ಇಂದು ಭಾರತದಲ್ಲಿ ಅಮೆಜಾನ್ ಟಿವಿ ಲಾಂಚ್: ಏರ್‌ಟೆಲ್-ಜಿಯೋಗೆ ಭಾರೀ ಹೊಡೆತ

It is expected that the Amazon Fire TV streaming device will be priced at Rs 1,999.to know more visit kananda.gizbot.com

Written By:

ಸದ್ಯ ಭಾರತೀಯರಲ್ಲೂ ಇಂಟರ್ನೆಟ್ ಟಿವಿ ಕುರಿತು ಆಸಕ್ತಿ ಹೆಚ್ಚುತ್ತಿದ್ದು, ಇಂಟರ್ನೆಟ್ ಬಳಕೆ ಸುಲಭವಾಗುತ್ತಿದ್ದಂತೆ ಇಂಟರ್ನೆಟ್ ನಲ್ಲಿ ವಿಡಿಯೋ ಸ್ಟ್ರಿಮಿಂಗ್ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊನ್ನೇ ಏರ್‌ಟೆಲ್ ಇಂಟರ್ನೆಟ್ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿತು, ಇದೇ ಹಿನ್ನಲೆಯಲ್ಲಿ ಏಪ್ರಿಲ್ 19ಕ್ಕೆ ಅಮೆಜಾನ್ ಭಾರತೀಯ ಮಾರುಕಟ್ಟೆಗೆ ಅಮೆಜಾನ್ ಫೈರ್ ಟಿವಿ ಲಾಂಚ್ ಮಾಡಲಿದೆ.

ಇಂದು ಭಾರತದಲ್ಲಿ ಅಮೆಜಾನ್ ಟಿವಿ ಲಾಂಚ್: ಏರ್‌ಟೆಲ್-ಜಿಯೋಗೆ ಭಾರೀ ಹೊಡೆತ

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ದೇಶದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಇದರ ಪೂರ್ಣ ಲಾಭವನ್ನು ಪಡೆಯುವ ಸಲುವಾಗಿ ಮಾರುಕಟ್ಟೆಗೆ ಅಮೆಜಾನ್ ಫೈರ್ ಟಿವಿ ಲಾಂಚ್ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅಮೆಜಾನ್ ಫೈರ್ ಟಿವಿ:

ಏಪ್ರಿಲ್ 19ಕ್ಕೆ ಅಮೆಜಾನ್ ಫೈರ್ ಟಿವಿ ಮಾರುಕಟ್ಟೆಗೆ ಬರಲಿದ್ದು, ಅಮೆಜಾನ್ ಪ್ರೈಮ್ ಗ್ರಾಹಕರಿಗೆ ರೂ.1,999ಗಳಿಗೆ ಲಭ್ಯವಿರಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇಂಟರ್‌ನೆಟ್ ಟಿವಿಗೆ ಸ್ಪರ್ಧೆ ಶುರುವಾಗಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆ ಸೇವೆಯನ್ನು ನೀಡಲಿದೆ.

ಆಪಲ್ ಟಿವಿ, ಕ್ರೋಮ್ ಕಾಸ್ಟ್‌ಗೆ ಸ್ಪರ್ಧೆ:

ಅಮೆಜಾನ್ ಫೈರ್ ಟಿವಿ ಸದ್ಯ ಮಾರುಕಟ್ಟೆಯಲ್ಲಿ ಕ್ರೋಮ್ ಕಾಸ್ಟ್ ನೇರ ಸ್ಪರ್ಧೆಯನ್ನು ನೀಡಿಲಿದೆ. ಇದಲ್ಲದೇ ಆಪಲ್ ಟಿವಿ, ಏರ್‌ಟೆಲ್ ಟಿವಿಗೂ ಸ್ಪರ್ಧೆಯನ್ನು ನೀಡಲಿದೆ.

ಅಮೆಜಾನ್ ಫೈರ್ ಟಿವಿ ವಿಶೇಷತೆ:

ಅಮೆಜಾನ್ ಫೈರ್ ಟಿವಿ ಪ್ಲಗ್ ಇನ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, USB ಮೂಲಕ ಟಿವಿ-ಸೆಟಪ್ ಬಾಕ್ಸ್ ನೊಂದಿಗೆ ಸಂಪರ್ಕ ಸಾಧಿಸಲಿದೆ. ಅಮೆಜಾನ್ ಫೈರ್ ಟಿವಿ ಪ್ರೈಮ್ ವಿಡಿಯೋ, ನೆಟ್‌ಫಿಕ್ಸ್ ಹಾಗೂ ಯೂಟೂಬ್ ಸೇರಿದಂತೆ ಹಲವು ಆನ್‌ಲೈನ್ ಸ್ಟ್ರಿಮಿಂಗ್ ಗಳು ದೊರೆಯಲಿದೆ.

ಅಮೆಜಾನ್ ಟಿವಿ ಕಾರ್ಯಚರಣೆ:

ಆಂಡ್ರಾಯ್ಡ್ ಕಾರ್ಯಚರಣೆಯಲ್ಲಿ ಕಾರ್ಯನಿರ್ವಹಿಸುವ ಅಮೆಜಾನ್ ಟಿವಿ ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದ್ದು, 1GB RAM ಹಾಗೂ 8GB ಇನ್‌ಬಿಲ್ಟ್ ಮೆಮೊರಿ, ಬ್ಲೂಟೂತ್, ವೈಫೈ ಇರಲಿದ್ದು, ವಾಯ್ಸ್ ಕಮೆಂಡ್ ಇರುವ ರಿಮೋಟ್ ದೊರೆಯಲಿದೆ.

ಎಲ್ಲಿ ದೊರೆಯಲಿದೆ.?

ಅಮೆಜಾನ್ ಫೈರ್ ಟಿವಿ ಅಮೆಜಾನ್ ಸೇರಿದಂತೆ ಕ್ರೋಮಾ ಹಾಗೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
It is expected that the Amazon Fire TV streaming device will be priced at Rs 1,999.to know more visit kananda.gizbot.com
Please Wait while comments are loading...
Opinion Poll

Social Counting