ನಿಂಟೆಂಡೋ ಸ್ವಿಚ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

|

ಆಟಗಳ ದೈತ್ಯ ನಿಂಟೆಂಡೊ ಕೊನೆಗೂ ತನ್ನ ಹೊಸ ಗೇಮಿಂಗ್ ಸಾಧನ ನಿಂಟೆಂಡೋ ಸ್ವಿಚ್ ಅನ್ನು ಬಿಡುಗಡೆಗೊಳಿಸಿದೆ.

ನಿಂಟೆಂಡೋ ಸ್ವಿಚ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಓದಿರಿ: ದೀಪಾವಳಿ ಆಫರ್: ಏರ್‌ಟೆಲ್‌ನಿಂದ ಉಚಿತ 2ಜಿಬಿ 4ಜಿ ಡೇಟಾ

ಹೈಬ್ರಿಡ್ ಗೇಮಿಂಗ್ ಸಾಧನ.

ಹೈಬ್ರಿಡ್ ಗೇಮಿಂಗ್ ಸಾಧನ.

ಕಂಪನಿಯ ಈ ಮುಂಚಿನ ಗೇಮಿಂಗ್ ಸಾಧನಗಳಿಗೆ ಹೋಲಿಸಿದರೆ ನಿಂಟೆಂಡೋ ಸ್ವಿಚ್ ಹೈಬ್ರಿಡ್ ಸಾಧನ, ಮನೆಯಲ್ಲಿ ಕನ್ಸೋಲ್ ಆಗಿ ಉಪಯೋಗಿಸಲು ಮತ್ತು ಕೈಲಿಡಿದು ಆಡಲು ಇದು ಉಪಯುಕ್ತ.

ಹೋಮ್ ಕನ್ಸೋಲ್ ಆಗಿ ಉಪಯೋಗಿಸಬೇಕೆಂದರೆ ಡಾಕ್ ಗೆ ಸಂಪರ್ಕ ಕಲ್ಪಿಸಿ ಟಿವಿಯಲ್ಲಿ ನಿಸ್ತಂತುವಾಗಿ ಆಟಗಳನ್ನು ಆಡಿ. ಮತ್ತೆ ಹೊರ ಹೋಗುವಾಗ ಕೈಲಿಡಿದು ಆಟವಾಡಿಕೊಳ್ಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೈಡೆಫಿನಿಷನ್ ಪರದೆ ಮತ್ತು ತೆಗೆಯಬಹುದಾದ ಜಾಯ್ - ಕಾನ್ ನಿಯಂತ್ರಕಗಳು.

ಹೈಡೆಫಿನಿಷನ್ ಪರದೆ ಮತ್ತು ತೆಗೆಯಬಹುದಾದ ಜಾಯ್ - ಕಾನ್ ನಿಯಂತ್ರಕಗಳು.

ನಿಂಟೆಂಡೋ ಸ್ವಿಚ್ ನಲ್ಲಿ ಪ್ರಖರ ಹೈಡೆಫಿನಿಷನ್ ಪರದೆಯಿದೆ. ಈ ಕನ್ಸೋಲ್ ನಲ್ಲಿ ತೆಗೆಯಬಹುದಾದ ಜಾಯ್ - ಕಾನ್ ನಿಯಂತ್ರಕಗಳು ಇವೆ. ಇದರ ಅನುಕೂಲತೆಯೆಂದರೆ ಆಟಗಾರ ಎರಡೂ ಕೈಗಳಲ್ಲಿ ಜಾಯ್ ಕಾನ್ ನಿಯಂತ್ರಕಗಳನ್ನು ಇಟ್ಟುಕೊಳ್ಳಬಹುದು; ಇಬ್ಬರು ಆಟಗಾರರು ಒಂದೊಂದನ್ನು ಇಟ್ಟುಕೊಳ್ಳಬಹುದು.

ಓದಿರಿ:ಹೈಕ್ ಸ್ಟಿಕ್ಕರ್‌ಗಳನ್ನು ವಾಟ್ಸಾಪ್‌ನಲ್ಲಿ ಸೆಂಡ್ ಮಾಡುವುದು ಹೇಗೆ?

ಜೊತೆಗೆ ಆಟಗಾರ, ನಿಂಟೆಂಡೋ ಸ್ವಿಚ್ ಪ್ರೊ ಕಂಟ್ರೋಲರ್ ಅನ್ನು ಉಪಯೋಗಿಸಿಕೊಳ್ಳಬಹುದು ಜಾಯ್ ಕಾನ್ ಬದಲಿಗೆ.

ಫ್ಲೆಕ್ಸಿಬಲ್ ಆಟದ ರೀತಿ.

ಫ್ಲೆಕ್ಸಿಬಲ್ ಆಟದ ರೀತಿ.

ಮನೆಯಲ್ಲಿ ಒಬ್ಬಂಟಿಯಾಗಿ ಅಥವಾ ಮಲ್ಟಿ ಪ್ಲೇಯರ್ ಆಟಗಳ ಸುಖವನ್ನು ಅನುಭವಿಸುವುದರ ಜೊತೆಗೆ, ನಿಂಟಿಂಡೋ ಸ್ವಿಚ್ ವ್ಯವಸ್ಥೆಯು ತಮ್ಮಿಚ್ಛೆಯ ಆಟವನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಯಾರೊಡನೆ ಬೇಕಾದರೂ ಆಡುವ ಸೌಲಭ್ಯ ಕಲ್ಪಿಸಿದೆ. ಇದು ಪೋರ್ಟಬಲ್ ಗೇಮಿಂಗ್ ಕನ್ಸೋಲ್ ಗೆ ಸೇರಿಸಲಾಗಿರುವ ಹೊಸ ವಿಶೇಷತೆ.

ಟಿವಿಗೆ ಸಂಪರ್ಕಿಸಿ ಮತ್ತು ತೆಗೆಯಿರಿ.

ಟಿವಿಗೆ ಸಂಪರ್ಕಿಸಿ ಮತ್ತು ತೆಗೆಯಿರಿ.

ನಿಂಟೆಂಡೋ ಸ್ವಿಚ್ ನಲ್ಲಿ ನಿಂಟೆಂಡೋ ಸ್ವಿಚ್ ಡಾಕ್ ಇದೆ. ಇದರಿಂದಾಗಿ ನೀವು ನಿಮ್ಮ ಟಿವಿಗೆ ಸುಲಭವಾಗಿ ಸಂಪರ್ಕವೇರ್ಪಡಿಸಬಹುದು ಮತ್ತು ನಿಮ್ಮ ಕೋಣೆಯಲ್ಲಿನ ದೊಡ್ಡ ಪರದೆಯಲ್ಲಿ ಆಟಗಳನ್ನಾಡಬಹುದು. ಕೈಲಿಡಿದು ಆಡಲು ಅತಿ ಶೀಘ್ರವಾಗಿ ಮತ್ತೆ ಸಂಪರ್ಕ ತೆಗೆದುಬಿಡಬಹುದು.

ಸಂಪರ್ಕ ತೆಗೆಯಲು ನಿಂಟೆಂಡೋ ಸ್ವಿಚ್ ಅನ್ನು ಡಾಕ್ ನಿಂದ ತೆಗೆದುಬಿಟ್ಟರೆ ಆಯಿತು. ಮತ್ತೆ ಪೋರ್ಟಬಲ್ ಮೋಡ್ ಆಯ್ಕೆಯಾಗಿಬಿಡುತ್ತದೆ.

ಡೆವಲಪರ್ಸ್ ತಮ್ಮದೇ ಆಟಗಳನ್ನು ವಿನ್ಯಾಸಗೊಳಿಸಿಕೊಳ್ಳಬಹುದು.

ಡೆವಲಪರ್ಸ್ ತಮ್ಮದೇ ಆಟಗಳನ್ನು ವಿನ್ಯಾಸಗೊಳಿಸಿಕೊಳ್ಳಬಹುದು.

ನಿಂಟೆಂಡೋ ಆಟಗಳ ಜೊತೆಗೆ ಈ ನಿಂಟೆಂಡೋ ಸ್ವಿಚ್ ಕನ್ಸೋಲ್ ಡೆವಲಪರ್ ಗಳು ತಮ್ಮದೇ ವಿನ್ಯಾಸದ ಆಟಗಳನ್ನು ರೂಪಿಸಿಕೊಂಡು ಆಡುವ ಸೌಲಭ್ಯವನ್ನೂ ಕೊಟ್ಟಿದೆ.

ನಿಂಟೆಂಡೋ ಪ್ರಕಾರ, ವಿವಿಧ ರೀತಿಯ ಆಟಗಳನ್ನು ಡೆವಲಪರ್ ಗಳು ವಿನ್ಯಾಸಗೊಳಿಸಿಕೊಳ್ಳಬಹುದು, ಆಟಗಾರರಿಗೆ ತಮಗಿಷ್ಟದ ಆಟವನ್ನು ಆಯ್ದುಕೊಳ್ಳುವ ಸೌಲಭ್ಯ ಇದರಿಂದ ಸಿಗುತ್ತದೆ.

ನಿಂಟೆಂಡೋ ಸ್ವಿಚ್ ಗೆ ಬೆಂಬಲ ಕೊಟ್ಟಿರುವ ಕೆಲವು ಪಬ್ಲಿಷರ್ಸ್, ಡೆವಲಪರ್ಸ್ ಮತ್ತು ಮಿಡಲ್ ವೇರ್ ಜೊತೆಗಾರರ ಹೆಸರಿಲ್ಲಿದೆ: 505 ಗೇಮ್ಸ್, ಆ್ಯಕ್ಟಿ ವಿಷನ್ ಪಬ್ಲಿಷಿಂಗ್, ಆರ್ಕ್ ಸಿಸ್ಟಮ್ ವರ್ಕ್ಸ್, ಅಟ್ಲಸ್, ಆಡಿಯೋ ಕೈನೆಟಿಕ್, ಆಟೋಡೆಸ್ಕ್ ಇತ್ಯಾದಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Are you a gaming freak? If yes, then check out this latest portable gaming console by Nintendo

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X