನು ತಿಳಿಸಿದ್ದು ಕ್ರಿಸ್ಟೋಫರ್ ಲಾಯ್ಡ್.

ಸಂಗತಿ 10: ಟಿವಿಯ ಬಗ್ಗೆ ಅತ್ಯುತ್ತಮ ಸಂಗತಿಯನ್ನು ತಿಳಿಸಿದ್ದು ಕ್ರಿಸ್ಟೋಫರ್ ಲಾಯ್ಡ್.

ತನ್ನ ಖ್ಯಾತ ಸಿನಿಮಾ ಟ್ಯಾಕ್ಸಿಯಲ್ಲಿ, ಕ್ರಿಸ್ಟೋಫರ್ ಲಾಯ್ಡ್ ಟಿವಿಯ ಬಗೆಗಿನ ಕಹಿ ಸತ್ಯವನ್ನು ತಿಳಿಸಿದರು - "ಟೆಲಿವಿಷನ್ ಬಗೆಗಿನ ದೊಡ್ಡ ಸತ್ಯ ಸಂಗತಿ ನಿಮಗೆ ಗೊತ್ತಿದೆಯೇ? ಪ್ರಪಂಚದ ಯಾವುದೇ ಮೂಲೆಯಲ್ಲಿ, ಏನಾದರೂ ಪ್ರಮುಖವಾದದ್ದು ರಾತ್ರಿ ಅಥವಾ ಬೆಳಿಗ್ಗೆ ಸಂಭವಿಸಿದರೆ, ನೀವು ಚಾನೆಲ್ ಬದಲಿಸಿಕೊಳ್ಳಬಹುದು"

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
TV is not always an idiot box. It has a long background with interesting facts. Find them here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X